ಕಾವೇರಿ ನದಿ ವಿವಾದದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ; ಹೆಚ್​ಡಿ ಕುಮಾರಸ್ವಾಮಿ

ಮೆಟ್ಟೂರು ಡ್ಯಾಮ್​ನಲ್ಲಿ 11 ಟಿಎಂಸಿ ನೀರು ಇರುವ ಬಗ್ಗೆ ವರದಿ ಇದೆ. ಮೆಟ್ಟೂರು ಜಲಾಶಯಕ್ಕೆ 7 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ತಮಿಳುನಾಡಿನ ಮೆಟ್ಟೂರಿನಿಂದ 6500 ಕ್ಯೂಸೆಕ್ ಹೊರಹರಿವು ಇದೆ. ಕಾಂಗ್ರೆಸ್​​ ಈ ವಿಚಾರಗಳನ್ನು ಡೈವರ್ಟ್​ ಮಾಡುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹೆಚ್​​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕಾವೇರಿ ನದಿ ವಿವಾದದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ; ಹೆಚ್​ಡಿ ಕುಮಾರಸ್ವಾಮಿ
ಹೆಚ್​​ಡಿ ಕುಮಾರಸ್ವಾಮಿ
Follow us
ಕಿರಣ್​ ಹನಿಯಡ್ಕ
| Updated By: Ganapathi Sharma

Updated on: Sep 27, 2023 | 4:00 PM

ಬೆಂಗಳೂರು, ಸೆಪ್ಟೆಂಬರ್ 27: ಕಾವೇರಿ ನದಿ ವಿವಾದದ (Cauvery River Dispute) ವಿಚಾರದಲ್ಲಿ ಪ್ರಧಾನ ಮಂತ್ರಿಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಕಾವೇರಿ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಪರೋಕ್ಷವಾಗಿ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರು ಹೇಳಿದ ಮರುದಿನವೇ ಕುಮಾರಸ್ವಾಮಿ ಅವರಿಂದ ಈ ಹೇಳಿಕೆ ಮೂಡಿಬಂದಿದೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೀರು ಹಂಚಿಕೆ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸರ್ಕಾರ ನಮ್ಮ ನಾಡಿನ ಜನರ ರಕ್ಷಣೆಗೆ ಬೆಂಬಲ ಕೊಡಬೇಕು. ಕಾವೇರಿ, ಮಹದಾಯಿ, ಹೇಮಾವತಿ ರಕ್ಷಣೆಗೆ ನಾವು ಬದ್ಧರಾಗಿರಬೇಕು. ಎಲ್ಲಾ ಸಮಸ್ಯೆಗಳ ತಾರ್ಕಿಕ ಅಂತ್ಯಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ಈಗ ಸುಪ್ರೀಂಕೋರ್ಟ್​ಗೆ ಹೋಗುವುದರಿಂದ ಪರಿಹಾರ ಸಿಗಲಾರದು. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕುಳಿತು ಚರ್ಚೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಡಿಸಿಎಂ ಡಿಕೆ ಶಿವಕುಮಾರ್ ಅವರು 10,000 ಕ್ಯೂಸೆಕ್ ನೀರು ಒಳ ಹರಿವು ಇದೆ ಎಂದು ಹೇಳಿದ್ದಾರೆ. ಮೆಟ್ಟೂರು ಡ್ಯಾಮ್​ನಲ್ಲಿ 11 ಟಿಎಂಸಿ ನೀರು ಇರುವ ಬಗ್ಗೆ ವರದಿ ಇದೆ. ಮೆಟ್ಟೂರು ಜಲಾಶಯಕ್ಕೆ 7 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ತಮಿಳುನಾಡಿನ ಮೆಟ್ಟೂರಿನಿಂದ 6500 ಕ್ಯೂಸೆಕ್ ಹೊರಹರಿವು ಇದೆ. ಕಾಂಗ್ರೆಸ್​​ ಈ ವಿಚಾರಗಳನ್ನು ಡೈವರ್ಟ್​ ಮಾಡುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹೆಚ್​​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಅವತ್ತೇ ಅಮಿತ್ ಶಾ​​ ಮಾತಿಗೆ ಒಪ್ಪಿದ್ದರೆ 5 ವರ್ಷ ಸಿಎಂ ಆಗುತ್ತಿದ್ದೆ: ಶಾ ಕರೆ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ

ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಸೆಪ್ಟೆಂಬರ್ 29 ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರೆ ನೀಡಲಾಗಿರುವ ಕರ್ನಾಟಕ ಬಂದ್​ಗೆ ನಮ್ಮ ನಮ್ಮ ಬೆಂಬಲ ಇದೆ ಎಂದು ಹೆಚ್​​​ಡಿ ಕುಮಾರಸ್ವಾಮಿ ಹೇಳಿದರು. ರಾಜ್ಯ ಸರ್ಕಾರವನ್ನು ಎಚ್ಚರಿಸಲು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ ಎಂದು ಅವರು ಹೇಳಿದರು.

ದಸರಾ ಬಳಿಕ ಬಿಜೆಪಿ ಜತೆ ಸೀಟು ಹಂಚಿಕೆ ಮಾತುಕತೆ: ಹೆಚ್​​ಡಿಕೆ

ದಸರಾ ಬಳಿಕ ಬಿಜೆಪಿ, ಜೆಡಿಎಸ್ ನಡುವೆ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ. ಎಷ್ಟು ಸೀಟ್​ ಹಂಚಿಕೆ ಎಂದು ದಸರಾ ನಂತರವೇ ನಿರ್ಧಾರ ಆಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಬಿಜೆಪಿ ಜೊತೆ ಜೆಡಿಎಸ್​ ಮೈತ್ರಿ ನಿರಂತರ: ಜಿಟಿ ದೇವೆಗೌಡ

ಬಿಜೆಪಿ ಜತೆ ಜೆಡಿಎಸ್​ ಮೈತ್ರಿ ನಿರಂತರವಾಗಿರಲಿದೆ ಎಂದು ಜೆಡಿಎಸ್ ನಾಯಕ ಜಿಟಿ ದೇವೆಗೌಡ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಎರಡೂ ಪಕ್ಷದ ನಾಯಕರು ಸೇರಿ ತೀರ್ಮಾನ ತೆಗದುಕೊಂಡಿದ್ದಾರೆ. ಒಬ್ಬರಿಗೆ ಶಾಸಕ ಸ್ಥಾನಕ್ಕೆ ಟಿಕೆಟ್ ನೀಡಿದ್ರೆ ಇನ್ನೊಬ್ಬರಿಗೆ ಸಂಸದ ಸ್ಥಾನಕ್ಕೆ ಟಿಕೆಟ್ ನೀಡುತ್ತೇವೆ. ಜೆಡಿಎಸ್ ಪಕ್ಷದ ಪುನಶ್ಚೇತನ ಪರ್ವ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಿಎಂ ಇಬ್ರಾಹಿಂ ಅವರು ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ದೇವೇಗೌಡರಿಗೆ ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಕಾಳಜಿ ಇದೆ. ಜೆಡಿಎಸ್​ ಪಕ್ಷ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ