ಕಲಬುರಗಿ, (ಡಿಸೆಂಬರ್ 24): ಕರ್ನಾಟಕದಲ್ಲಿ ಹಿಜಾಬ್ (Hijab) ನಿಷೇಧ ವಾಪಸ್ ತೆಗೆದುಕೊಳ್ಳುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿರುವ ಬೆನ್ನಲ್ಲೇ ಹಿಂದೂ ಹಾಗೂ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಮಾತನಾಡಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಸಿದ್ದರಾಮಯ್ಯನವರಿಗೆ ಅರಿವು ಮರಿವು ಶುರುವಾಗಿದೆ. ಮೊನ್ನೆ ಹಿಜಾಬ್ ನಿಷೇಧ ವಾಪಸ್ ಅಂದ್ರು ನಿನ್ನೆ ಬೇರೆ ಮಾತನಾಡಿದ್ದಾರೆ. ಹಿಜಾಬ್ ನಿಷೇಧ ವಾಪಸ್ ಆದ್ರೆ ನಾನೇ ಕೇಸರಿ ಶಾಲಿಗೆ ಕರೆ ನೀಡುತ್ತೇನೆ. ನಮ್ಮ ಹುಡುಗರಿಗೆ ಕೇಸರಿ ಶಾಲು ಹಾಕಿಕೊಂಡು ಶಾಲೆ-ಕಾಲೇಜುಗೆ ಹೋಗಲು ಹೇಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
kಲಬುರಗಿಯಲ್ಲಿಂದು ಮಾತನಾಡಿರುವ ಯತ್ನಾಳ್, ಸಿದ್ದರಾಮಯ್ಯ ಮತ್ತ ಮುಸ್ಲಿಂ ವೋಟ್ ಮೇಲೆ ಗೆಲ್ಲಬೇಕು ಎಂದಿದ್ದಾರೆ. ಅದು ಆಗೋಲ್ಲ,ತುಷ್ಟಿಕರ ಮಾಡಿದ್ರೆ ಬಿಜೆಪಿ ಬರುತ್ತೆ ಎಂದು ಅವರಿಗೂ ಗೊತ್ತು. ಅದಕ್ಕೆ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲಿ ಎಂದು ಅವರು ಹೀಗೆ ಮತಾನಾಡುತ್ತಿದ್ದಾರೆ. ರಾಹುಲ್ ಗಾಂಧಿ ಹುಚ್ಚ ಪ್ರಧಾನಿಯಾದ್ರೆ ಅವರ(ಸಿದ್ದರಾಮಯ್ಯ) ಖುರ್ಚಿಗೆ ಕಂಟಕ ಇದೆ. ಅವರ(ರಾಹುಲ್ ಗಾಂಧಿ) ಇನ್ನೊಂದು ಎತ್ತು ರೆಡಿಯಿದೆ. ಅದಕ್ಕೆ ಅವರಿಗೂ ಮೋದಿ ಪ್ರಧಾನಿಯಾದ್ರೆ ಒಳೆಯದು ಎನ್ನುವ ಭಾವನೆಯಿದೆ.
ಇದನ್ನೂ ಓದಿ: Hijab Row: ಕರ್ನಾಟಕದಲ್ಲಿ ಹಿಜಾಬ್ ನಿಷೇಧ ವಾಪಸ್, ಸಿದ್ದರಾಮಯ್ಯ ಸ್ಪಷ್ಟನೆ
ಇನ್ನೊಂದೆಡೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಅವರು ಮಂಡ್ಯದಲ್ಲಿಂದು ಮಾತನಾಡಿ, ಹಿಜಾಬ್ ನಿಷೇಧ ವಾಪಾಸ್ ಪಡೆದರೇ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಕೂಡ ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ಇಟ್ಟಿದ್ದಾರೆ. ಯಾರ ಅಪ್ಪನ ದುಡ್ಡು ಅದು.ಹಿಜಾಬ್ ಜಾರಿ ತರುತ್ತೇವೆ ಎಂದಿದ್ದಾರೆ. ಮತ್ತೆ ಪ್ರತ್ಯೇಕತೆಯ ಬೀಜ ಬಿತ್ತುತ್ತಿರಾ ಎಂದು ಪ್ರಶ್ನಿಸಿರುವ ಅವರು, ಶಾಲಾ ಮಕ್ಕಳಲ್ಲಿ ಯಾಕೆ ಪ್ರತ್ಯೇಕತೆಯ ಬೀಜ ಬಿತ್ತುತ್ತಿರಾ. ಹಿಜಾಬ್ ತರುವ ತಾಕತ್ತು ಇದೀಯಾ? ಇದ್ದರೇ ತರುವ ಪ್ರಯತ್ನ ಮಾಡಿ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊನ್ನೇ ಮೈಸೂರು ಜಿಲ್ಲಾ ಪ್ರವಾಸದ ವೇಳೆ ಹಿಜಾಬ್ ನಿಷೇಧ ಆದೇಶವನ್ನು ವಾಪಸ್ ಪಡೆಯುವುದಾಗಿ ಹೇಳಿದ್ದರು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಿಜಾಬ್ ನಿಷೇಧವನ್ನು ವಾಪಸ್ ಪಡೆಯಲು ಸೂಚನೆ ನೀಡಿದ್ದೇನೆ. ಮೋದಿ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ಹಿಜಾಬ್ ನಿಷೇಧವನ್ನು ವಾಪಾಸ್ ಪಡೆಯಲು ಹೇಳಿದ್ದೇನೆ ಎಂದು ಹೇಳಿದ್ದರು.