ನಾನೀಗ ಸರ್ವ ಸ್ವತಂತ್ರ, ಲೋಕಸಭೆ ಚುನಾವಣೆ ಬಳಿಕ ಬದಲಾವಣೆಯಾಗುತ್ತೆ: ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಕರ್ನಾಟಕ ಬಿಜೆಪಿಯ ವಿವಿಧ ಘಟಕಟಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದ್ರೆ, ಈ ನೇಮಕಾತಿಯಲ್ಲಿ ಬಿಎಸ್ ಯಡಿಯೂರಪ್ಪನವರ ಬೆಂಬಲಿಗರಿಗೆ ಮಣೆ ಹಾಕಲಾಗಿದೆ. ಹೀಗಾಗಿ ಮತ್ತೊಂದು ಗುಂಪಿಗೆ ಆಕ್ರೋಶಕ್ಕೆ ಕಾರಣವಾಗಿದೆ. ಇ್ನನು ಈ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಲ್ ಮಾತನಾಡಿ, ಲೋಕಸಭಾ ಚುನಾವಣೆ ಬಳಿಕ ಎಲ್ಲವೂ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಲಬುರಗಿ, (ಡಿಸೆಂಬರ್ 24): ಬಿವೈ ವಿಜಯೇಂದ್ರ (BY Vijayendra) ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಇದೀಗ ಕರ್ನಾಟಕ ಬಿಜೆಪಿ(Karnataka BJP) ಪದಾಧಿಕಾರಿಗಳ ನೇಮಕಾತಿ ಸಹ ಆಗಿದೆ. ವಿವಿಧ ಮೋರ್ಚ, ರಾಜ್ಯ ಉಪಾಧ್ಯಕ್ಷ, ರಾಜ್ಯ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೇಲುಗೈ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಬಣ ಅಸಮಾಧಾನಗೊಂಡಿದೆ. ಅದರಲ್ಲೂ ಮೊದಲಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದ್ದು, 2024ರ ವರೆಗೆ ತಡೆಯಿರಿ. ಆಮೇಲೆ ಎಲ್ಲವೂ ಬದಲಾವಣೆಯಾಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಯತ್ನಾಳ್, ಅವರು ದೊಡ್ಡ ದೊಡ್ಡ ಹುದ್ದೆ ತೆಗೆದುಕೊಂಡಿದ್ದಾರೆ. ಉತ್ತರ ಕರ್ನಾಟಕ ಇವು ಆಲ್ತು ಪಾಲ್ತು ನೀಡಿದ್ದಾರೆ. ಪರಿಷತ್ ವಿಪಕ್ಷ ನಾಯಕಸ್ಥಾನವೊಂದು ಎನ್ ರವಿಕುಮಾರ್ ಗೆ ನೀಡುತ್ತಾರೆ. ರವಿಕುಮಾರ್ ಯಡಿಯೂರಪ್ಪ ಶಿಷ್ಯ ಅಲ್ವಾ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಅವಾಗ ಬದಲಾವಣೆಯಾಗುತ್ತೆ. 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಎಂದಿದ್ದಾರೆ. ಒಂದು ಕಡಿಮೆಯಾದ್ರು ಮುಂದೆ ರಾಜಸ್ಥಾನ, ಮಧ್ಯಪ್ರದೇಶದಲ್ಲಾಗಿಲ್ವಾ ಹಾಗಗುತ್ತೆ. ಎಲ್ಲಾ ಇದು ಮೀಲಾಪಿ ಕುಸ್ತಿಯಿದೆ ಎಂದು ಹೇಳಿದರು.
ಶಿಕಾರಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಠೇವಣಿ ಹೋಗುತ್ತೆ. ಕನಕಪುರದಲ್ಲಿ ಅಶೋಕ ಠೇವಣಿ ಹೊಗುತ್ತೆ ಅಂದ್ರೆ ಏನ್ ಅರ್ಥ. ಪಾಪ ಸೋಮಣ್ಣ ಬೆಂಗಳೂರಲ್ಲಿ ಗೆಲ್ತಿದ್ರು,ಅವರನ್ನೆ ಎರಡೂ ಕಡೆ ನಿಲ್ಲಿಸಿ ಸೋಲಿಸಿದ್ರು. ನಾನ್ ಏನ್ ಮಾತನಾಡದ್ರು ನಂಗೆ ಯಾರು ನೋಟಿಸ್ ಗಿಟಿಸ್ ಕೊಡಲ್ಲ. ನಾನೀಗ ಸರ್ವ ಸ್ವತಂತ್ರ ಇದ್ದು, ಆಲ್ ಪಾರ್ಟಿ ವಿಪಕ್ಷ ನಾಯಕ ಎಂದು ಅಚ್ಚರಿ ಹೇಳಿಕೆ ನೀಡಿದರು.
ನಾನು ಹೀರೋ ಅಲ್ಲ, ನಾನು ಯಾವತ್ತಿದ್ದರೂ ವಿಲನ್. ವಿಲನ್ ಇದ್ರೇನೇ ಹಿರೋಗೆ ಕಿಮ್ಮತ್ತು ಇರುತ್ತೆ ಇಲ್ಲದಿದ್ರೆ ಇಲ್ಲ. ವಿಲನ್ ಇಲ್ಲದಿದ್ರೆ ಹೀರೋ ಯಾರ ಜೋಡಿ ಫೈಟ್ ಮಾಡುತ್ತಾನೆ. ಅಂಬರೀಷ್ ಸಹ ವಿಲನ್ ಇದ್ರು ನಂತರ ಹೀರೋ ಆದರು. ಅದೇ ತರಹ ನಾನು ಆಮೇಲೆ ಹೀರೋ ಆಗಬಹುದು. ಎಲ್ಲದಕ್ಕೂ ಒಂದು ಅಂತ್ಯ ಅಂತ ಇರುತ್ತೆ ಎಂದು ಹೇಳುವ ಮೂಲಕ ಬಿಎಸ್ ಯಡುಯೂರಪ್ಪ ಬಣಕ್ಕೆ ಟಾಂಗ್ ಕೊಟ್ಟರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ