ಹೊಸಕೋಟೆ: ಕೈ ಪಕ್ಷದಲ್ಲಿ ಭಿನ್ನಮತ ಸ್ಫೋಟ; ಶಾಸಕ ಶರತ್ ಬಚ್ಚೇಗೌಡಗೆ ಟಿಕೆಟ್ ನೀಡದಂತೆ ಮುಖಂಡರ ಒತ್ತಾಯ

| Updated By: Rakesh Nayak Manchi

Updated on: Dec 09, 2022 | 10:59 AM

ಮೂಲ ಕಾಂಗ್ರೆಸ್​​ ನಾಯಕರನ್ನು ಬಿಟ್ಟು ಕಚೇರಿ ಉದ್ಘಾಟಿಸಿದ್ದ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದಂತೆ ಒತ್ತಾಯಿಸಲಾಗುತ್ತಿದೆ.

ಹೊಸಕೋಟೆ: ಕೈ ಪಕ್ಷದಲ್ಲಿ ಭಿನ್ನಮತ ಸ್ಫೋಟ; ಶಾಸಕ ಶರತ್ ಬಚ್ಚೇಗೌಡಗೆ ಟಿಕೆಟ್ ನೀಡದಂತೆ ಮುಖಂಡರ ಒತ್ತಾಯ
ಹೊಸಕೋಟೆ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರ ನಡುವೆ ವಾಗ್ವಾದ
Follow us on

ಹೊಸಕೋಟೆ: ತಾಲೂಕಿನಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪಕ್ಷದ ಸಭೆ ಕರೆಯಲಾಗಿತ್ತು. ಈ ವೇಳೆ ಮೂಲ ಕಾಂಗ್ರೆಸ್​​ ನಾಯಕರನ್ನು (Hosakote Congress Leaders) ಬಿಟ್ಟು ಕಚೇರಿ ಉದ್ಘಾಟಿಸಿದ್ದ (Congress Office Inauguration) ಶಾಸಕ ಶರತ್ ಬಚ್ಚೇಗೌಡ (MLA Sharath Bache Gowda) ಮತ್ತು ಅವರ ಬೆಂಬಲಿಗರ ವಿರುದ್ಧ ಮೂಲ ಕಾಂಗ್ರೆಸಿಗರು ಆಕ್ರೋಶ ಹೊರಹಾಕಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಮುಂಡರು ಮತ್ತು ಕಾರ್ಯಕರ್ತರ ನಡುವೆ ವಾಗ್ಯುದ್ಧ ನಡೆದಿದ್ದು, ಕೆಪಿಸಿಸಿ ಕಾರ್ಯದರ್ಶಿ ಮುನಿಶಾಮಣ್ಣ (Minishamanna) ವಿರುದ್ಧವೂ ಆಕ್ರೋಶ ವ್ಯಕ್ತವಾದವು. ಹೀಗಾಗಿ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸುವಲ್ಲಿ ಅಸಾಹಯಕರಾದರು.

ಮೂಲ ಕಾಂಗ್ರೆಸ್​​ ನಾಯಕರನ್ನು ಬಿಟ್ಟು ಕಚೇರಿ ಉದ್ಘಾಟಿಸಿದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಸಿಡಿದೆದ್ದಿದ್ದು, ಮೂಲ ಕಾಂಗ್ರೆಸ್​​ ನಾಯಕರನ್ನು ಅವರು ಕಡೆಗಣಿಸಿ ತನ್ನ ಬೆಂಬಲಿಗರಿಗೆ ಮನ್ನಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಭೆಯಲ್ಲಿ ಈ ಬಾರಿ ಶರತ್​ಗೆ ಟಿಕೆಟ್ ಕೊಡದಂತೆ ಮುಖಂಡರು ಒತ್ತಾಯಿಸಿದರು. ಈ ವೇಳೆ ಬಚ್ಚೇಗೌಡ ಬೆಂಬಲಿಗರು ಮತ್ತು ಮೂಲ ಕಾಂಗ್ರೆಸ್ಸಿಗರ ನಡುವೆ ಕಿತ್ತಾಟ ನಡೆದಿದ್ದಲ್ಲದೆ ಚೇರ್ ಮೆಲಕ್ಕೆತ್ತಿ ಪರಸ್ಪರ ಕೈಕೈ ಮಿಲಾಯಿಸಿಕೊಳ್ಳಲು ಮುಂದಾದರು.

ಇದನ್ನೂ ಓದಿ: Karnataka Poll 2023 ಬಿಜೆಪಿ-ಕಾಂಗ್ರೆಸ್​ನಿಂದ ತಲಾ ಎರಡೆರಡು ಸರ್ವೆ: ಯಾರಿಗೆ ಎಷ್ಟು ಸೀಟು? ಇಲ್ಲಿದೆ ಸರ್ವೆ ವರದಿಯ ಕಂಪ್ಲೀಟ್ ಮಾಹಿತಿ

ಕೆಪಿಸಿಸಿ ಕಾರ್ಯದರ್ಶಿ ಮುನಿಶಾಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ವಾಗ್ವಾದ, ಕಿತ್ತಾಟ ನಡೆದಿದೆ. ಇದೇ ವೇಳೆ ಶಾಸಕ ಶರತ್ ವಿರುದ್ಧ ಸಿಡಿದೆದ್ದ ಮೂಲ ಕಾಂಗ್ರೆಸ್ಸಿಗರು ಈ ಬಾರಿಯ ಚುನಾವಣೆಗೆ ಶರತ್​ಗೆ ಟಿಕೆಟ್ ನೀಡದೆ ಪ್ರಸಾದ್ ಅಥವಾ ಮುನಿಶಾಮಣ್ಣ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ಅಲ್ಲದೆ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ ಬೆಳೆಸಿದವರನ್ನ ಗುರುತಿಸುವಂತೆ ಒತ್ತಾಯಿಸಿದರು.

ಹೊಸಕೋಟೆ ವಿಧಾನಸಭೆ ಚುನಾವಣೆಯಲ್ಲಿ ಹೊಸ್ತಿಲಲ್ಲೇ ಬಿಜೆಪಿಯಲ್ಲಿ ಮೂಲ ಹಾಗೂ ವಲಸಿಗ ಫೈಟ್ ಶುರುವಾಗಿದೆ. ಈ ನಡುವೆ ಕಾಂಗ್ರೆಸ್​ನಲ್ಲೂ ಸಹ ಅದೇ ಗುದ್ದಾಟ ಆರಂಭವಾಗಿದೆ. ಬಿಜೆಪಿಯಲ್ಲಿ ಎಂಟಿಬಿ ನಾಗರಾಜ್ ಹಾಗೂ ಮೂಲ ಬಿಜೆಪಿ ನಾಯಕರ ಮಧ್ಯೆ ತಿಕ್ಕಾಟ ನಡೆಯುತ್ತಿದ್ದರೆ, ಇತ್ತ ಕಾಂಗ್ರೆಸ್​ನಲ್ಲಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಮೂಲ ಕೈ ನಾಯಕರ ನಡುವೆ ಫೈಟ್ ನಡೆಯುತ್ತಿದೆ. ಈ ಹಿಂದೆ ಪದಾಧಿಕಾರಿಗಳ ಆಯ್ಕೆಯಲ್ಲಿ ಶರತ್ ಬಚ್ಚೇಗೌಡ ಅವರು ಮೂಲ ಕಾಂಗ್ರೆಸ್ಸಿಗರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

ಶರತ್ ಬಚ್ಚೇಗೌಡ ವಿರುದ್ಧ ಸಿಡಿದೆದ್ದ ಮುನಿಶಾಮಣ್ಣ ಅವರು ಬೆಂಗಳೂರು ಗ್ರಾ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ಹೊಸಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ  ಬಿಜೆಪಿ ಸಂಸದ ಬಿನ್ ಬಚ್ಚೆಗೌಡ ಪುತ್ರ   ಶರತ್ ಬಚ್ಚೇಗೌಡ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಬಳಿಕ ಕಾಂಗ್ರೆಸ್​ಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಗೆ ಕಾಂಗ್ರೆಸ್​ನಿಂದಲೇ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಆದ್ರೆ, ಇದಕ್ಕೆ ಮೂಲ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದಿದ್ದೇವೆ. ಆದ್ರೆ, ಈಗ ಬಂದವರಿಗೆ ಮಣೆ ಹಾಕಿದ್ರೆ ಹೇಗೆ ಎನ್ನುವುದು ಮೂಲ ಕಾಂಗ್ರೆಸ್ ನಾಯಕರ ಮಾತು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:55 am, Fri, 9 December 22