Karnataka Poll 2023 ಬಿಜೆಪಿ-ಕಾಂಗ್ರೆಸ್​ನಿಂದ ತಲಾ ಎರಡೆರಡು ಸರ್ವೆ: ಯಾರಿಗೆ ಎಷ್ಟು ಸೀಟು? ಇಲ್ಲಿದೆ ಸರ್ವೆ ವರದಿಯ ಕಂಪ್ಲೀಟ್ ಮಾಹಿತಿ

ಕರ್ನಾಟಕದ ಗದ್ದುಗೆಗಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಈಗಾಗಲೇ ಬಿಗ್​ ಫೈಟ್ ಶುರುವಾಗಿದೆ. ಹಾಗಾಗಿ ಜನರ ನಾಡಿಮಿಡಿತ ಅರಿಯಲು ಎರಡು ಪಾರ್ಟಿಗಳು ನಿರ್ಧರಿಸಿದ್ದು, ಆಂತರಿಕ ಸರ್ವೆ ಮಾಡಿಸಿವೆ. ಹಾಗಾದ್ರೆ ಸರ್ವೆಯಲ್ಲಿ ಬಿಜೆಪಿ ಗೆಲ್ಲುವ ಸೀಟ್​ ಎಷ್ಟು? ಕಾಂಗ್ರೆಸ್​ಗೆ ಎಷ್ಟು ಸ್ಥಾನ ಸಿಗಲಿದೆ. ಆಂತರಿಕ ಸರ್ವೆಗಳ ವರದಿ ಇಲ್ಲಿದೆ.

Karnataka Poll 2023 ಬಿಜೆಪಿ-ಕಾಂಗ್ರೆಸ್​ನಿಂದ ತಲಾ ಎರಡೆರಡು ಸರ್ವೆ: ಯಾರಿಗೆ ಎಷ್ಟು ಸೀಟು? ಇಲ್ಲಿದೆ ಸರ್ವೆ ವರದಿಯ ಕಂಪ್ಲೀಟ್ ಮಾಹಿತಿ
ಬಿಜೆಪಿ ಮತ್ತು ಕಾಂಗ್ರೆಸ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 08, 2022 | 10:40 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದ್ದು, ರಣಕಣ ರಂಗೇರುತ್ತಿದೆ. ಆಡಳಿತಾರೂಢ ಬಿಜೆಪಿ(BJP) ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಕಸರತ್ತು ಮಾಡುತ್ತಿದೆ. ಹಿಂದುತ್ವದ ಅಸ್ತ್ರವನ್ನು ಮತ್ತಷ್ಟು ಪ್ರಬಲಗೊಳ್ತಿಸ್ತಿದೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿ ದಲಿತರ ಮತಬುಟ್ಟಿಗೂ ಕೈ ಹಾಕಿದೆ. ಜೊತೆಗೆ ಅಧಿಕಾರ ಹಿಡಿಯಲು ಮೋದಿ ಅಲೆ ಎಂಬ ದೊಡ್ಡ ಲೆಕ್ಕಾಚಾರ ಹಾಕಿಕೊಂಡಿದೆ. ಆದ್ರೆ ಸ್ಥಳೀಯ ಪರಿಸ್ಥಿತಿಗಳು ಒಂದಷ್ಟು ಒಳ ಏಟು ನೀಡಬಹುದಾದ ಆತಂಕ ಕಾಡುತ್ತಿದ್ದು, ಕೇಸರಿ ಪಾಳಯ ಆಂತರಿಕ ಸರ್ವೆ (election survey) ಮಾಡಿಸಿದೆ.

ಇದನ್ನೂ ಓದಿ: ಗುಜರಾತ್, ಹಿಮಾಚಲ್ ಆಯ್ತು ಈಗ ಕರ್ನಾಟಕದಲ್ಲಿ ಗೆಲುವಿನ ಕುದುರೆ ಓಡಿಸಲು ಮೋದಿ-ಶಾ ತಂತ್ರ, ಕಟೀಲ್ ಜತೆ ಮಹತ್ವದ ಚರ್ಚೆ

ಎರಡು ಸರ್ವೆ ಮಾಡಿಸಿರುವ ಕೇಸರಿ ಪಾಳಯ

ರಾಜ್ಯದ ಜನರ ನಾಡಿಮಿಡಿತ ಅರಿಯಲ್ಲು ಕೇಸರಿ ಪಾಳಯ ರಾಜ್ಯದಲ್ಲಿ ಎರಡು ಸರ್ವೆ ಮಾಡಿಸಿದೆ. ರಾಜ ಬಿಜೆಪಿ ಘಟಕದಿಂದ ಒಂದು ಆಂತರಿಕ ಸರ್ವೆಯಾಗಿದ್ರೆ , ಬಿಜೆಪಿ ಹೈಕಮಾಂಡ್‌ನಿಂದ ಮತ್ತೊಂದು ಆಂತರಿಕ ಸರ್ವೆಯಾಗಿದೆ. ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ ತುಂಬಿದ್ದಾಗ ಅಂದ್ರೆ ಮೇ ಆರಂಭದಲ್ಲಿ ಬಿಜೆಪಿ ಮೊದಲ ಸರ್ವೆ ಮಾಡಿಸಿದೆ. ಮೊದಲ ಸರ್ವೆಯಲ್ಲಿ ಬಿಜೆಪಿಗೆ 80 ರಿಂದ 85 ಸ್ಥಾನಗಳು ಲಭಿಸಿವೆ. ಇನ್ನು ಜನಸಂಕಲ್ಪಕ್ಕೂ ಮುನ್ನವೇ 2ನೇ ಸರ್ವೆ ಮಾಡಿಸಿದ ಬಿಜೆಪಿಗೆ, 90 ರಿಂದ 98 ಸ್ಥಾನಗಳು ಸಿಕ್ಕಿವೆ. ಈ ಎರಡು ಸರ್ವೆಯ ನಂಬರ್​ಗಳಲ್ಲಿ ಕೊಂಚ ವ್ಯತ್ಯಾಸವಾಗಿದ್ದು, ಎರಡೂ ಸರ್ವೆಗಳಲ್ಲೂ ಬಿಜೆಪಿ 100ಸ್ಥಾನಗಳನ್ನು ದಾಟಿಲ್ಲ. ಹೀಗಾಗಿ ಪಕ್ಷ ಬಲವರ್ಧನೆಗೆ ಕೇಸರಿ ಪಾಳಯ ಮುಂದಾಗಿದೆ. ಆದ್ರೆ ಅಧಿಕೃತ ಸರ್ವೆಗಳ ಬಗ್ಗೆ ಮಾಹಿತಿ ನೀಡದ ಬಿಜೆಪಿ, ಸರ್ವೆ, ಸ್ಥಾನಗಳ ಬಗ್ಗೆಯೂ ಸ್ಪಷ್ಟನೆ ನೀಡಿಲ್ಲ.

ಕಾಂಗ್ರೆಸ್‌ನ ಆಂತರಿಕ ಸರ್ವೆಯಲ್ಲಿರೋ ರಿಪೋರ್ಟ್ ಏನು?

ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್​ನಿಂದಲೂ ಮೆಗಾ ಸರ್ವೆ ನಡೆದಿದೆ. ಕೆಟಗೆರಿ ಪ್ರಕಾರ ಸರ್ವೆ ಮಾಡಿಸಿರುವ ಕಾಂಗ್ರೆಸ್, ಎ,ಬಿ,ಸಿ ಅಂತಾ ಮೂರು ಕೆಟಗೆರಿಗಳನ್ನ ಮಾಡಿದೆ. ರಾಜ್ಯ ಕಾಂಗ್ರೆಸ್ ಈಗಾಗಲೇ ಕಳೆದ ನಾಲ್ಕು ತಿಂಗಳಲ್ಲಿ ಎರಡು ಸರ್ವೆಗಳನ್ನ ಮಾಡಿಸಿದೆ. ಒಂದು ಸರ್ವೆಯಲ್ಲಿ 98 ಸ್ಥಾನ, ಮತ್ತೊಂದು ಸರ್ವೆಯಲ್ಲಿ 106 ಸೀಟ್‌ಗಳು ಬಂದಿವೆ ಎನ್ನಲಾಗ್ತಿದೆ. ಆದರೆ ಕೆಪಿಸಿಸಿ ಮಾತ್ರ ಇದಕ್ಕೆ ಅಧಿಕೃತ ಮುದ್ರೆ ಒತ್ತಿಲ್ಲ. ಆದ್ರೆ ಕೈ ಪಡೆ ಡಿ.ಕೆ.ಶಿವಕುಮಾರ್ ಕುಮಾರ್, ಸಿದ್ದರಾಮಯ್ಯ, ಎಂ.ಬಿ ಪಾಟೀಲ್ ಸೇರಿದಂತೆ ತಮ್ಮ ಸ್ವಂತ ಸಾಮರ್ಥ್ಯ ದ ಮೇಲೆ ಗೆಲ್ಲಬಲ್ಲ 55ಅಭ್ಯರ್ಥಿಗಳನ್ನ ಗುರುತಿಸಿದ್ದು, ಎ ಹಂತದ ಸರ್ವೆಯಲ್ಲಿ 55 ಮಂದಿ ಗೆಲುವಿನ ಬಗ್ಗೆ ಮಾಹಿತಿ ಕಲೆಹಾಕಿದೆ. ಅಂದಹಾಗೆ ಗೆಲ್ಲುವ ಎ ಕೆಟಗೆರಿಯ 55 ಅಭ್ಯರ್ಥಿಗಳು, ಬಿ ಕ್ಯಾಟಗರಿಯ 80 ಕ್ಷೇತ್ರಗಳನ್ನು ಆಧರಿಸಿ, 135 ಸ್ಥಾನಗಳನ್ನ ಟಾರ್ಗೆಟ್‌ ಇಟ್ಟುಕೊಂಡು, ಶ್ರಮಪಟ್ಟರೆ ಗೆಲ್ಲಬಹುದೆಂದು ಸರ್ವೆಯಲ್ಲಿ ಬಹಿರಂಗವಾಗಿದೆ.

ಇದನ್ನೂ ಓದಿ: ಕೈ ನಾಯಕರ ಹಳೇ ಕೇಸ್ ಕೆದಕಿದ ಬಿಜೆಪಿ, ಈ 16 ಪ್ರಶ್ನೆಗಳಿಗೆ ಉತ್ತರಿಸುವಂತೆ ಕಾಂಗ್ರೆಸ್​ಗೆ​ ಸವಾಲ್​

ಇನ್ನುಳಿದಂತೆ 80 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಈ ಕ್ಷೇತ್ರಗಳನ್ನ ಬಿ ಕ್ಯಾಟಗರಿ ಎಂದು ಹೆಸರಿಟ್ಟಿದೆ. ಸೋಲಬಹುದಾದ ಕ್ಷೇತ್ರಗಳಿಗೆ ಸಿ ಎಂದು ಕೋಡ್ ನೀಡಿದೆ. ಇನ್ನೂ ಸಿ ಕ್ಷೇತ್ರಗಳಲ್ಲಿ ಹಣ ಬಲದ ಮೇಲೆ ಗೆಲ್ಲುವ ಕುದುರೆಗೆ ಮಣೆ ಹಾಕುವ ಸಾಧ್ಯತೆ ಇದೆ.‌ ಇದೆಲ್ಲದರ ನಡುವೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಫಲಿತಾಂಶ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನ ಹೊಸದಾಗಿ ಸರ್ವೆ ಮಾಡಲಿದೆ. ಅಲ್ಲದೇ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಬಳಿಕ ಹಾಗೂ ಒಳ ಮೀಸಲಾತಿ ಜಾರಿ ಮಾಡಿದರೆ ಆಗಬಹುದಾದ ಪರಿಣಾಮಗಳ ಲೆಕ್ಕಾಚಾರ ಬಗ್ಗೆ ಮತ್ತೊಮ್ಮೆ ಸರ್ವೆ ಮಾಡಲು ಕೈ ಪಡೆ ಲೆಕ್ಕ ಹಾಕುತ್ತಿದೆ‌.

ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಆಂತರಿಕ ಸರ್ವೆ ಮಾಡಿದ್ದು ನಮ್ಮ ಪಕ್ಷದ್ದೆ ಗೆಲುವು ಎಂದು ದಾಪುಗಾಲು ಹಾಕುತ್ತಿವೆ. ಆದ್ರೂ ಒಂದು ಕಡೆ ಬಿಜೆಪಿಗೆ ಸ್ಥಳೀಯ ಪರಿಸ್ಥಿತಿಗಳು ಒಂದಷ್ಟು ಒಳ ಏಟು ನೀಡಬಹುದಾದ ಆತಂಕ ಕಾಡುತ್ತಿದ್ದರೆ, ಕಾಂಗ್ರೆಸ್, ಗುಜರಾತ್ ಫಲಿತಾಂಶದ ಎಫೆಕ್ಟ್, ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದಿಂದಾಗುವ ಪರಿಣಾಮದಿಂದ ಏನಾದ್ರೂ ವ್ಯತ್ಯಾಸವಾಗುತ್ತಾ ಅನ್ನೋ ಆತಂಕದಿಂದ ಮತ್ತೊಮ್ಮೆ ಸರ್ವೆಯಲ್ಲಿ ತೊಡಗಲಿದೆ.

ಒಟ್ಟಿನಲ್ಲಿ ಮೋದಿ ಹೆಸರಿನಿಂದಲೇ ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುತ್ತಾ.. ಆಡಳಿತ ವಿರೋಧಿ ಅಲೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುತ್ತಾ. ಇವೆರಡರ ನಡುವೆ ಜೆಡಿಎಸ್ ಯಾವ ರೀತಿ ಮೋಡಿ ಮಾಡುತ್ತೆ ಅನ್ನೋದನ್ನು ಕಾಲವೇ ಉತ್ತರಿಸಬೇಕಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್