ಒಳ ಮೀಸಲಾತಿ ಚುನಾವಣಾ ಗಿಮಿಕ್‌ ಅಲ್ಲದೇ ಬೇರೆ ಏನೂ ಇಲ್ಲ: ಡಾ ಜಿ ಪರಮೇಶ್ವರ್‌

|

Updated on: Mar 25, 2023 | 9:06 PM

ಒಳ ಮೀಸಲಾತಿ ಚುನಾವಣಾ ಗಿಮಿಕ್‌ ಅಲ್ಲದೇ ಬೇರೆ ಏನೂ ಇಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕಿಡಿಕಾರಿದ್ದಾರೆ.

ಒಳ ಮೀಸಲಾತಿ ಚುನಾವಣಾ ಗಿಮಿಕ್‌ ಅಲ್ಲದೇ ಬೇರೆ ಏನೂ ಇಲ್ಲ: ಡಾ ಜಿ ಪರಮೇಶ್ವರ್‌
ಡಾ.ಜಿ.ಪರಮೇಶ್ವರ್
Follow us on

ತುಮಕೂರು: ಹಲವು ವರ್ಷಗಳಿಂದಲೂ ಒಳ ಮೀಸಲಾತಿ ಬಗ್ಗೆ ಬೇಡಿಕೆ ಇತ್ತು. 4 ವರ್ಷದಿಂದ ನಿರ್ಧಾರ ಕೈಗೊಂಡಿರಲಿಲ್ಲ. ಜಾರಿಯಾಗದಿರಲಿ ಅಂತಾ ಕೊನೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ಚುನಾವಣಾ ಗಿಮಿಕ್‌ ಅಲ್ಲದೇ ಬೇರೆ ಏನೂ ಇಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ (Dr G Parameshwara) ಹೇಳಿದರು. ಜಿಲ್ಲೆಯ ಕೊರಟಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಬೇಡಿಕೆ ನಮ್ಮ ಸರ್ಕಾರ, ಸಮ್ಮಿಶ್ರ ಸರ್ಕಾರ, ಈಗಿನ ಸರ್ಕಾರದ ಆರಂಭದಲ್ಲೂ‌ ಇತ್ತು. ಒಳಮೀಸಲಾತಿಯ ಸದಾಶಿವ ಆಯೋಗದ ವರದಿ ಸರ್ಕಾರದಲ್ಲಿ ಇದ್ದದ್ದು ನಿಜ. ಇದನ್ನ ನಾನು ಸ್ವಾಗತಿಸಿದ್ರೂ ಇದೊಂದು ಚುನಾವಣಾ ಗಿಮಿಕ್​ ಎಂದರು. ಇದನ್ನ ಕಾನೂನಾತ್ಮಕವಾಗಿ ನೋಡುವುದಾದರೆ, ಒಳಮೀಸಲಾತಿಯನ್ನ ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತಾರೆ ಗೊತ್ತಿಲ್ಲಾ. ಅದು ಮುಂದೆ ಬರುವ ದಿನಗಳಲ್ಲಿ ತೀರ್ಮಾನ ಆಗುತ್ತೆ ಎಂದು ಹೇಳಿದರು.

ಊಹಾಪೋಹಗಳಿಗೆ ತೆರೆ ಬಿದ್ದಿದೆ: ಡಾ.ಪರಮೇಶ್ವರ್‌

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ನನಗೂ ಕೂಡ ಕೊರಟಗೆರೆ ಟಿಕೆಟ್ ಕೊಟ್ಟಿದ್ದಾರೆ. ಬಹಳ ಜನರಿಗೆ ಪರಮೇಶ್ವರ್ ಕೊರಟಗೆರೆ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುತ್ತಾರೆ ಅಂತಾ ಇತ್ತು. ಆ ಎಲ್ಲದಕ್ಕೂ ಇಂದು ತೆರೆ ಬಿದ್ದಿದೆ. ನಾನು ಮೊದಲಿಂದಲೂ‌ ಇಲ್ಲೇ‌ ನಿಲ್ಲುತ್ತೇನೆ ಅಂತಾ ಹೇಳಿಕೊಂಡು ಬಂದಿದ್ದೆ. ಆದರೂ‌ ಬಹಳ ಜನಕ್ಕೆ ಅನುಮಾನ‌ ಇತ್ತು. ಬೆಂಗಳೂರಿಗೆ ಬನ್ನಿ ಅಂತಾ ಪ್ರಕಟಣೆ ಮಾಡುತ್ತಿದ್ದರು. ಇವತ್ತು ಅದಕ್ಕೆ ತೆರೆ ಬಿದ್ದಿದೆ ಎಂದರು.

ಇದನ್ನೂ ಓದಿ: ದಾವಣಗೆರೆಯಲ್ಲಿ ನಡೆದ ಪ್ರಧಾನಿ ಮೋದಿ ಸಮಾವೇಶದಲ್ಲಿ 3 ಕಡೆ ಭದ್ರತಾ ಲೋಪ: ಗುಪ್ತಚರ ಇಲಾಖೆಯಿಂದ ಮಾಹಿತಿ

ಕೆಲವರಿಗೆ ನಿರಾಶೆ

124 ಕ್ಷೇತ್ರಗಳ ಸೀಟ್​ಗಳನ್ನ ಅನೌನ್ಸ್ ಆಗಿದೆ. ಇನ್ನು 100 ಉಳಿದಿದೆ. ಅದನ್ನು ಕೂಡ ಆದಷ್ಟು ಶೀಘ್ರ ಅನೌನ್ಸ್ ಮಾಡುತ್ತಾರೆ ಅಂತಾ ಅಂದುಕೊಂಡಿದ್ದೀನಿ. ಕಾಂಗ್ರೆಸ್ ಪಕ್ಷದ ಸರ್ಕಾರ ಮಾಡುವುದಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತೆ ಅನ್ನೋದು ಈ ಪಟ್ಟಿ ನೋಡಿದ್ಮೇಲೆ ಅನ್ನಿಸಿದೆ. ಕೆಲವರಿಗೆ ನಿರಾಶೆ ಆಗಿರಬಹುದು. ಬಹಳ ಜನ ಅರ್ಹರಿದ್ದಂತವರಿಗೆ ಸಿಕ್ಕಿಲ್ಲಾ.

2 ಲಕ್ಷ ಕೊಟ್ಟು ಅರ್ಜಿ ಸಲ್ಲಿಕೆ

2 ಲಕ್ಷ ಕೊಟ್ಟು ಅರ್ಜಿಗಳನ್ನ ಹಾಕಿದ್ದರು. ಅವರಲ್ಲಿ ನಾನು ಮನವಿ ಮಾಡಿಕೊಳುತ್ತೇನೆ ನಿರಾಸೆ ಆಗಬೇಡಿ. ಮುಂದೆ ಭವಿಷ್ಯದಲ್ಲಿ ನಿಮಗೂ ಕೂಡ ಅವಕಾಗಳು ಸಿಗುತ್ತೆ. ಸರ್ಕಾರ ಬಂದಾಗ ಅನೇಕ ಜವಾಬ್ದಾರಿಗಳು ಸಿಗುವ ಅವಕಾಶ ನಿಮಗಿದೆ. ನಾವು ನೀವೆಲ್ಲಾ ಸೇರಿಕೊಂಡು ಪಕ್ಷವನ್ನ ಕಟ್ಟೋಣ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಇದನ್ನೂ ಓದಿ: ಈಗ ಗ್ಯಾರಂಟಿ ಕೊಡುವ ಕಾಂಗ್ರೆಸ್ಸಿಗರು ಅಧಿಕಾರದಲ್ಲಿದ್ದಾಗ ಕಡುಬು ತಿಂತಾ ಇದ್ದರಾ; ಬಿಎಸ್​ವೈ ಪ್ರಶ್ನೆ

ನಮ್ಮ ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಿದ್ದಾರೆ: ಡಿ.ಕೆ.ಸುರೇಶ್

ಕಾಂಗ್ರೆಸ್​​ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. 8-10 ದಿನಗಳಲ್ಲಿ ಕಾಂಗ್ರೆಸ್​ನ 2ನೇ ಪಟ್ಟಿ ಬಿಡುಗಡೆ ಆಗಲಿದೆ ಎಂದು ಹಾಸನ ನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದರು. ನಮ್ಮ ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಿದ್ದಾರೆ. ವರುಣಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್​ ಹೇಳಿದ ಕಡೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದರು. ವರಿಷ್ಠರು ಕೂಡ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸ್ತೀರಿ ಎಂದು ಕೇಳಿದ್ದರು.

ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.ಹಾಗಾಗಿ ಸಿದ್ದರಾಮಯ್ಯಗೆ ವರುಣಾ ಟಿಕೆಟ್​​ ಘೋಷಣೆ ಮಾಡಿದ್ದಾರೆ. ಟಿಕೆಟ್​ಗಾಗಿ ಪೈಪೋಟಿ ಇರುವ ಕ್ಷೇತ್ರದ ನಾಯಕರನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಖರ್ಗೆ ಚರ್ಚೆ ಮಾಡ್ತಿದ್ದಾರೆ. ಬಳಿಕ ಕಾಂಗ್ರೆಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.