ತುಮಕೂರು: ನಗರ ಕ್ಷೇತ್ರದ JDS ಅಭ್ಯರ್ಥಿ ಎನ್. ಗೋವಿಂದರಾಜು (N. Govindaraju) ವಿರುದ್ಧ ಮಹಿಳೆಯರು ಸಿಡಿದೆದ್ದಿದ್ದು, ಪ್ರಚಾರದ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಸಭ್ಯವಾಗಿ ನಡೆದುಕೊಂಡ ಬಗ್ಗೆ ರೇಷ್ಮಾ ಎಂಬ ಮಹಿಳೆ ದೂರು ನೀಡಿದ್ದಾರೆ. ಜೊತೆಗೆ ಗೋವಿಂದರಾಜು ಮಾತನಾಡಿದ್ದು ಎನ್ನಲಾದ ಪೋಲಿ ಆಡಿಯೋ ಬಿಡುಗಡೆಯಾಗಿತ್ತು. ಈ ಹಿನ್ನೆಲೆ ಇಂದು ನಗರದ ಟೌನ್‌ಹಾಲ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡಿದ ಮಹಿಳೆಯರು ಗೋವಿಂದರಾಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋ ಬ್ಯಾಕ್ ಗೋವಿಂದರಾಜು ಎಂದು ಘೋಷಣೆ ಕೂಗಿದ್ದು, ಜೆಡಿಎಸ್‌ನಿಂದ ಬಿ ಫಾರಂ ಕೊಡದಂತೆ ಆಗ್ರಹ ಮಾಡಿದ್ದಾರೆ. ಜೊತೆಗೆ ಜೆಡಿಎಸ್‌ಗೆ ಹೆಣ್ಣು ಮಕ್ಕಳ ಮೇಲೆ ಗೌರವ ಇದ್ದರೆ JDS ಪಕ್ಷದಿಂದ ವಜಾಗೊಳಿಸಿ ಎಂದು ಸವಾಲು ಹಾಕಿದ್ದಾರೆ.
ಎನ್. ಗೋವಿಂದರಾಜು ಅವರು JDSನಿಂದ ನಾಮಪತ್ರ ಸಲ್ಲಿಸಲು ತಯಾರಿ ತಯಾರಿ ನಡೆಸುತ್ತಿರುವ ಬೆನ್ನೆಲೇ ಈ ಆರೋಪ ಕೇಳಿಬಂದಿದೆ. ರೇಷ್ಮಾ ಆಡಿಯೋ ಸಾಕ್ಷ್ಯಗಳನ್ನು ಒದಗಿಸಿದಲ್ಲದೆ, ಕುವೆಂಪು ನಗರದಲ್ಲಿರುವ ಎನ್. ಗೋವಿಂದರಾಜು ಮನೆ ಮುಂದೆ ಗಲಾಟೆ ಕೂಡ ಮಾಡಿದ್ದು, ಹೈಡ್ರಾಮಾ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಏನು ಕಡಿಮೆ ಮಾಡಿದ್ದೆವು ಎಂಬ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್
ಇತ್ತೀಚೆಗೆ ಎನ್. ಗೋವಿಂದರಾಜು ವಿರುದ್ಧ ಹಣ ಹಂಚಿಕೆ ಆರೋಪ ಸಹ ಕೇಳಿಬಂದಿತ್ತು. ತುಮಕೂರು ನಗರ ಹೆತ್ತೆನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಜನರಿಗೆ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ತುಮಕೂರಿನ ಜಯಪುರದ ಮತದಾರರನ್ನು ಬಸ್ನಲ್ಲಿ ಕರೆದೊಯ್ದು ತಲಾ 500, 1,000 ರೂ ಹಂಚಿಕೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು.
ಕೋಲಾರ: ಮಹಿಳಾ ದಿನಾಚರಣೆಯಂದೇ ಸಂಸದ ಎಸ್ ಮುನಿಸ್ವಾಮಿ ಮಹಿಳೆಯೊಬ್ಬರ ಮೇಲೆ ಕೂಗಾಡಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು. ಕೋಲಾರ ನಗರದ ಚೆನ್ನಯ್ಯ ರಂಗಮಂದಿರದಲ್ಲಿ ಈ ವಿದ್ಯಮಾನ ನಡೆದಿದ್ದು, ಮಹಿಳಾ ದಿನಾಚರಣೆ ಕಾರ್ಯಕ್ರಮದ ವೇಳೆ ಸಂಸದರು ಮಹಿಳೆ ವಿರುದ್ಧ ಸಿಟ್ಟಾಗಿದ್ದರು. ಕಾರ್ಯಕ್ರಮದ ಪ್ರಯುಕ್ತ ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆ ನಿವಾಸಿ ಸುಜಾತಾ ಎಂಬವರು ಮಾರಾಟ ಮಳಿಗೆ ತೆರೆದಿದ್ದರು.
ಇದನ್ನೂ ಓದಿ: ಚುನಾವಣೆ ಘೋಷಣೆಗೂ ಮುನ್ನವೇ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ವಿರುದ್ಧ ಹಣ ಹಂಚಿಕೆ ಆರೋಪ
ಅವರು ಹಣೆಗೆ ಕುಂಕುಮ ಧರಿಸಿಲ್ಲವೆಂದು ಅವರ ವಿರುದ್ಧ ಕೂಗಾಡಿದ ಸಂಸದರು, ಏನಮ್ಮ ನಿನ್ನ ಹೆಸರು, ಹಣೆಗೆ ಯಾಕೆ ಕುಂಕುಮ ಹಾಕಿಲ್ಲ? ಹಣ ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಲ್ಲವಾ? ವೈಷ್ಣವಿ ಎಂಬುದಾಗಿ ಅಂಗಡಿ ಹೆಸರನ್ನು ಯಾಕೆ ಇಟ್ಟುಕೊಂಡಿದ್ದೀಯಾ? ಎಂದು ಏಕಾಏಕಿ ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಶಾಸಕ ಶ್ರೀನಿವಾಸಗೌಡ ತಡೆದರೂ ಸುಮ್ಮನಿರದ ಮುನಿಸ್ವಾಮಿ ತಮ್ಮ ಕೂಗಾಟ ರೇಗಾಟ ಮುಂದಿವರಿಸಿದ್ದರು. ಪರಿಷತ್ ಸದಸ್ಯ ಗೋವಿಂದರಾಜು ಕೂಡ ಸಮಾಧಾನಿಸಲು ಯತ್ನಿಸಿದ್ದರು. ಆದರೆ, ಯಾರ ಮಾತಿನಿಂದಲೂ ಮುನಿಸ್ವಾಮಿ ಸಿಟ್ಟು ತಣ್ಣಗಾಗಿರಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:40 pm, Sun, 16 April 23