ಮಂಡ್ಯದ ನಾಗಮಂಗಲದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಆರೋಗ್ಯ ಸ್ಥಿತಿಯನ್ನು ನೆನೆದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಎಚ್. ಡಿ ರೇವಣ್ಣ ಕಣ್ಣೀರು ಹಾಕಿದ್ದರು. ಇದನ್ನು ಬಿಜೆಪಿ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಶುಭಾಶಯಗಳು. ನಿಮ್ಮ ಜನತಾ ಜಲಧಾರೆ ಕಾರ್ಯಕ್ರಮವನ್ನು ಮೀರಿಸುವ ರೀತಿ ಇನ್ನೊಂದು ಯೋಜನೆ ರೂಪಿಸಿದ್ದೀರಿ. ಜೆಡಿಎಸ್ ಕಣ್ಣೀರಧಾರೆ ಯಶಸ್ವಿಯಾಗಲಿ! ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಪೇಜ್ ವ್ಯಂಗ್ಯವಾಡಿದೆ. ಜೊತೆಗೆ ಜೆಡಿಎಸ್ ಕಣ್ಣೀರೋತ್ಸವ ಎಂದು ಹ್ಯಾಶ್ಟ್ಯಾಗ್ನ್ನು ಬಳಸಿದೆ.
ಒಂದೆಡೆ ಜನತಾ ಜಲಧಾರೆ, ಮತ್ತೊಂದೆಡೆ ಕಣ್ಣೀರಧಾರೆ ಒಟ್ಟಿನಲ್ಲಿ ನೀರೋ, ನೀರು! ಮುಂದಿನ ಚುನಾವಣೆಯ ನಂತರ ಜೆಡಿಎಸ್ ಪಕ್ಷ ಮುಳುಗುವ ಸೂಚನೆಯಿದು. ಜೆಡಿಎಸ್ ದೋಣಿಯಲ್ಲಿ ಅಪ್ಪ, ಮಕ್ಕಳು, ಮೊಮ್ಮಕ್ಕಳಷ್ಟೇ ದಡ ಸೇರಬಹುದು, ಮಿಕ್ಕವರು ಮುಳುಗುವುದು ಪಕ್ಕಾ! ಎಂದು ಜೆಡಿಎಸ್ ನಾಯಕ ಕಾಲೆಳೆದಿದೆ.
ಒಂದೆಡೆ ಜನತಾ ಜಲಧಾರೆ
ಮತ್ತೊಂದೆಡೆ ಕಣ್ಣೀರಧಾರೆ ಇದನ್ನೂ ಓದಿಒಟ್ಟಿನಲ್ಲಿ ನೀರೋ, ನೀರು! ಮುಂದಿನ ಚುನಾವಣೆಯ ನಂತರ ಜೆಡಿಎಸ್ ಪಕ್ಷ ಮುಳುಗಲಿದೆ ಎಂಬುದರ ಸೂಚನೆಯಿದು.
ಜೆಡಿಎಸ್ ದೋಣಿಯಲ್ಲಿ ಅಪ್ಪ, ಮಕ್ಕಳು, ಮೊಮ್ಮಕ್ಕಳಷ್ಟೇ ದಡ ಸೇರಬಹುದು, ಮಿಕ್ಕವರು ಮುಳುಗುವುದು ಪಕ್ಕಾ!#ಜೆಡಿಎಸ್ಕಣ್ಣೀರೋತ್ಸವ
— BJP Karnataka (@BJP4Karnataka) August 1, 2022
ಈ ಟ್ವೀಟ್ ಗೆ ತಿರುಗೇಟು ನೀಡಿರುವ ಜನತಾ ದಳ ಟ್ವೀಟ್ ಪೇಜ್, ಅರವತ್ತು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದ ತಂದೆಯ ವಯೋ ಸಹಜ ಅನಾರೋಗ್ಯ ಕಂಡು ಯಾವುದೇ ಮಕ್ಕಳಿಗೂ ನೋವಾಗದೇ ಇರದು, ಇಂತಹ ಸನ್ನಿವೇಶದಲ್ಲಿ ಕುಮಾರಸ್ವಾಮಿ ಅವರು ಒಂದೆರಡು ಹನಿ ಕಣ್ಣೀರು ಹಾಕಿದ್ದಾರೆ, ಇದರಲ್ಲಿ ವ್ಯಂಗ್ಯ ಮಾಡುವಂತದ್ದೇನೂ ಇಲ್ಲ. ಆದರೆ ಎಲ್ಲದಕ್ಕೂ ವ್ಯಂಗ್ಯ ಮಾಡೋದು ಈ ಮಾನಗೆಟ್ಟ ಬಿಜೆಪಿ (BJP4Karnataka) ಕ್ಕೇ ಹೊಸದೇನೂ ಅಲ್ಲ ಎಂದು ಬರೆದುಕೊಂಡಿದ್ದಾರೆ.
Published On - 3:04 pm, Tue, 2 August 22