ಕುಟುಂಬ ರಾಜಕಾರಣ ಬೇಡವೆಂದಿದ್ದರೆ ಸಂಸತ್‌ನಲ್ಲಿ ಒಂದು ಕಾನೂನು ಮಾಡಿಬಿಡಿ: ಹೆಚ್​ಡಿ ರೇವಣ್ಣ
ಹೆಚ್.ಡಿ. ರೇವಣ್ಣ

ಕುಟುಂಬ ರಾಜಕಾರಣ ಬೇಡವೆಂದಿದ್ದರೆ ಸಂಸತ್‌ನಲ್ಲಿ ಒಂದು ಕಾನೂನು ಮಾಡಿಬಿಡಿ: ಹೆಚ್​ಡಿ ರೇವಣ್ಣ

| Updated By: ganapathi bhat

Updated on: Dec 06, 2021 | 4:55 PM

ಕಾಂಗ್ರೆಸ್ ನಾಯಕರಿಂದಲೇ ಕಾಂಗ್ರೆಸ್ ನಾಶವಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಲೂಟಿಕೋರರ ಪಕ್ಷ ಎಂದು ಬಿಜೆಪಿ ವಿರುದ್ಧವೂ ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಹಾಸನ: ಬೆಳಗ್ಗೆ ಎದ್ದರೆ ನಮ್ಮದು ಕುಟುಂಬ ರಾಜಕಾರಣ ಅಂತಾರೆ. ಹಾಗಿದ್ದರೆ ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ಒಂದೇ ಮನೆಯವರು ಶಾಸಕ, ಎಂಎಲ್‌ಸಿ ಆಗಿಲ್ಲವೇ? ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪ್ರಶ್ನೆ ಮಾಡಿದ್ದಾರೆ. ಕುಟುಂಬ ರಾಜಕಾರಣ ಎನ್ನಲು ಅವರಿಗೆ ನೈತಿಕತೆ ಇದ್ಯಾ? ಕುಟುಂಬ ರಾಜಕಾರಣ ಎಂದು ಆರೋಪಿಸುವುದು ಬಿಟ್ಟು ಕಾಂಗ್ರೆಸ್, ಬಿಜೆಪಿ ಮಾಡಿರುವ ಸಾಧನೆಗಳು ಏನು? ಎಂದು ಕೇಳಿದ್ದಾರೆ.

ಕುಟುಂಬ ರಾಜಕಾರಣ ಬೇಡವೆಂದಿದ್ದರೆ ಕಾನೂನು ಮಾಡಿ. ಸಂಸತ್‌ನಲ್ಲಿ ಒಂದು ಕಾನೂನು ಮಾಡಿಬಿಡಿ. ಪ್ರಾದೇಶಿಕ ಪಕ್ಷ ಮುಗಿಸಲು ಹೋಗಿ ಕಾಂಗ್ರೆಸ್‌ಗೆ ಈ ಸ್ಥಿತಿ ಬಂದಿದೆ. ಕಾಂಗ್ರೆಸ್ ನಾಯಕರಿಂದಲೇ ಕಾಂಗ್ರೆಸ್ ನಾಶವಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಲೂಟಿಕೋರರ ಪಕ್ಷ ಎಂದು ಬಿಜೆಪಿ ವಿರುದ್ಧವೂ ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದು ನಿಂತ್ರು: ಬಿಬಿ ಚಿಮ್ಮನಕಟ್ಟಿ ಭಾಷಣ; ಸಿದ್ದರಾಮಯ್ಯಗೆ ಮುಜುಗರ!

ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ವಿಚಾರ; ಅಂತಿಮ ತೀರ್ಮಾನ ಜೆಡಿಎಸ್ ಮಾಡಬೇಕು ಎಂದ ಸಿಎಂ ಬೊಮ್ಮಾಯಿ