ದೇವೇಗೌಡ-ಕುಮಾರಸ್ವಾಮಿ ಹೇಳಿದಾಕ್ಷಣ ಓಡಿಬಂದು ಓಟು ಒತ್ತೋರು ಇಲ್ಲಿ ಯಾರೂ ಇಲ್ಲ: ಶಾಸಕ ಶಿವಲಿಂಗೇಗೌಡ ಗುಡುಗು
ಇಂತಹ ಸಭೆ ಅಂದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ನೀವೇನಾದ್ರೂ ಅಂದುಕೊಳ್ಳಿ ನಾನು ನೇರವಾಗೇ ಹೇಳುತ್ತೇನೆ. ದೇವೇಗೌಡ, ಕುಮಾರಸ್ವಾಮಿ ಹೆಸರು ಹೇಳಿದರೆ ಮತ ಬರಲ್ಲ. ಸಭೆ ಬಗ್ಗೆ ಏಕೆ ಹೇಳಿಲ್ಲವೆಂದು ಹೆಚ್.ಕೆ. ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದ್ದಾರೆ.
ಹಾಸನ: ಮುಂಬರುವ ಡಿಸೆಂಬರ್ 10 ರಂದು ವಿಧಾನಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಈ ಸಂಬಂಧ ಹಾಸನದಲ್ಲಿ ಜೆಡಿಎಸ್ ಶಾಸಕರು, ಸಂಸದರ ಸಭೆ ವಿಚಾರವಾಗಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅಸಮಾಧಾನ ಹೊರಹಾಕಿದ್ದಾರೆ. ಸಭೆ ಬಗ್ಗೆ ಮಾಹಿತಿ ನೀಡಿಲ್ಲವೆಂದು ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಹೆಚ್.ಡಿ. ದೇವೇಗೌಡ ಸಮ್ಮುಖದಲ್ಲಿ ಸಭೆ ಅಂದುಕೊಂಡಿದ್ದೆ. ಇಂತಹ ಸಭೆ ಅಂದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ನೀವೇನಾದ್ರೂ ಅಂದುಕೊಳ್ಳಿ ನಾನು ನೇರವಾಗೇ ಹೇಳುತ್ತೇನೆ. ದೇವೇಗೌಡ, ಕುಮಾರಸ್ವಾಮಿ ಹೆಸರು ಹೇಳಿದರೆ ಮತ ಬರಲ್ಲ. ಸಭೆ ಬಗ್ಗೆ ಏಕೆ ಹೇಳಿಲ್ಲವೆಂದು ಹೆಚ್.ಕೆ. ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದ್ದಾರೆ.
ನನ್ನ ಕ್ಷೇತ್ರದ 410 ಸದಸ್ಯರಿಂದ ಮುಕ್ತ ಮತದಾನ ಮಾಡಿಸ್ಬೇಕಾ? ನೀವು ಯಾರಿಗೆ ಹೇಳುತ್ತೀರೋ ಅವರಿಗೆ ವೋಟ್ ಹಾಕುತ್ತೇವೆ. ಕಳೆದ ಬಾರಿ ಪಟೇಲ್ ಶಿವರಾಮ್ ಸೋಲಿಗೆ ನನ್ನನೇ ಹೊಣೆ ಮಾಡಲಾಗಿತ್ತು. ಸೋಲಿಗೆ ನಾನೇ ಕಾರಣವೆಂಬ ಕಳಂಕವಿದೆ. ಬಿಡದಿಯಲ್ಲಿನ ಸಭೆ ಸಂದರ್ಭದಲ್ಲಿ ಹೀಗೆ ಮಾಡಿದ್ರಿ ನೀವು. ಇಂದಿನ ಸಭೆ ಬಗ್ಗೆಯೂ ನಮಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಇಲ್ಲಿ ನೋಡಿದರೆ ಎಲ್ಲ ಮುಖಂಡರು ಸಭೆಗೆ ಬಂದು ಕೂತಿದ್ದಾರೆ. ನಮ್ಮ ಕ್ಷೇತ್ರದ ಕಾರ್ಯಕರ್ತರು ಮುಖ ಊದಿಸಿಕೊಂಡಿದ್ದಾರೆ. ಹೆಚ್.ಡಿ. ದೇವೇಗೌಡರು ಸೂಚಿಸಿದ ವ್ಯಕ್ತಿಗೆ ವೋಟ್ ಹಾಕುತ್ತೇವೆ ಎಂದು ಹೆಚ್ಡಿಡಿ ನೇತೃತ್ವದ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನಮ್ಮ ಕುಟುಂಬದ ಯಾರೂ ಎಂಎಲ್ಸಿ ಆಗಿಲ್ಲ; ಎಲ್ಲರ ಸಲಹೆ ಪಡೆದು ಅಭ್ಯರ್ಥಿ ಹೆಸರು ಅಂತಿಮ ಮಾಡೋಣ- ದೇವೇಗೌಡ
ಇದನ್ನೂ ಓದಿ: ಎರಡ್ಮೂರು ದಿನದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತೇನೆ: ಸಂದೇಶ್ ನಾಗರಾಜ್