ಕೋಲಾರ ಶಾಸಕ ಶ್ರೀನಿವಾಸಗೌಡರ ತಿಥಿ ಮಾಡಿಯಾಗಿದೆ ಎಂದ ಜೆಡಿಎಸ್​ ಎಂಎಲ್​ಸಿ!

ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಕೋಲಾರ ಶಾಸಕ ಶ್ರೀನಿವಾಸಗೌಡ ವಿರುದ್ದ ಕೋಲಾರದಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮತ್ತೆ ಹರಿಹಾಯ್ದರು.

ಕೋಲಾರ ಶಾಸಕ ಶ್ರೀನಿವಾಸಗೌಡರ ತಿಥಿ ಮಾಡಿಯಾಗಿದೆ ಎಂದ ಜೆಡಿಎಸ್​ ಎಂಎಲ್​ಸಿ!
ಕೋಲಾರ ಶಾಸಕ ಶ್ರೀನಿವಾಸಗೌಡರ ತಿಥಿ ಮಾಡಿಯಾಗಿದೆ ಎಂದ ಜೆಡಿಎಸ್​ ಎಂಎಲ್​ಸಿ!
Updated By: ಸಾಧು ಶ್ರೀನಾಥ್​

Updated on: Sep 17, 2022 | 3:39 PM

ಕೋಲಾರ: ಶ್ರೀನಿವಾಸಗೌಡರದ್ದು 11ನೇ ದಿನದ ತಿಥಿ, ವರ್ಷದ ತಿಥಿ ಎಲ್ಲಾ ಮಾಡಿ ಮುಗಿಸಿದ್ದೇವೆ ಎಂದು ಕೋಲಾರದಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು (JDS MLC Govindaraju) ಆಕ್ರೋಶ ಹೊರ ಹಾಕಿದ್ರು. ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಕೋಲಾರ ಶಾಸಕ ಶ್ರೀನಿವಾಸಗೌಡ (K Srinivasa Gowda) ವಿರುದ್ದ ಮತ್ತೆ ಹರಿಹಾಯ್ದರು (criticise). ಅವರು ನಮ್ಮ ತಲೆಯಲ್ಲೆ ಇಲ್ಲ, ಅವರ ತಿಥಿ ಎಲ್ಲಾ ಮಾಡಿ, ಎಳ್ಳು ನೀರು ಬಿಟ್ಟಾಗಿದೆ ಎಂದು ಹೇಳಿದ್ರು.

ಅವರ ಬಗ್ಗೆ ನಾವ್ಯಾಕೆ ಯೋಚನೆ ಮಾಡಬೇಕು, ಅವರ ಬಗ್ಗೆ ಮಾತನಾಡಿ ನನ್ನ ಬಾಯಿ ಹೊಲಸಾಗಲಿದೆ ಎಂದ್ರು. ಅಲ್ಪಸಂಖ್ಯಾತರ ಸಮಾವೇಶದ ಬಳಿಕ ಮುಂದಿನ ದಿನಗಳಲ್ಲಿ ಬಹು ಸಂಖ್ಯಾತರ ಸಮಾವೇಶವನ್ನ ಮಾಡಲಾಗುವುದು, ಚುನಾವಣೆಗೆ ಇನ್ನೂ 7 ತಿಂಗಳು ಬಾಕಿ ಇದೆ, ಇದು ಪ್ರಥಮ ಚಾಲನೆ ಎಲ್ಲಾ ವರ್ಗದ ಸಮಾವೇಶ ಮಾಡಲಾಗುವುದು ಎಂದ್ರು. ಇನ್ನು ಕೋಲಾರ ಕ್ಷೇತ್ರದಲ್ಲಿ ನಾನಂತೂ ಆಕಾಂಕ್ಷಿ ಅಲ್ಲ, ಪಕ್ಷದ ಯಾವುದೆ ಅಭ್ಯರ್ಥಿಗೆ ನಮ್ಮ ಬೆಂಬಲ ಇದೆ. ಈ ಬಾರಿ ಕೋಲಾರ ಕ್ಷೇತ್ರದಿಂದ ಉತ್ತಮ ಅಭ್ಯರ್ಥಿ ಮಾಡಿ ಗೆಲ್ಲಿಸುತ್ತೇವೆ ಎಂದು ಗೋವಿಂದರಾಜು ಭವಿಷ್ಯ ನುಡಿದರು.