ಬೆಂಗಳೂರು: ‘ಮೂರು ತಿಂಗಳ ಮೊದಲೇ ನಾವು ಚುನಾವಣೆಗೆ ರೆಡಿ ಇದ್ದೇವೆ, ಈ ಚುನಾವಣೆಯಲ್ಲಿ ಬಿಜೆಪಿ 60 ರಿಂದ 65 ಸ್ಥಾನ ಅಷ್ಟೇ ಗೆಲ್ಲುತ್ತದೆ. ನಾವು ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(D. K. Shivakumar) ಹೇಳಿದ್ದಾರೆ. ಎಷ್ಟು ಬೇಗ ಚುನಾವಣೆ ಆಗುತ್ತದೆಯೋ ಅಷ್ಟು ಕಾಂಗ್ರೆಸ್ಗೆ ಒಳ್ಳೆಯದು, ಮೀಸಲಾತಿ ವಿಚಾರದಲ್ಲಿ ಯಾರಿಗೂ ಸಮಾಧಾನ ಆಗಲ್ಲ. ಕೋರ್ಟ್ಗೆ ಹೋದರೆ ಯಾವುದೂ ನಿಲ್ಲುವುದಿಲ್ಲ, ಬಿಜೆಪಿಯವರು ಮಾಡಿದ ತಪ್ಪನ್ನ ನಾವು ಸರಿ ಮಾಡುತ್ತೇವೆ, ಮನೆ ಆಸ್ತಿನ ಹಂಚಿಕೊಂಡಂಗೆ ಇವರು ಕೊನೆ ಕ್ಷಣದಲ್ಲಿ ಹಂಚಿಕೊಳ್ಳಲು ಹೊರಟಿದ್ದಾರೆ ಎಂದಿದ್ದಾರೆ.
ಇಂದು(ಮಾ.29) ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಕಾಂಗ್ರೆಸ್ ಪಕ್ಷದ ಗ್ಯಾರಂಟಿ ನಾವು ಉಳಿಸಿಕೊಳ್ಳುತ್ತೇವೆ. ಅವರು ಬೋಗಸ್ಸಾ ನಾವು ಬೋಗಸ್ಸಾ? ಗೊತ್ತಾಗುತ್ತೆ. ಮಹದಾಯಿ ವಿಚಾರದಲ್ಲಿ ಅವಕಾಶವೇ ಕೊಟ್ಟಿಲ್ಲವೆಂದು ಕೇಂದ್ರವೇ ಹೇಳಿದೆ. ಪ್ರಹ್ಲಾದ ಜೋಷಿ ಮಹದಾಯಿ ಆಯ್ತು ಎಂದು ಸಿಹಿ ಹಂಚಿದ್ರಲ್ಲ. ಎಲ್ಲಾಯ್ತು ಅದು? ಎಂದು ಪ್ರಶ್ನಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಜೆಪಿಯವರು ಸಂಪರ್ಕದಲ್ಲಿದ್ದಾರೆ ಎಂಬ ವಿಚಾರವಾಗಿ ‘ಬಿಜೆಪಿಯವರು ಅವರೇ ನಮ್ಮನ್ನು ಹುಡುಕಿಕೊಂಡು ಬರುತ್ತಿದ್ದಾರೆ. ನಮಗೇ ಅವರನ್ನೆಲ್ಲ ಅಕಾಮಡೇಟ್ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಸುಮ್ಮನಿದ್ದೇವೆ. ಇದೇ ವೇಳೆ ಅವರು ಹೇಗೆ ಸರ್ಕಾರ ಮಾಡಿದರು ಹಾಗಾದರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನಮ್ಮ ಕ್ಯಾಂಡಿಡೇಟ್ಗಳನ್ನೆಲ್ಲ ಹೊತ್ತುಕೊಂಡು ಹೋಗಿ ಸರ್ಕಾರ ಮಾಡಿದ್ರಲ್ಲ. ಇದು ಬಿಜೆಪಿ ಸರ್ಕಾರ ಅಲ್ಲ, ಸಮ್ಮಿಶ್ರ ಸರ್ಕಾರ, ಇದು ಜೆಡಿಎಸ್ ಹಾಗೂ ಕಾಂಗ್ರೆಸ್ನವರಿಂದ ನಡೆದ ಸರ್ಕಾರ ಎಂದರು.
ಮೀಸಲಾತಿ ಕುರಿತು ಮಾತನಾಡಿದ ಅವರು ಸದಾಶಿವ ವರದಿಯಲ್ಲಿ ಏನಿದೆ ತೆಗೆದು ಇಡಿ, ಅದನ್ನು ನಾವೇ ಮಾಡಿದ್ದು. ಎಲ್ಲಿ ಭಾಗ ಮಾಡಿದ್ದಾರೆ ಅದನ್ನ ಸಮುದಾಯಗಳ ವರದಿಯಲ್ಲಿ ತೋರಿಸಲಿ. ಕಾನೂನಿಗೆ ವಿರುದ್ದವಾದ ಕೆಲಸಗಳನ್ನೇ ಬಿಜೆಪಿಯವರು ಮಾಡಿದ್ದಾರೆ. ಯಡಿಯೂರಪ್ಪನವರ ಸ್ವಂತ ಊರಿನಲ್ಲಿಯೇ ಸಮಯದಾಯದ ಆಕ್ರೋಶ ಎಷ್ಟಿದೆ ನೋಡಿದ್ದೀರಲ್ಲ. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ನಾವು ಮಾಡುತ್ತೇವೆ. ಓಬಿಸಿ ರಿಪೋರ್ಟ್, ಎಸ್.ಸಿ, ಎಸ್ಟಿ ರಿಪೋರ್ಟ್ ಎಲ್ಲ ತೆಗೆದು ಜನರ ಮುಂದಿಡಿ. ಯಾಕೆ ಜನರ ಮುಂದೆ ವರದಿಗಳನ್ನು ಇಟ್ಟಿಲ್ಲ? ನಾವು ಎಸ್.ಎಂ ಕೃಷ್ಣ ಕಾಲದಲ್ಲಿಯೇ ಸದಾಶಿವ ಆಯೋಗ ಮಾಡಿದ್ದೇವೆ. ಜೇನುಗೂಡಿಗೆ ಕೈ ಹಾಕಿದ್ದೀವಿ ಅಂದಿದ್ದೀರಲ್ಲ ಜೇನುಗೂಡಲ್ಲ ಕಡುಜೇನಿಗೆ ಕೈ ಹಾಕಿದ್ದೀರಿ ಎನ್ನುವ ಮೂಲಕ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Wed, 29 March 23