ನನ್ನದು ಸಾರ್ಥಕ ಜೀವನ, ಆದರೂ…: ರಾಜಕೀಯ, ಸಿನಿಮಾ ಹಾಗೂ ಭವಿಷ್ಯದ ಬಗ್ಗೆ ರಮ್ಯಾ ಮಾತು

ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಮೊದಲ ಅತಿಥಿ ರಮ್ಯಾ, ಮೊದಲ ಎಪಿಸೋಡ್​ನಲ್ಲಿ ತಮ್ಮ ಬಾಲ್ಯ, ಶಾಲೆ, ಗೆಳೆಯರು, ಸಿನಿಮಾ ಎಂಟ್ರಿ ಬಗ್ಗೆ ಮಾತನಾಡಿದ್ದರು. ಎರಡನೇ ಎಪಿಸೋಡ್​ನಲ್ಲಿ ರಾಜಕೀಯ, ಜೀವನದ ಏರಿಳಿತಗಳ ಬಗ್ಗೆ ಮಾತನಾಡಿದ್ದಾರೆ.

ನನ್ನದು ಸಾರ್ಥಕ ಜೀವನ, ಆದರೂ...: ರಾಜಕೀಯ, ಸಿನಿಮಾ ಹಾಗೂ ಭವಿಷ್ಯದ ಬಗ್ಗೆ ರಮ್ಯಾ ಮಾತು
ವೀಕೆಂಡ್ ವಿತ್ ರಮೇಶ್ ನಲ್ಲಿ ರಮ್ಯಾ
Follow us
ಮಂಜುನಾಥ ಸಿ.
|

Updated on: Mar 26, 2023 | 11:05 PM

ವೀಕೆಂಡ್ ವಿತ್ ರಮೇಶ್ (Weekend With Ramesh) ಸೀಸನ್ 5ರ ಮೊದಲ ಅತಿಥಿಯಾಗಿ ಪಾಲ್ಗೊಂಡ ನಟಿ ರಮ್ಯಾ (Ramya) ತಮ್ಮ ಜೀವನದ ಈವರೆಗಿನ ಪಯಣವನ್ನು ಮೆಲುಕು ಹಾಕಿದ್ದಾರೆ. ಮೊದಲ ಎಪಿಸೋಡ್​ನಲ್ಲಿ ಬಾಲ್ಯ, ಶಾಲೆ, ಗೆಳೆಯರು, ಸಿನಿಮಾ ರಂಗಕ್ಕೆ ಎಂಟ್ರಿ, ಯಶಸ್ಸು ಗಳಿಸಿದ್ದರ ಬಗ್ಗೆ ಮಾತನಾಡಿದ್ದ ನಟಿ ರಮ್ಯಾ, ಎರಡನೇ ಎಪಿಸೋಡ್​ನಲ್ಲಿ ಚಿತ್ರರಂಗದಲ್ಲಿ ಬೆಳೆದ ರೀತಿ, ರಾಜಕೀಯ, ಜೀವನದಲ್ಲಿ ಅನುಭವಿಸಿದ ಕಷ್ಟಗಳು, ಮುಂದಿನ ಭವಿಷ್ಯ, ಅಭಿಮಾನಿಗಳ (Fans) ಪ್ರೀತಿ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ.

ಅಮೃತಧಾರೆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದನ್ನು ಖುಷಿಯಿಂದ ನೆನಪಿಸಿಕೊಂಡ ರಮ್ಯಾ, ಹುಡುಗ-ಹುಡುಗ ಹಾಡಿನ ಚಿತ್ರೀಕರಣದ ವೇಳೆ ಆಮ್ಲಜನಕದ ಕೊರತೆಯಿಂದ ಪ್ರಜ್ಞೆತಪ್ಪಿ ಬಿದ್ದಿದ್ದು, ಯೋಧರಿಂದ ತಮಗೆ ಜೀವದಾನ ಸಿಕ್ಕ ಘಟನೆಗಳನ್ನು ನೆನಪಿಸಿಕೊಂಡರು. ಅಮೃತಧಾರೆ ಸಿನಿಮಾದ ನಾಯಕ ಧ್ಯಾನ್ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರುಗಳು ವಿಡಿಯೋ ಮೂಲಕ ರಮ್ಯಾರ ಸ್ನೇಹವನ್ನು ಕೊಂಡಾಡಿದರು. ರಮ್ಯಾರ ಸಿನಿಮಾಗಳನ್ನು ನಿರ್ದೇಶಿಸಿರುವ ಹಲವು ನಿರ್ದೇಶಕರು ರಮ್ಯಾರ ಸ್ನೇಹವನ್ನು, ಕೆಲಸದ ಬಗೆಗಿದ್ದ ಶ್ರದ್ಧೆಯನ್ನು ಕೊಂಡಾಡಿದರು.

ಸ್ಯಾಂಡಲ್​ವುಡ್ ಯುವನಟಿಯರಾದ ಅಮೃತಾ ಐಯ್ಯಂಗಾರ್, ದಿಯಾ ಸಿನಿಮಾದ ಖುಷಿ ಇನ್ನು ಕೆಲವರು ವೀಕೆಂಡ್ ವಿತ್ ರಮೇಶ್ ವೇದಿಕೆಗೆ ಆಗಮಿಸಿ ರಮ್ಯಾ ಅವರು ತಮಗೆ ಸ್ಪೂರ್ತಿ, ಆದರ್ಶ ಎಂದರು. ಬಳಿಕ ನೆರೆಯ ತಮಿಳುನಾಡು ಚಿತ್ರರಂಗದ ದೊಡ್ಡ ನಿರ್ದೇಶಕ ವೆಟ್ರಿಮಾರನ್ ಸಹ ವಿಡಿಯೋ ಕಳಿಸಿ ರಮ್ಯಾ ಅದ್ಭುತ ನಟಿ, ಬಹಳ ಸ್ನೇಹಜೀವಿ ಎಂದು ಕೊಂಡಾಡಿದರು.

ತಮ್ಮ ರಾಜಕೀಯ ಜೀವನ ನೆನಪಿಸಿಕೊಂಡ ರಮ್ಯಾ, ಅಚಾನಕ್ಕಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟೆ. ಆದರೆ ಅದೇ ಸಮಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದು ನನ್ನ ಜೀವನದ ಬಹಳ ದುಃಖದ ಸಮಯ. ಅಪ್ಪ ತೀರಿಕೊಂಡ ಹತ್ತು ದಿನದಲ್ಲೇ ನಾನು ಪಾರ್ಲಿಮೆಂಟ್​ಗೆ ಎಂಟ್ರಿ ಕೊಟ್ಟಿದ್ದೆ. ಮಂಡ್ಯ ಜನರ ಪ್ರೀತಿಯನ್ನು, ಅವರು ನೀಡಿದ ಧೈರ್ಯವನ್ನು ಮರೆಯುವಂತಿಲ್ಲ ಎಂದರು. ತಂದೆ ಕಳೆದುಕೊಂಡು ದುಃಖದಲ್ಲಿದ್ದ ತಮಗೆ ರಾಹುಲ್ ಗಾಂಧಿಯವರು ಮಾಡಿದ ಸಹಾಯವನ್ನು ಸಹ ನೆನಪಿಸಿಕೊಂಡರು ರಮ್ಯಾ. ಮಂಡ್ಯದಲ್ಲಿ ರಮ್ಯಾ ಹೆಸರಲ್ಲಿ 10 ರುಪಾಯಿಗೆ ಊಟ ನೀಡುತ್ತಿರುವ ಅವರ ಅಭಿಮಾನಿಗಳು ಶೋಗೆ ಆಗಮಿಸಿ ರಮ್ಯಾಗೆ ಹೋಟೆಲ್​ನ ತಿಂಡಿಯನ್ನು ನೀಡಿದರು.

ತಾವು ನಟಿಸಿರುವ ವಿವಿಧ ನಟರ ಚಿತ್ರಗಳನ್ನು ನೋಡಿ ಎಲ್ಲರ ಬಗ್ಗೆಯೂ ಖುಷಿಯಿಂದ ಮಾತನಾಡಿದರು ರಮ್ಯಾ, ತಮಿಳಿನ ನಟ ಧನುಶ್ ಗೆಳೆತನ, ಸಿಂಭು ಜೊತೆ ಮೊದಲ ದಿನವೇ ಜಗಳವಾಡಿದ್ದು, ನಟ ಸೂರ್ಯ ಇಂದ ಕಲಿತ ಪಾಠಗಳು, ಜೀವಾ ಜೊತೆಗಿನ ಗೆಳೆತನದ ಜೊತೆಗೆ ನಟ ಸುದೀಪ್ ಬಗ್ಗೆಯೂ ಮಾತನಾಡಿ, ಅವರು ನನ್ನ ಆತ್ಮೀಯ ಗೆಳೆಯ. ಚಿತ್ರರಂಗದ ಕೆಲವೇ ಗೆಳೆಯರಲ್ಲಿ ಅವರೂ ಒಬ್ಬರು, ಅವರಿಗೆ ಸದಾ ಒಳ್ಳೆಯದಾಗಬೇಕು, ಅವರು ಬಹಳ ಕೇರಿಂಗ್ ವ್ಯಕ್ತಿ ಎಂದರು.

ತಮ್ಮದೇ ಸಿನಿಮಾದ ಸುಂದರ ಹಾಡುಗಳನ್ನು ಕೇಳಿ ಭಾವುಕಗೊಂಡ ರಮ್ಯಾ, ಇಷ್ಟು ಬೇಗ ಇಪ್ಪತ್ತು ವರ್ಷ ಮುಗಿದು ಹೋಯಿತಾ ಎಂದರು. ಆಗ ಆ ನೆನಪುಗಳನ್ನು ನಾನು ಇನ್ನಷ್ಟು ಕಾಯ್ದಿಟ್ಟುಕೊಳ್ಳಬೇಕಿತ್ತು. ಈಗ ಹಿಂತಿರುಗಿ ನೋಡಿದಾಗ ಆಗ ನಾನು ಜೀವನವನ್ನು ಸರಿಯಾಗಿ ಎಂಜಾಯ್ ಮಾಡಲಿಲ್ಲ, ನೆನಪುಗಳನ್ನು ಕಾಯ್ದಿಟ್ಟುಕೊಳ್ಳಲಿಲ್ಲ ಎನಿಸುತ್ತದೆ ಎಂದರು ರಮ್ಯಾ. ಅವರೀಗ ನಟನೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ರೋಹಿತ್ ಪದಕಿ ನಿರ್ದೇಶನ ಮಾಡುತ್ತಿರುವ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿದ್ದಾರೆ. ಜೊತೆಗೆ ಆಪಲ್ ಬಾಕ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಕಟ್ಟಿದ್ದು ಸಿನಿಮಾ ಸಹ ನಿರ್ಮಾಣ ಮಾಡುತ್ತಿದ್ದಾರೆ. ಹಾಸ್ಟೆಲ್ ಹುಡುಗರು ಹೆಸರಿನ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿಯೂ ನಟಿಸಿದ್ದಾರೆ. ಭವಿಷ್ಯದ ಬಗ್ಗೆ ಮತ್ತಷ್ಟು ಉತ್ಸುಕತೆಯಿಂದ ಎದುರು ನೋಡುತ್ತಿರುವುದಾಗಿ ರಮ್ಯಾ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ