AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿ ಮಾಡಿದ ಸಹಾಯ ನೆನಪಿಸಿಕೊಂಡ ನಟಿ ರಮ್ಯಾ

ರಾಜಕಾರಣದಲ್ಲಿ ಕೆಲ ಕಾಲ ತೊಡಗಿಕೊಂಡಿದ್ದ ನಟಿ ರಮ್ಯಾ ತಮ್ಮ ಜೀವನದ ಮೇಲೆ ರಾಹುಲ್ ಗಾಂಧಿ ಬೀರಿದ ಪ್ರಭಾವ ಹಾಗೂ ಅವರು ಮಾಡಿದ ಸಹಾಯವನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನೆನಪಿಸಿಕೊಂಡಿದ್ದಾರೆ.

ರಾಹುಲ್ ಗಾಂಧಿ ಮಾಡಿದ ಸಹಾಯ ನೆನಪಿಸಿಕೊಂಡ ನಟಿ ರಮ್ಯಾ
ರಮ್ಯಾ-ರಾಹುಲ್
ಮಂಜುನಾಥ ಸಿ.
|

Updated on: Mar 26, 2023 | 10:40 PM

Share

ಸಿನಿಮಾ ವೃತ್ತಿಯ ಉತ್ತುಂಗದಲ್ಲಿದ್ದಾಗಲೇ ರಾಜಕೀಯದ ಕಡೆಗೆ ಹೊರಟು ನಿಂತವರು ನಟಿ ರಮ್ಯಾ (Ramya). ಉಪಚುನಾವಣೆ ಗೆದ್ದು ಮಂಡ್ಯ (Mandya) ಸಂಸದೆಯಾಗಿ ಆ ಬಳಿಕ ಕೆಲವೇ ತಿಂಗಳುಗಳಲ್ಲಿ ಮತ್ತೊಂದು ಚುನಾವಣೆ ಎದುರಿಸಿ ಸೋತರು ರಮ್ಯಾ. ಆ ಬಳಿಕ ರಾಷ್ಟ್ರೀಯ ಕಾಂಗ್ರೆಸ್​ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದ್ದರು. ರಾಜಕೀಯದಲ್ಲಿ ದೊಡ್ಡ ಛಾಪನ್ನು ರಮ್ಯಾ ಮೂಡಿಸದೇ ಹೋದರೂ ಸಹ ಅವರ ಜೀವನದ ಮೇಲೆ ರಾಜಕೀಯದ ಆ ಘಟ್ಟ ಬೀರಿದ ಪ್ರಭಾವ ದೊಡ್ಡದು.

ಇದೀಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ರಮ್ಯಾ, ತಾವು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ ಎಂದರು. ನಾನು ರಾಜಕೀಯಕ್ಕೆ ಎಂಟ್ರಿಯಾದ ಸಮಯದಲ್ಲಿಯೇ ನನ್ನ ತಂದೆ ತೀರಿಕೊಂಡರು. ಅದು ನನ್ನನ್ನು ಇನ್ನಿಲ್ಲದಂತೆ ಕಾಡಿತು. ಅದಾದ ಬಳಿಕ ನಾನು ಚುನಾವಣೆಯಲ್ಲಿ ಸೋತೆ ಅದು ನನ್ನ ಪಾಲಿಗೆ ಬಹಳ ಕಷ್ಟದ ಸಮಯ. ನನ್ನ ತಂದೆ ಹೋದ ಸಮಯದಲ್ಲಿ ಅಂತೂ ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ನೆನಪಿಸಿಕೊಂಡರು ರಮ್ಯಾ.

ಆದರೆ ಆ ಸಮಯದಲ್ಲಿ ರಾಹುಲ್ ಗಾಂಧಿ ಜೀ ಅವರು ನನಗೆ ಬಹಳ ಸಹಾಯ ಮಾಡಿದರು. ನನ್ನಲ್ಲಿ ಹೊಸ ಚೈತನ್ಯ ತುಂಬುವ ಯತ್ನ ಮಾಡಿದರು. ಹುಟ್ಟು-ಸಾವುಗಳ ಬಗ್ಗೆ ತಿಳಿಸಿಕೊಟ್ಟರು. ನಮ್ಮ ಜೀವನದ ಉದ್ದೇಶದ ಬಗ್ಗೆ ಪಾಠ ಮಾಡಿದರು. ನನ್ನ ಜೀವನದಲ್ಲಿ ನನ್ನ ತಾಯಿ, ತಂದೆಯ ಬಳಿಕ ನನ್ನ ಮೇಲೆ ಅತಿಯಾಗಿ ಪ್ರಭಾವ ಬೀರಿದ ವ್ಯಕ್ತಿ ರಾಹುಲ್ ಗಾಂಧಿ ಎಂದರು ನಟಿ ರಮ್ಯಾ.

ಅದೇ ಕಾರ್ಯಕ್ರಮದಲ್ಲಿ ಮಂಡ್ಯ ಜನರ ಬೆಂಬಲವನ್ನು ನೆನಪಿಸಿಕೊಂಡ ರಮ್ಯಾ, ನನ್ನ ತಂದೆ ಕಾಲವಾದ ಕೆಲವೇ ದಿನದಲ್ಲಿ ನಾನು ಪಾರ್ಲಿಮೆಂಟ್​ನಲ್ಲಿದ್ದೆ. ರಾಜಕಾರಣ ನನಗೆ ಹೊಸತು, ಅಲ್ಲಿನ ಪದ್ಧತಿಗಳು ಹೊಸತು, ಎಲ್ಲವನ್ನೂ ನಿಧಾನಕ್ಕೆ ಕಲಿತೆ. ಮಂಡ್ಯ ಜನರು ನೀಡಿದ ಧೈರ್ಯದಿಂದಲೇ ಅದು ಸಾಧ್ಯವಾಗಿದ್ದು, ನಾನು ಅವರಿಗೆ ಸದಾ ಋಣಿ ಎಂದರು ನಟಿ ರಮ್ಯಾ.

2013ರ ಉಪಚುನಾವಣೆಯಲ್ಲಿ ರಮ್ಯಾರ ಗೆಲುವಿಗೆ ಪ್ರಮುಖ ಕಾರಣವಾದ ನಟ ಅಂಬರೀಶ್ ಬಗ್ಗೆ ಹೆಚ್ಚು ಮಾತುಗಳು ಎಪಿಸೋಡ್​ನಲ್ಲಿ ಕೇಳಿ ಬರಲಿಲ್ಲವಾದರೂ, ಅಂಬರೀಶ್ ತಮಗೆ ಬ್ರಾಂಡಿ ಹೆಸರಿನ ನಾಯಿಯನ್ನು ಉಡುಗೊರೆಯಾಗಿ ಕೊಟ್ಟಿದ್ದನ್ನು ನೆನಪು ಮಾಡಿಕೊಂಡರು. ಆ ನಾಯಿ ತಮ್ಮ ಜೀವನದ ಭಾಗವಾಗಿತ್ತು. ಕಳೆದ ವರ್ಷ ಇದೇ ತಿಂಗಳು ಕಾಲವಾಯಿತೆಂದು ರಮ್ಯಾ ನೆನಪು ಮಾಡಿಕೊಂಡರು.

ನಟಿ ರಮ್ಯಾ, 2013 ರ ಮಂಡ್ಯ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅದಾದ ಬಳಿಕ ನಡೆದ 2014 ರ ಲೋಕಸಭೆ ಚುನಾವಣೆಯಲ್ಲಿ ಕೇವಲ ಐದು ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡರು. ರಮ್ಯಾ ಇದೀಗ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಆಪಲ್ ಬಾಕ್ಸ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ತೆಗೆದಿರುವ ರಮ್ಯಾ, ಉತ್ತರಕಾಂಡ ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!