Ramya: ಮುನಿಸುಗಳಿಗೆ ಗುಡ್ ಬೈ, ಯಾವ ನಟರ ಬಗ್ಗೆ ಏನಂದರು ರಮ್ಯಾ?

ಜಂಭದ ಕೋಳಿ, ಕಿರಿಕ್ ನಟಿ ಎಂದೆಲ್ಲ ಒಂದು ಸಮಯದಲ್ಲಿ ಕರೆಸಿಕೊಂಡಿದ್ದ ರಮ್ಯಾ, ಹಲವರೊಟ್ಟಿಗೆ ಮನಸ್ತಾಪ ಹೊಂದಿದ್ದರು. ಆಗ ಮನಸ್ತಾಪ ಹೊಂದಿದ್ದ ನಟ-ನಟಿಯರ ಬಗ್ಗೆ ಈಗ ಏನಂದರು ರಮ್ಯಾ?

Ramya: ಮುನಿಸುಗಳಿಗೆ ಗುಡ್ ಬೈ, ಯಾವ ನಟರ ಬಗ್ಗೆ ಏನಂದರು ರಮ್ಯಾ?
ರಮ್ಯಾ
Follow us
ಮಂಜುನಾಥ ಸಿ.
|

Updated on: Mar 27, 2023 | 7:30 AM

ರಮ್ಯಾ (Ramya) ಚಿತ್ರರಂಗಕ್ಕೆ (Sandalwood) ಕಾಲಿಟ್ಟು 20 ವರ್ಷಗಳಾಗಿವೆ. ಆರಂಭದ ವರ್ಷಗಳಿಗೆ ಹೋಲಿಸಿದರೆ ಈಗ ಸಾಕಷ್ಟು ಮಾಗಿದ್ದಾರೆ ರಮ್ಯಾ. ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ರಮ್ಯಾರನ್ನು ಜಂಭದ ಕೋಳಿಯೆಂದು, ಕಿರಿಕ್ ನಟಿಯೆಂದು ಚಿತ್ರರಂಗದವರೇ ಮೂದಲಿಸುತ್ತಿದ್ದರು. ಅವರೊಟ್ಟಿಗೆ ಕೆಲಸ ಮಾಡಿದವರು ರಮ್ಯಾಗೆ ಸಿಟ್ಟು ಹೆಚ್ಚು ಎಂದು ಹೇಳಿಕೊಂಡಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ರಮ್ಯಾ ಸಹ ಚಿತ್ರರಂಗದಲ್ಲಿ ಹಲವರೊಟ್ಟಿಗೆ ಜಗಳವಾಡಿ ಮನಸ್ತಾಪ ಮಾಡಿಕೊಟ್ಟುಕೊಂಡಿದ್ದರು. ಆದರೆ ಈಗ ವಯಸ್ಸಿನಲ್ಲಿ ಅನುಭವದಲ್ಲಿ ಮಾಗಿರುವ ರಮ್ಯಾ ಹಳೆಯ ಮುನಿಸುಗಳನ್ನು ಮರೆತಿದ್ದಾರೆ. ವೀಕೆಂಡ್ ವಿತ್ ರಮೇಶ್​ಗೆ ಬಂದಿದ್ದ ಅವರು ಎಲ್ಲರ ಬಗ್ಗೆ ಸವಿಯಾದ ಮಾತುಗಳನ್ನಾಡಿದ್ದಾರೆ.

ಜಸ್ಟ್ ಮಾತ್ ಮಾತಲ್ಲಿ, ಮುಸ್ಸಂಜೆ ಮಾತು, ರಂಗ ಎಸ್​ಎಸ್​ಎಲ್​ಸಿ ಸಿನಿಮಾಗಳಲ್ಲಿ ಸುದೀಪ್ (Sudeep) ಜೊತೆ ನಟಿಸಿದ್ದ ರಮ್ಯಾ ಅವರೊಟ್ಟಿಗೆ ಆ ಸಮಯದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು. ಆದರೆ ವೀಕೆಂಡ್ ವಿತ್ ರಮೇಶ್​ನಲ್ಲಿ ಸುದೀಪ್​ ಬಗ್ಗೆ ಮಾತನಾಡಿದ ನಟಿ, ನಾವಿಬ್ಬರೂ ಕೆಲಸ ಮಾಡುವ ಸಮಯದಲ್ಲಿ ಕೆಲವು ಏರು ಪೇರುಗಳಾಗಿದ್ದವು. ಆದರೆ ಸುದೀಪ್ ನನ್ನ ಆತ್ಮೀಯ ಗೆಳೆಯ. ಬಹಳ ಕೇರಿಂಗ್ ಪರ್ಸನ್, ಅಪ್ಪು ಹಾಗೂ ಸುದೀಪ್ ಇಬ್ಬರೂ ನನ್ನ ಆತ್ಮೀಯ ಗೆಳೆಯರು ಸುದೀಪ್​ಗೆ ಸದಾ ಒಳ್ಳೆಯದೇ ಆಗಬೇಕು ಎಂದರು.

ಇನ್ನು ಲಕ್ಕಿ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ನಟ ಯಶ್ ಜೊತೆಗೂ ರಮ್ಯಾ ಅವರಿಗೆ ಮನಸ್ತಾಪವಾಗಿತ್ತು. ಆದರೆ ಶೋನಲ್ಲಿ ನಿರೂಪಕ ರಮೇಶ್ ಅರವಿಂದ್ ಯಶ್ ಬಗ್ಗೆ ಕೇಳಿದಾಗ. ನಾವಿಬ್ಬರೂ ಕೆಲಸ ಮಾಡುವಾಗ ಅವರು ಬಹಳ ಸ್ವೀಟ್ ವ್ಯಕ್ತಿಯಾಗಿದ್ದರು. ಬಹಳ ಡೆಡಿಕೇಟೆಡ್ ಹಾಗೂ ಬಹಳ ಶಿಸ್ತಿನ ವ್ಯಕ್ತಿ ಆಗಿದ್ದರು ಎಂದರು.

ರಮ್ಯಾರ ಬದ್ಧ ಪ್ರತಿಸ್ಪರ್ಧಿ ಆಗಿದ್ದ ರಕ್ಷಿತಾ ಬಗ್ಗೆ ಮಾತನಾಡಿ, ನಾನು, ರಕ್ಷಿತಾ ಒಟ್ಟಿಗೆ ಚಿತ್ರರಂಗಕ್ಕೆ ಬಂದೆವು. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ ನಿರ್ದೇಶಕ ಮಹೇಶ್ ಬಾಬು ಇನ್ನಿತರೆ ಕೆಲವರು ನಮ್ಮಿಬ್ಬರ ನಡುವೆ ತಂದಿಡುವ ಕೆಲಸ ಮಾಡಿದರು ಎಂದು ತಮಾಷೆಯಾಗಿ ಹೇಳಿದರಲ್ಲದೆ, ನಾವಿಬ್ಬರೂ ಈಗ ಆತ್ಮೀಯ ಗೆಳತಿಯರು ಎಂದರು ರಮ್ಯಾ.

ಸಿದ್ಲಿಂಗು ಸಿನಿಮಾದ ಬಳಿಕ ಸಿನಿಮಾದ ನಿರ್ದೇಶಕ ವಿಜಯ್ ಪ್ರಸಾದ್ ಜೊತೆಗೂ ರಮ್ಯಾರಿಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದರೆ ವಿಜಯ್ ಪ್ರಸಾದ್, ವಿಡಿಯೋದಲ್ಲಿ ರಮ್ಯಾ ಬಗ್ಗೆ ಮಾತನಾಡಿ ಬಹಳ ಅವರ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು. ರಮ್ಯಾ ಸಹ, ಬೇರೆ ಯಾವುದೇ ನಿರ್ದೇಶಕ ಆಗಿದ್ದಿದ್ದರೂ ನಾನು ಆ ರೀತಿಯ ಡಬಲ್ ಮೀನಿಂಗ್ ಡೈಲಾಗ್​ಗಳನ್ನು ಹೇಳಲು ಒಪ್ಪುತ್ತಿರಲಿಲ್ಲ ಆದರೆ ವಿಜಯ್ ಪ್ರಸಾದ್​ ಗಾಗಿ ಸಿದ್ಲಿಂಗು ಸಿನಿಮಾದಲ್ಲಿ ಆ ರೀತಿಯ ಡೈಲಾಗ್​ಗಳನ್ನು ಹೇಳಿದೆ ಎಂದರು. ಅಂಬರೀಶ್ ಅವರೊಟ್ಟಿಗೂ ರಮ್ಯಾಗೆ ಮುನಿಸಿತ್ತು. ಆದರೆ ಅಂಬರೀಶ್ ಅವರು ತಮಗೆ ನೀಡಿದ್ದ ಉಡುಗೊರೆಯ ಬಗ್ಗೆ ಪ್ರೀತಿಯಿಂದ ರಮ್ಯಾ ಶೋನಲ್ಲಿ ಹೇಳಿಕೊಂಡರು. ಅಂಬರೀಶ್ ಅವರು ನಾಯಿಯೊಂದನ್ನು ರಮ್ಯಾಗೆ ಆಗ ನೀಡಿದ್ದರಂತೆ. ಆದರೆ ಆ ನಾಯಿ ಕಳೆದ ವರ್ಷವಷ್ಟೆ ತೀರಿಕೊಂಡಿತಂತೆ.

ತಮಿಳಿನ ನಟ ಸಿಂಭು ಜೊತೆಗೂ ರಮ್ಯಾ ಜಗಳ ಮಾಡಿಕೊಂಡಿದ್ದರು. ಆ ಬಗ್ಗೆ ಅವರೇ ಸ್ವತಃ ಮಾತನಾಡಿ, ಸಿಂಭು ಜೊತೆ ನಟಿಸಿದ ಮೊದಲ ಸಿನಿಮಾದ ಮೊದಲ ದಿನದಂದೇ ಅವರೊಟ್ಟಿಗೆ ದೊಡ್ಡ ಜಗಳ ಮಾಡಿದ್ದೆ. ಒಂದು ಡ್ಯಾನ್ಸ್ ಸ್ಟೆಪ್ ಅವರಿಗೆ ಹಾಕಲು ಬರಲಿಲ್ಲ ಅದರಿಂದ ಚೆನ್ನಾಗಿ ಬೈದಿದ್ದೆ. ಆ ನಂತರ ಅವರ ತಾಯಿ ಬಂದು ಸಿಂಭುಗೆ ಬುದ್ಧಿ ಹೇಳಿದರು ಎಂದು ನೆನಪಿಸಿಕೊಂಡು ನಕ್ಕರು ರಮ್ಯಾ.

ರಮ್ಯಾರ ಮೀರಾ ಮಾಧವ ರಾಘವ ಸಿನಿಮಾ ನಿರ್ದೇಶನ ಮಾಡಿದ್ದ ಟಿ.ಎನ್.ಸೀತಾರಾಮ್ ಮಾತನಾಡಿ, ರಮ್ಯಾ ನಮ್ಮ ಸಿನಿಮಾದಲ್ಲಿ ನಟಿಸಲ್ಲ ಎಂದುಕೊಂಡಿದ್ದೆ ಆದರೆ ಕತೆ ಕೇಳಿದ ಕೂಡಲೇ ಒಪ್ಪಿದರು. ಆ ಬಳಿಕ ನನಗೆ ಭಯವಿತ್ತು ರಮ್ಯಾಗೆ ಬಹಳ ಜಂಭ ಎಂದುಕೊಂಡಿದ್ದೆ. ಆದರೆ ಒಂದು ದಿನವೂ ನನಗೆ ಹಾಗೆ ಅನ್ನಿಸಲೇ ಇಲ್ಲ ಎಂದರು. ಇನ್ನು ಎಕ್ಸ್​ಮ್ಯೂಸ್​ ಮೀ ಸಿನಿಮಾದ ನಿರ್ಮಾಪಕ ಮಾತನಾಡಿ, ರಮ್ಯಾ ಅವರಿಗೆ ಸ್ವಲ್ಪ ಕೋಪ ಅಷ್ಟೆ ಆದರೆ ಅವರೊಬ್ಬ ಸ್ನೇಹಜೀವಿ, ಪರಿಶ್ರಮಿ, ಅವರಂಥಹಾ ನಟಿ ಇನ್ಯಾರೂ ಇಲ್ಲ ಎಂದರು. ಇನ್ನೂ ಒಂದಿಬ್ಬರು ರಮ್ಯಾಗೆ ತುಸು ಕೋಪ ಇತ್ತು ಎಂದು ಹೇಳಿದರು. ಆದರೆ ರಮ್ಯಾ ಈಗ ಸಾಕಷ್ಟು ಬದಲಾಗಿದ್ದಾರೆ ಅದು ಮೊದಲಿಗಿಂತಲೂ ಹೆಚ್ಚು ಪ್ರಬುದ್ಧರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ