ಶಿವಮೊಗ್ಗದ ಮುಗ್ಧ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತು ‘ಜಾತ್ಯಾತೀತ’ ಸಿದ್ದರಾಮಯ್ಯರಿಗಿದೆಯೇ? ಬಿಜೆಪಿ ಪ್ರಶ್ನೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 02, 2023 | 8:34 AM

shivamogga violence: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್​​ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಸರ್ಕಾರವನ್ನು ಜಿಹಾದಿ ಸರ್ಕಾರ ಎಂದು ಕರೆದಿದೆ.

ಶಿವಮೊಗ್ಗದ ಮುಗ್ಧ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತು  ‘ಜಾತ್ಯಾತೀತ’ ಸಿದ್ದರಾಮಯ್ಯರಿಗಿದೆಯೇ? ಬಿಜೆಪಿ ಪ್ರಶ್ನೆ
ಸಿಎಂ ಸಿದ್ದರಾಮಯ್ಯ
Follow us on

ಶಿವಮೊಗ್ಗ, (ಅಕ್ಟೋಬರ್ 02): ಇಷ್ಟು ದಿನ ತಣ್ಣಗಿದ್ದ ಶಿವಮೊಗ್ಗ (Shivamogga) ಮತ್ತೆ ರಣರಂಗವಾಗಿದೆ. ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದು(Stone pelting)  ಪರಿಸ್ಥಿತಿ ಉದ್ವಿಗ್ನವಾಗಿದೆ. ಕಿಡಿಗೇಡಿಗಳು ಸಿಕ್ಕ ಸಿಕ್ಕ ಕಡೆ ಕಲ್ಲು ತೂರಿದ್ದು ಕಾರು, ಬೈಕ್, ಆಟೋಗಳು ಜಖಂಗೊಂಡಿವೆ. ಇನ್ನು ಗಲಾಟೆ ವೇಳೆ 7ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು ಆಸ್ಪತ್ರೆ ಸೇರಿದ್ದಾರೆ. ಇದರಿಂದ ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಇನ್ನು ಈ ಘಟನೆಗೆ ಕರ್ನಾಟಕ ಬಿಜೆಪಿ ಖಂಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಬಿಜೆಪಿ, ಹಿಂದೂಗಳು ಇರುವ ಹಾಗಿಲ್ಲವಾ? ಹಿಂದೂಗಳಿಗೆ ರಕ್ಷಣೆ ಕೊಡುವುದಿಲ್ಲವೇ? ಶಿವಮೊಗ್ಗದ ಮುಗ್ಧ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತು ‘ಜಾತ್ಯಾತೀತ’ ಸಿದ್ದರಾಮಯ್ಯರಿಗಿದೆಯೇ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ, ಪರಿಸ್ಥಿತಿ ಉದ್ವಿಗ್ನ

ತಲ್ವಾರ್ ಮೆರವಣಿಗೆ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತದೆ. ಇದಕ್ಕೆ ಅನುಮತಿ ನೀಡಿದ ಕಾಂಗ್ರೆಸ್ ಸರ್ಕಾರವೇ ತಿಳಿಸಬೇಕು . ಹಿಂದೂಗಳನ್ನು ಮುಗಿಸುತ್ತೇವೆ ಎಂದು ಹೇಳಿದ ಜಿಹಾದಿ ಸಂಘಟನೆಗಳಿಗೆ . ಬೆಂಬಲವಾಗಿ ಕಾಂಗ್ರೆಸ್ ಸರ್ಕಾರ ನಿಂತಿರುವುದಕ್ಕೆ ಬೇರೇನು ಸಾಕ್ಷಿ ಬೇಕು. ಗಣೇಶ ಚತುರ್ಥಿಗೆ ಹಿಂದೂಗಳು ಸ್ಥಾಪಿಸುವ ಗಣಪತಿಗೆ ನೂರೆಂಟು ಅನುಮತಿ ಕೇಳುವ ಕೈ ಸರ್ಕಾರ, ಸಮಾಜದ ಶಾಂತಿ ಕದಡುವ ಇಂತಹ ಮೆರವಣಿಗೆಗಳಿಗೆ ಅನುಮತಿ ನೀಡಿದ್ದರ ಹಿನ್ನಲೆ ಏನು..? ಈ ಜಿಹಾದಿ ಸರ್ಕಾರದಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಟೀಕಿಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ