ಕಿವಿಗೆ ಹೂವಿಟ್ಟ ಕಾಂಗ್ರೆಸ್ಸಿಗರು ಚೆನ್ನಾಗಿ ಕಾಣುತ್ತಿದ್ದರು, ಸದಾ ಕಾಲ ಹೂವು ಇಟ್ಟುಕೊಂಡೇ ಇರಲಿ: ಸಿಎಂ ಬೊಮ್ಮಾಯಿ

ಹೂವು ಇಟ್ಟುಕೊಂಡಿದ್ದರಿಂದ ಕಾಂಗ್ರೆಸ್ಸಿಗರು ಚೆನ್ನಾಗಿ ಕಂಡರು. ಆದರೆ ಹಳ್ಳಿಗಳ ಜನರ ಭಾವನೆಗೆ ಕಾಂಗ್ರೆಸ್‌ನವರಿಂದ ಧಕ್ಕೆ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಕಿವಿಗೆ ಹೂವಿಟ್ಟ ಕಾಂಗ್ರೆಸ್ಸಿಗರು ಚೆನ್ನಾಗಿ ಕಾಣುತ್ತಿದ್ದರು, ಸದಾ ಕಾಲ ಹೂವು ಇಟ್ಟುಕೊಂಡೇ ಇರಲಿ: ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Edited By:

Updated on: Feb 17, 2023 | 7:21 PM

ಬೆಂಗಳೂರು: ಕಿವಿಗೆ ಹೂವು ಇಟ್ಟುಕೊಂಡಿದ್ದರಿಂದ ಇಂದು ಕಾಂಗ್ರೆಸ್ ನಾಯಕರು (Congress Leaders) ಚೆನ್ನಾಗಿ ಕಾಣುತ್ತಿದ್ದರು. ಹೀಗಾಗಿ ಅವರು ಖಾಯಂ ಆಗಿ ಕಿವಿಗೆ ಹೂವು ಇಟ್ಟುಕೊಂಡು ಓಡಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಇಂದು ತಮ್ಮ ಅಧಿಕಾರವಾಧಿಯ ಕೊನೆಯ ಬಜೆಟ್ ಮಂಡಿಸಿದ ಸಿಎಂ ಬೊಮ್ಮಾಯಿ ಅವರು ಟಿವಿ9 ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಮಾತನಾಡಿ, ಕಾಂಗ್ರೆಸ್​ನವರು ಬಜೆಟ್ ಟೀಕಿಸಲು ಕಿವಿಗೆ ಹೂವು ಇಡುವ ಮೂಲಕ ಹಳ್ಳಿಗಳ ಜನರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಹಳ್ಳಿಗಳಲ್ಲಿ ದೇವರಪೂಜೆ, ತೇರಿನ ವೇಳೆ ಹೂವು ಇಟ್ಟುಕೊಳ್ಳುತ್ತಾರೆ ಎಂದರು.

ಇನ್ನು, ಬಜೆಟ್​ನಲ್ಲಿ ರಾಮನಗರದಲ್ಲಿ ಬೃಹತ್ ರಾಮ ಮಂದಿರ ನಿರ್ಮಾಣದ ಬಗ್ಗೆ ಘೋಷಣೆ ಮಾಡಲಾಗಿದ್ದು, ಇದಕ್ಕೆ ಟೀಕೆ ವ್ಯಕ್ತಪಡಿಸಿದ್ದ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಇಷ್ಟು ವರ್ಷಗಳಿಂದ ರಾಮನಗರದ ಜನತೆ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿದ್ದರು. ರಾಮನಗರದಲ್ಲಿ ಅಷ್ಟು ನಂಟಿದ್ದು ಮಂದಿರವನ್ನು ಮಾಡಿಲ್ಲ. ಆದರೆ ಈಗ ನಾವು ಘೋಷಣೆ ಮಾಡಿದಾಗ ನಾನೇ ರಾಮನಗರದಲ್ಲಿ ರಾಮಮಂದಿರ ಮಾಡುತ್ತೇನೆ ಎನ್ನುತ್ತಿದ್ದಾರೆ. ಅವರ ಮನಸ್ಸಿನಲ್ಲಿ ರಾಮ ಬಂದಿದ್ದಾನಲ್ಲ ಅಷ್ಟೇ ಸಮಾಧಾನ ಎಂದು ಟಾಂಗ್ ನೀಡಿದರು.

ಇದನ್ನೂ ಓದಿ: ಕರ್ನಾಟಕ ಬಜೆಟ್​​​ನ ಹಲವು ವಿಶೇಷಗಳು

ರಾಮಮಂದಿರ ಬಿಜೆಪಿಯವರು ಘೋಷಣೆ ಮಾಡಿದರೂ ಅದನ್ನು ಕಟ್ಟುವ ಜವಾಬ್ದಾರಿ ನನ್ನ ಮೇಲೆ ಬರಬಹುದು. ಏಕೆಂದರೆ ಮುಂದಿನ ಬಾರಿ ಬಿಜೆಪಿ ಸರ್ಕಾರ ಬರುವುದಿಲ್ಲ, ನನ್ನ ನೇತೃತ್ವದಲ್ಲೇ ಸರ್ಕಾರ ಬರಲಿದೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಕುಮಾರಸ್ವಾಮಿ ಹೀಗೆಯೇ ಮಾತಾಡಿಕೊಂಡು ಇರಲಿ. ರಾಜ್ಯದಲ್ಲಿ ಮತ್ತೆ ನಮ್ಮದೇ ಸರ್ಕಾರ ಬಂದು ರಾಮಮಂದಿರ ನಾವೇ ಕಟ್ಟುತ್ತೇವೆ. ಮಂದಿರ ಲೋಕಾರ್ಪಣೆಗೆ ಕುಮಾರಸ್ವಾಮಿಗೆ ಆಹ್ವಾನ ನೀಡುತ್ತೇವೆ ಎಂದರು.

ಆಗದಿರುವಂತಹ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ

ಚುನಾವಣೆ ಹೊಸ್ತಿಲಲ್ಲಿ ಮಂಡಿಸಿರುವ ಬಜೆಟ್ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಘೋಷಿಸಿರುವ ಯೋಜನೆಗಳನ್ನು ಜನರಿಗೆ ತಲುಪಿಸಲು ಬದ್ಧರಿದ್ದೇವೆ. ಆಗದಿರುವಂತಹ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಅಧಿಕಾರ, ಹಣಕಾಸು ವಿಕೇಂದ್ರೀಕರಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ಹೆಚ್ಚು ಜನಸಂಖ್ಯೆಯಿರುವ ಗ್ರಾಮ ಪಂಚಾಯಿತಿಗಳಿಗೆ 68 ಲಕ್ಷ ಅನುದಾನ ಘೋಷಿಸಿದ್ದೇವೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:17 pm, Fri, 17 February 23