Karnataka cabinet ದೇವರು, ಗೋಮಾತೆ ಮತ್ತು ರೈತರ ಹೆಸರಲ್ಲಿ ನೂತನ ಸಚಿವರ ಪ್ರಮಾಣ ವಚನ

| Updated By: ರಶ್ಮಿ ಕಲ್ಲಕಟ್ಟ

Updated on: Aug 04, 2021 | 5:36 PM

Karnataka Cabinet Expansion:ಸಾಂಪ್ರಾದಾಯಿಕ ಲಂಬಾಣಿ ಉಡುಪು ಧರಿಸಿ ಆಗಮಿಸಿದ ಪ್ರಭು ಚೌಹಾಣ್ ಗೋಮಾತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಲಿಂಗಾಯತ ಉಪ ಪಂಗಡದ ಜನಪ್ರಿಯ ನಾಯಕ ಮುರುಗೇಶ್ ನಿರಾಣಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ.

Karnataka cabinet ದೇವರು, ಗೋಮಾತೆ ಮತ್ತು ರೈತರ ಹೆಸರಲ್ಲಿ ನೂತನ ಸಚಿವರ ಪ್ರಮಾಣ ವಚನ
ನೂತನ ಸಚಿವ ಸಂಪುಟ
Follow us on

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಆಗಿದ್ದು ಬೆಂಗಳೂರಿನ ರಾಜಭವನದಲ್ಲಿ ಇಂದು ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಳೆದ ವಾರ ಪ್ರಮಾಣವಚನ ಸ್ವೀಕರಿಸಿದ ನೂತನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಮಾರಂಭದಲ್ಲಿ ಹಾಜರಿದ್ದರು.ರಾಜ್ಯಪಾಲ ತಾವರ್‌ಚಂದ್ ಗೆಹಲೋತ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

ಒಟ್ಟು 29 ಬಿಜೆಪಿ ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ವಿಶೇಷವೆಂದರೆ ಅವರಲ್ಲಿ ಕೆಲವರು ರೈತರು, ದೇವರು ಮತ್ತು ಗೋಮಾತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪಕ್ಷಾಂತರ ಮಾಡಿದವರಲ್ಲಿ ಆನಂದ್ ಸಿಂಗ್, ವಿಜಯನಗರ ವಿರುಪಾಕ್ಷ ಮತ್ತು ‘ತಾಯಿ’ ತಾಯಿ ಭುವನೇಶ್ವರಿ (ಕರ್ನಾಟಕದಲ್ಲಿ ಪೂಜ್ಯ ದೇವತೆ) ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಸಾಂಪ್ರಾದಾಯಿಕ ಲಂಬಾಣಿ ಉಡುಪು ಧರಿಸಿ ಆಗಮಿಸಿದ ಪ್ರಭು ಚೌಹಾಣ್ ಗೋಮಾತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಲಿಂಗಾಯತ ಸಮುದಾಯದ ಜನಪ್ರಿಯ ನಾಯಕ ಮುರುಗೇಶ್ ನಿರಾಣಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ.


ಈ ಬಾರಿ ಉಪಮುಖ್ಯಮಂತ್ರಿಗಳು ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲೇ ಘೋಷಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಿರಿಯ ಪುತ್ರ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಇಂದು ಪ್ರಮಾಣವಚನ ಸ್ವೀಕರಿಸಿದವರಲ್ಲಿ ಇಲ್ಲ ಎಂದು ಅವರು ಹೇಳಿದರು.

ಪ್ರಮಾಣವಚನ ಸಮಾರಂಭದ ಮೊದಲು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, “ಒಟ್ಟು 29 ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಲಿದ್ದಾರೆ, ಮತ್ತು ಬಿಎಸ್ ಯಡಿಯೂರಪ್ಪ ನೇತೃತ್ವದ ಹಿಂದಿನ ಸಚಿವ ಸಂಪುಟದಲ್ಲಿ ಮೂವರು ಉಪ ಮುಖ್ಯಮಂತ್ರಿಗಳಿದ್ದರು. ಹೈಕಮಾಂಡ್ ನಿರ್ದೇಶನದ ಪ್ರಕಾರ ಈ ಬಾರಿ ಯಾರೂ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಅಸ್ತಿತ್ವಕ್ಕೆ; ಸಚಿವರ ಜಾತಿವಾರು, ಪ್ರದೇಶವಾರು ಲೆಕ್ಕಾಚಾರ, ಸಮಗ್ರ ವರದಿ ಹೀಗಿದೆ

ಇದನ್ನೂ ಓದಿ: Tokyo Olympics: ಫೈನಲ್​ಗೇರುವ ಭಾರತ ಮಹಿಳಾ ಹಾಕಿ ತಂಡದ ಕನಸು ಭಗ್ನ: ಸೆಮೀಸ್​ನಲ್ಲಿ ಅರ್ಜೇಂಟಿನಾ ವಿರುದ್ಧ ಸೋಲು

(Karnataka cabinet God Gomatha and Farmers swearing taking ceremony of Karnataka ministers in Unique Ways)