ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವುದರ ಖರ್ಚು ವೆಚ್ಚಗಳ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಹಲವು ಬಾರಿ ಪ್ರಧಾನಿ ಅನೇಕ ಜಿಲ್ಲೆಗಳಿಗೆ ಆಗಮಿಸಿದ್ದಾರೆ. ಹಲವಾರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ. ರೋಡ್ ಶೋಗಳನ್ನೂ ನಡೆಸಿದ್ದಾರೆ. ಈ ಪೈಕಿ ಮೋದಿ ಅವರ ಕೆಲವು ಭೇಟಿಗಳಿಗೆ ಮಾಡಲಾಗಿದೆ ಎನ್ನಲಾದ ಖರ್ಚುಗಳ ಬಗ್ಗೆ ಕಾಂಗ್ರೆಸ್ ಉಲ್ಲೇಖಿಸಿದೆ.
ಮೋದಿ ಅವರ ಶಿವಮೊಗ್ಗ ಕಾರ್ಯಕ್ರಮದ ಖರ್ಚು 25 ಕೋಟಿ ರೂ. ಧಾರವಾಡ ಕಾರ್ಯಕ್ರಮಕ್ಕೆ 9 ಕೋಟಿ ರೂ. ಖರ್ಚಾಗಿದೆ. ಮೋದಿಯ ಪ್ರತಿ ಭೇಟಿಯ ಖರ್ಚು ಸರಾಸರಿ 15 ಕೋಟಿ ರೂ. ಚುನಾವಣೆ ಮುಗಿಯುವುದರಲ್ಲಿ 1000 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಹೊರೆಯಾದರೂ ಅಚ್ಚರಿ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮೋದಿ ಭೇಟಿಯ ಖರ್ಚುನ್ನು ಕೇಂದ್ರ ಸರ್ಕಾರವೇ ಭರಿಸಲು ಹೇಳಿ ಅಥವಾ ಅದಾನಿ, ಅಂಬಾನಿಯಾದರೂ ಭರಿಸಲಿ! ಎಂದು ಕಾಂಗ್ರೆಸ್ ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.
?ಮೋದಿಯ ಶಿವಮೊಗ್ಗ ಕಾರ್ಯಕ್ರಮದ ಖರ್ಚು – 25 ಕೋಟಿ
?ಧಾರವಾಡ ಕಾರ್ಯಕ್ರಮ – 9 ಕೋಟಿ
?ಮೋದಿಯ ಪ್ರತಿ ಭೇಟಿಯ ಖರ್ಚು ಸರಾಸರಿ 15 ಕೋಟಿ
ಚುನಾವಣೆ ಮುಗಿಯುವುದರಲ್ಲಿ ₹1000 ಕೋಟಿ ಬೊಕ್ಕಸಕ್ಕೆ ಹೊರೆಯಾದರೂ ಅಚ್ಚರಿ ಇಲ್ಲ.@BSBommai ಅವರೇ, ಮೋದಿ ಭೇಟಿಯ ಖರ್ಚುನ್ನು ಕೇಂದ್ರ ಸರ್ಕಾರವೇ ಭರಿಸಲು ಹೇಳಿ,
ಅಥವಾ ಅದಾನಿ, ಅಂಬಾನಿಯಾದರೂ ಭರಿಸಲಿ!— Karnataka Congress (@INCKarnataka) April 8, 2023
ಇದನ್ನೂ ಓದಿ: PM Modi Mysuru Visit: ಇಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ, ಸಂಚಾರ ಮಾರ್ಗಗಳಲ್ಲಿ ಬದಲಾವಣೆ, ಬದಲಿ ಮಾರ್ಗ ಹೀಗಿದೆ
ಇತ್ತೀಚೆಗೆ ಕೊನೆಯದಾಗಿ ಚಿಕ್ಕಬಳ್ಳಾಪುರ, ಬೆಂಗಳೂರು ಹಾಗೂ ದಾವಣಗೆರೆಗೆ ಮೋದಿ ಭೇಟಿ ನೀಡಿದ್ದರು. ಅದಕ್ಕೂ ಮುನ್ನ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಲೋಕಾರ್ಪಣೆಗೆ ಮಂಡ್ಯಕ್ಕೆ ಆಗಮಿಸಿದ್ದರು. ಇದೀಗ ಮತ್ತೆ ಇಂದು (ಏಪ್ರಿಲ್ 8) ಮೈಸೂರಿಗೆ ಆಗಮಿಸುತ್ತಿದ್ದಾರೆ.
ನಾಳೆಯಿಂದ (ಏಪ್ರಿಲ್ 9) ಮೂರು ದಿನಗಳ ಕಾಲ ನಡೆಯುವ ಹುಲಿ ಸಂರಕ್ಷಣೆ ಸಂಬಂಧಿತ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಜಿಲ್ಲೆಗೆ ಆಗಮಿಸಲಿದ್ದಾರೆ. ಮೈಸೂರಿಗೆ ಆಗಮಿಸುತ್ತಿರುವ ಮೋದಿ, ಪ್ರತಿಷ್ಠಿತ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 6.20ಕ್ಕೆ ಹೋಟೆಲ್ನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಂಡೀಪುರಕ್ಕೆ ತೆರಳಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ