ಕಲಬುರಗಿ: ಹಾನಗಲ್ ಕಾಂಗ್ರೆಸ್ ಟಿಕೆಟ್ ಮಾನೆಗೆ ಕೊಡಿಸಲು ಯತ್ನಿಸಲಾಗುತ್ತಿದೆ. ಟಿಕೆಟ್ ಕೊಡಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಕಲಬುರಗಿ ನಗರದಲ್ಲಿ ಮನೋಹರ್ ತಹಶೀಲ್ದಾರ್ ಹೇಳಿಕೆ ನೀಡಿದ್ದಾರೆ. ನಾನು ಇದ್ದರೂ, ಸತ್ತರೂ ಕಾಂಗ್ರೆಸ್ ಪಕ್ಷದಲ್ಲಿ ಇರುತ್ತೇನೆ. ನನಗೆ ಅನ್ಯಾಯವಾದರೂ ಸಹಿಸಿಕೊಂಡು ಪಕ್ಷದಲ್ಲಿದ್ದೇನೆ. ಈ ಬಾರಿ ಹಾನಗಲ್ ಕಾಂಗ್ರೆಸ್ ಟಿಕೆಟ್ ನನಗೆ ಕೊಡಬೇಕು. ಹಿಂದಿನ ಚುನಾವಣೆಯಲ್ಲೇ ಶ್ರೀನಿವಾಸ ಮಾನೆಗೆ ಹೇಳಿದ್ದೆ. ಸೋತರೆ ಕ್ಷೇತ್ರ ಖಾಲಿ ಮಾಡುವಂತೆ ಮಾನೆಗೆ ಹೇಳಿದ್ದೆ ಎಂದು ತಿಳಿಸಿದ್ದಾರೆ.
ಈ ಬಾರಿ ಅವರಿಗೆ ಟಿಕೆಟ್ ಕೊಡಬೇಕೆಂದು ಆಗ್ರಹ ಇದೆ. ಆದರೆ ಸ್ಥಳೀಯರಿಗೆ ಟಿಕೆಟ್ ಕೊಡಬೇಕೆಂದು ಒತ್ತಾಯಿಸುವೆ. ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ. ಹೊರಗಿನವರನ್ನು ತಂದು ನಮ್ಮ ತಲೆಯ ಮೇಲೆ ಹೇರಬೇಡಿ ಎಂದು ನಾಯಕರಿಗೆ ಹೇಳಿದ್ದೇನೆ ಎಂದು ಮನೋಹರ್ ತಹಶೀಲ್ದಾರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ: ಸಿ.ಎಂ. ಉದಾಸಿ ಕುಟುಂಬದವರಿಗೆ ಬಿಜೆಪಿ ಟಿಕೆಟ್ ನೀಡುತ್ತಾರೆ
ಅಕ್ಟೋಬರ್ 30ರಂದು ಹಾನಗಲ್ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ದಿ. ಸಿ.ಎಂ. ಉದಾಸಿ ಪತ್ನಿಗೆ ಬಿಜೆಪಿ ಟಿಕೆಟ್ ಕೊಡುತ್ತಾರೆ ಎಂದು ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಹೇಳಿದ್ದಾರೆ. ಶಿವಕುಮಾರ ಉದಾಸಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದೇನೆ. ಬಿ.ವೈ. ವಿಜಯೇಂದ್ರಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪವಾಗಿಲ್ಲ. ಸಿ.ಎಂ. ಉದಾಸಿ ಕುಟುಂಬದವರಿಗೆ ಬಿಜೆಪಿ ಟಿಕೆಟ್ ನೀಡುತ್ತಾರೆ. ಎಲ್ಲವೂ ಶಿವಕುಮಾರ ಉದಾಸಿ ನಿರ್ಧಾರದ ಮೇಲೆ ನಿಂತಿದೆ. ಸಿಎಂ ಬೊಮ್ಮಾಯಿಗೆ ಉಪಚುನಾವಣೆ ಪ್ರತಿಷ್ಠೆಯಾಗಿದೆ. ಸಿಎಂಗೆ ಸಿಂದಗಿ, ಹಾನಗಲ್ ಗೆಲ್ಲಬೇಕೆನ್ನುವ ಹುಮ್ಮಸ್ಸಿದೆ ಎಂದು ಬಚ್ಚೇಗೌಡ ತಿಳಿಸಿದ್ದಾರೆ.
ಬೆಳಗಾವಿ: ಸತೀಶ್ ಜಾರಕಿಹೊಳಿ ಮಕ್ಕಳು ರಾಜಕಾರಣಕ್ಕೆ ತಯಾರು
ಬಿಜೆಪಿಯ 40 ಶಾಸಕರು ಕಾಂಗ್ರೆಸ್ ಬರುವುದಾಗಿ ಹೇಳಿಕೆ ನೀಡಿದ್ದಾರೆ ಎಂಬ ರಾಜು ಕಾಗೆ ಹೇಳಿಕೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ವರಿಷ್ಠರ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿರುವುದು ನಿಜ. ಬೆಂಗಳೂರು ಹಂತದಲ್ಲಿ ಈ ಬಗ್ಗೆ ಚರ್ಚಿಸಿರುವುದು ನಿಜ. ಆದರೆ, ಎಷ್ಟು ಜನ ಕಾಂಗ್ರೆಸ್‌ಗೆ ಬರುತ್ತಾರೆಂದು ಮಾಹಿತಿ ಇಲ್ಲ ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಂಜಯ್ ಪಾಟೀಲ್ ನಾಲಗೆ ಹರಿಬಿಟ್ಟ ವಿಚಾರವಾಗಿ ಜಾರಕಿಹೋಳಿ ಮಾತನಾಡಿದ್ದಾರೆ. ಸಂಜಯ್ ಪಾಟೀಲ್‌ಗೆ ಹೀಗೆ ಹೇಳಿಕೆ ಕೊಡೋದು ಹೊಸದಲ್ಲ. ಈ ಹಿಂದೆ ಅಧಿಕಾರದಲ್ಲಿ ಇದ್ದಾಗಲೂ ಹೀಗೆ ಹೇಳಿಕೆ ನೀಡುತ್ತಿದ್ದರು. ಸಂಜಯ್ ಪಾಟೀಲ್ ಈಗಲೂ ಅದೇ ರೀತಿ ಹೇಳಿಕೆ ನೀಡ್ತಿದ್ದಾರೆ. ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಪ್ರಿಯಾಂಕಾ, ರಾಹುಲ್ ಇಬ್ಬರೂ ಸಮಾಜ ಸೇವೆಗೆ ತಯಾರಿ ಆಗುತ್ತಿದ್ದಾರೆ. 2 ವರ್ಷದ ಮೊದಲೇ ಹೇಳಿದ್ದಂತೆ ತಯಾರು ಮಾಡುತ್ತಿದ್ದೇವೆ. ಮತ್ತೆ ನಾನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವೆ. ಲಖನ್ ಜಾರಕಿಹೊಳಿ ನಮ್ಮ ಪಕ್ಷದಲ್ಲಿಲ್ಲ, ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇದನ್ನೂ ಓದಿ: ಸಂವಿಧಾನ ಬದಲಾವಣೆ ಮಾಡ್ತೇವೆ ಎನ್ನುವವರು ಶೋಷಿತರು, ಅವಕಾಶ ವಂಚಿತರ ವಿರೋಧಿಗಳು: ಸಿದ್ದರಾಮಯ್ಯ
ಇದನ್ನೂ ಓದಿ: ಉಪಚುನಾವಣೆಯಲ್ಲಿ ಜೆಡಿಎಸ್ನಿಂದ ಮುಸ್ಲಿಂ ಅಭ್ಯರ್ಥಿ ವಿಚಾರ; ಸಿದ್ದರಾಮಯ್ಯ, ಕುಮಾರಸ್ವಾಮಿ ವಾಕ್ಸಮರ
Published On - 4:23 pm, Sun, 3 October 21