ಕಾಂಗ್ರೆಸ್ ಪಾಲಿನ ಕಾಂಟ್ರವರ್ಸಿ ಕಿಂಗ್ ಆಗುತ್ತಿರುವ ಕೋಟಿ ಕುಬೇರ ಕೆಜಿಎಫ್ ಬಾಬು; ಡಿಕೆಶಿಗೆ ಮುಜುಗರ

ಕೆಪಿಸಿಸಿ ಅಧ್ಯಕ್ಷರ ಶಿಷ್ಯ ಎನ್ನುತ್ತಲೇ ಪದೇಪದೇ ಕಾಂಟ್ರವರ್ಸಿಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಕೆಜಿಎಫ್ ಬಾಬು ಕಾಂಗ್ರೆಸ್ ಪಕ್ಷದ ಕಾಂಟ್ರವರ್ಸಿ ಕಿಂಗ್ ಆಗುತ್ತಿದ್ದಾರೆ. ಇದು ಡಿ.ಕೆ.ಶಿವಕುಮಾರ್ ಅವರನ್ನು ಮುಜುಗರಕ್ಕೀಡು ಮಾಡುತ್ತಿದೆ.

ಕಾಂಗ್ರೆಸ್ ಪಾಲಿನ ಕಾಂಟ್ರವರ್ಸಿ ಕಿಂಗ್ ಆಗುತ್ತಿರುವ ಕೋಟಿ ಕುಬೇರ ಕೆಜಿಎಫ್ ಬಾಬು; ಡಿಕೆಶಿಗೆ ಮುಜುಗರ
ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಶರೀಫ್
Follow us
TV9 Web
| Updated By: Rakesh Nayak Manchi

Updated on:Aug 31, 2022 | 3:09 PM

ಬೆಂಗಳೂರು: ರೋಲ್ಸ್ ರಾಯ್ಸ್ ಕಾರಿನ ಟ್ಯಾಕ್ಸ್ ವಿಚಾರದಲ್ಲಿ ಮೊದಲ ಬಾರಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಕಾಂಗ್ರೆಸ್​ನ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ನಂತರ ಸಾಲುಸಲು ಕಾಂಟ್ರವರ್ಸಿಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಆ ಮೂಲಕ ನಿಧಾನವಾಗಿ ಕಾಂಗ್ರೆಸ್ ಪಕ್ಷದ ಕಾಂಟ್ರವರ್ಸಿ ಕಿಂಗ್ ಆಗುತ್ತಿದ್ದಾರೆ. ಸದಾ ಒಂದಲ್ಲಾ ಒಂದು ವಿವಾದಲ್ಲಿ ತೊಡಗಿಕೊಂಡು ತಾನು ಕೆಪಿಸಿಸಿ ಅಧ್ಯಕ್ಷರ ಶಿಷ್ಯ ಎನ್ನುತ್ತಿರುವುದು ಡಿ.ಕೆ.ಶಿವಕುಮಾರ್ ಅವರನ್ನು ಮತ್ತಷ್ಟು ಮುಜುಗರ ಉಂಟುಮಾಡುತ್ತಿದೆ. ಕೆಜಿಎಫ್ ಬಾಬು ಅವರು ತಮ್ಮ ಮೈಮೇಲೆ ಎಳೆದುಕೊಂಡಿರುವ ವಿವಾದಗಳು ಒಂದಾ? ಎರಡಾ? ಈ ಬಗ್ಗೆ ವಿವರ ಇಲ್ಲಿದೆ ನೋಡಿ.

ರೋಲ್ಸ್ ರಾಯ್ಸ್ ಕಾರಿನ ಟ್ಯಾಕ್ಸ್ ವಿಚಾರದಲ್ಲಿ ಮೊದಲು ಕಾಂಟ್ರವರ್ಸಿ ಶುರು ಮಾಡಿದ ಉದ್ಯಮಿಯೂ ಆಗಿರುವ ಕಾಂಗ್ರೆಸ್ ಪಕ್ಷದ ಕೆಜಿಎಫ್ ಬಾಬುಗೆ ಈ ಮೊದಲು ಸ್ಥಳೀಯ ಸಂಸ್ಥೆಗಳಿಂದ ಪರಿಷತ್​ಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಕ್ಕಿತ್ತು. ಈ ವೇಳೆ ಬಾಬುಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಚುನಾವಣೆಯಲ್ಲಿ ಕೋಟಿ ಕುಬೇರನಿಗೆ ಸೋಲಾಗುತ್ತದೆ. ಇದಾದ ಬಳಿಕ ಕುಬೇರನಿಗೆ ಎದುರಾಗಿದ್ದು ಇಡಿ ಆಘಾತ.

ಚುನಾವಣೆ ನಂತರ ಅಕ್ರಮ ಹಣ ವರ್ಗಾವಣೆ, ಖಾಸಗಿ ಡೈರಿಯಲ್ಲಿ ಹಣ ವರ್ಗಾವಣೆ ವಿಚಾರದಲ್ಲಿ ಕೆಜಿಎಫ್ ಬಾಬು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅದರಂತೆ ಜಾರಿ ನಿರ್ದೇಶನಾಲಯವು ಕೆಜಿಎಫ್ ಬಾಬುಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸುತ್ತಾರೆ. ನೋಟಿಸ್ ಹಿನ್ನೆಲೆ ಬಾಬು ಇಡಿ ಕಚೇರಿಗೆ ಹಾಜರಾಗಿ ವಿಚಾರಣೆಯನ್ನು ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿ ಕೋಲಾರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಘೋಷಣೆ ಮಾಡಲಾಗುತ್ತದೆ.

ಕೋಲಾರದಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ ಮಾಡಿದ್ದ ಕೆಜಿಎಫ್ ಬಾಬು ಮಕ್ಕಳಿಗೆ 500 ರೂ. 1000 ರೂ. ಹಾಗೂ 2000ರೂ. ಸ್ಕಾಲರ್ ಶಿಪ್ ಚೆಕ್ ನೀಡಿದ್ದರು. ಆದರೆ ಈ ಚೆಕ್​ಗಳೆಲ್ಲವೂ ಬೌನ್ಸ್ ಆದ ಹಿನ್ನೆಲೆ ರಾತ್ರೋರಾತ್ರಿ ಚೆಕ್ ಹಿಂಪಡೆದು ನಗದು ವಿತರಣೆ ಮಾಡಿದ್ದರು. ಬಳಿಕ ಸುದ್ದಿಲ್ಲದೆ ಚಿಕ್ಕಪೇಟೆಗೆ ಎಂಟ್ರಿ ಕೊಟ್ಟರು.

ಚಿಕ್ಕಪೇಟೆಯಲ್ಲಿ ಚುನಾವಣೆ ಕಣಕ್ಕಿಳಿಯಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ಕೊಡಲಿ ಅಥವಾ ಕೊಡದೇ ಇರಲಿ, ತಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಸವಾಲ್ ಹಾಕಿದ್ದರು. ಕಾಂಗ್ರೆಸ್ ಪಕ್ಷವನ್ನು ಕ್ಯಾರೇ ಮಾಡದೇ ಚಿಕ್ಕಪೇಟೆ ಕ್ಷೇತ್ರಕ್ಕೆ 350 ಕೋಟಿ ರೂಪಾಯಿ ಮೌಲ್ಯದ ಪ್ರಣಾಳಿಕೆ ಮಾಡುತ್ತೇನೆ ಎಂದು ಘೋಷಣೆಯೂ ಮಾಡಿದ್ದರು. ಇದು ಪಕ್ಷದ ನಾಯಕರಿಗೆ ಮುಜುಗರ ಉಂಟು ಮಾಡಿತ್ತು.

ಕಾಂಗ್ರೆಸ್ ಶಿಸ್ತು ಸಮಿತಿಯಿಂದ ಕೆಜಿಎಫ್ ಬಾಬುಗೆ ವಿವರಣೆ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ಬಳಿಕ ಬಾಬು ಕ್ಷಮೆ ಕೇಳಿದ್ದರು. ಆದರೀಗ ಮತ್ತೆ ಚಿಕ್ಕಪೇಟೆಯಲ್ಲಿ ಚೆಕ್ ವಿತರಣೆ ಮಾಡುವಲ್ಲಿ ತೊಡಗಿದ್ದಾರೆ. ಈ ಬಗ್ಗೆ ಹೈಕಾಂಡ್​ಗೆ ದೂರು ಹೋಗಿದೆ ಎಂದು ಹೇಳಿದ ಬಾಬು, ಹೈಕಾಂಡ್ ಸೂಚಿಸಿದರೂ ಚೆಕ್ ವಿತರಣೆ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಎಚ್ಚರಿಕೆಯ ನಡುವೆಯೂ ಮಾಜಿ ಕಾಂಗ್ರೆಸ್ ಶಾಸಕ ಆರ್.ವಿ.ದೇವರಾಜ್​ಗೆ ಸೆಡ್ಡು ಹೊಡೆದು ಚಿಕ್ಕಪೇಟೆಯಲ್ಲಿ 50ಸಾವಿರ ಕುಟುಂಬಕ್ಕೆ 5ಸಾವಿರ ರೂಪಾಯಿ ಚೆಕ್ ವಿತರಣೆ ಮಾಡುತ್ತಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Wed, 31 August 22