ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಯಾವುದೇ ಅನ್ಯಾಯವಾಗಿಲ್ಲ; ಸಿ.ಎಂ ಇಬ್ರಾಹಿಂ ಕಾಂಗ್ರೆಸ್​ನಲ್ಲೇ ಇರುವ ವಿಶ್ವಾಸವಿದೆ: ಸಲೀಂ ಅಹ್ಮದ್

| Updated By: ganapathi bhat

Updated on: Feb 05, 2022 | 2:55 PM

ಎಸ್.ಆರ್. ಪಾಟೀಲ್ ತೆಗೆಯೋಕೆ ಅವರೇ ಹೇಳಿದ್ದರು. ಅವರನ್ನು ತೆಗೆದು ನನ್ನನ್ನು ಮಾಡಿ ಎಂದು ಬೇಡಿಕೆ ಇಟ್ಟಿದ್ದರು ಎಂದು ಸಿ.ಎಂ ಇಬ್ರಾಹಿಂ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಶನಿವಾರ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಯಾವುದೇ ಅನ್ಯಾಯವಾಗಿಲ್ಲ; ಸಿ.ಎಂ ಇಬ್ರಾಹಿಂ ಕಾಂಗ್ರೆಸ್​ನಲ್ಲೇ ಇರುವ ವಿಶ್ವಾಸವಿದೆ: ಸಲೀಂ ಅಹ್ಮದ್
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
Follow us on

ಬೆಂಗಳೂರು: ಸಿ.ಎಂ ಇಬ್ರಾಹಿಂ ಒಬ್ಬ ಹಿರಿಯ ನಾಯಕರು. 2013 ರಲ್ಲಿ ಇಬ್ರಾಹಿಂ ಅವರಿಗೆ ಸಿಟ್ಟಿಂಗ್ ಎಂಎಲ್​ಎ ತೆಗೆದು ಸೀಟು ಕೊಡಲಾಗಿತ್ತು. ಅಲ್ಲಿ ಅವರು ಸೋತರು. ಆದರೂ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಕೊಡಲಾಗಿತ್ತು. ನಂತರ ಅವರನ್ನು ಎಂಎಲ್​ಸಿಯನ್ನಾಗಿ ಮಾಡಿದ್ದೆವು. ನಾನೇ ಅವರನ್ನು ಸುರ್ಜೇವಾಲಾಗೆ ಭೇಟಿ ಮಾಡಿಸಿದ್ದೆ. ಎಸ್.ಆರ್. ಪಾಟೀಲ್ ತೆಗೆಯೋಕೆ ಅವರೇ ಹೇಳಿದ್ದರು. ಅವರನ್ನು ತೆಗೆದು ನನ್ನನ್ನು ಮಾಡಿ ಎಂದು ಬೇಡಿಕೆ ಇಟ್ಟಿದ್ದರು ಎಂದು ಸಿ.ಎಂ ಇಬ್ರಾಹಿಂ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಶನಿವಾರ ಹೇಳಿಕೆ ನೀಡಿದ್ದಾರೆ.

ಆಗ ಎಸ್.ಆರ್. ಪಾಟೀಲ್ ಮೇಲ್ಮನೆ ಪ್ರತಿಪಕ್ಷನಾಯಕರಾಗಿದ್ರು. ಸುರ್ಜೇವಾಲಾ ಆಗ ಹಾಗೆಲ್ಲಾ ಮಾಡೋಕೆ ಆಗಲ್ಲ ಎಂದಿದ್ದರು. ಬಳಿಕ ಇಬ್ರಾಹಿಂಗೆ ಪ್ರಚಾರಕ್ಕೆ ಕರೆದಿದ್ದೆವು. ಅವರು ಪ್ರಚಾರಕ್ಕೂ ಬರಲಿಲ್ಲ. ಅವರು ಮೇಲ್ಮನೆ ಪ್ರತಿಪಕ್ಷ ಸ್ಥಾನಕ್ಕೆ ಕಣ್ಣಿಟ್ಟದರು. ಈಗ ಮೇಲ್ಮನೆ ಪ್ರತಿಪಕ್ಷ ಸ್ಥಾನ ಪಕ್ಷ ಸಂಘಟನೆ ಮಾಡಿದ ಹರಿಪ್ರಸಾದ್​ಗೆ ಕೊಡಲಾಗಿದೆ. ಚೀಪ್ ವಿಪ್ ಆಗಿ ಎಂದು ನಸೀರ್ ಕೇಳಲಾಗಿತ್ತು. ಅವರು ಒಪ್ಪದ ಹಿನ್ನೆಲೆ ರಾಥೋಡ್​ಗೆ ಕೊಡಲಾಗಿದೆ. ಈಗಲೂ ನಮಗೆ ವಿಶ್ವಾಸವಿದೆ. ಅವರು ಕಾಂಗ್ರೆಸ್ ಪಕ್ಷದಲ್ಲೇ ಇರ್ತಾರೆ ಎಂದು ಸಿ.ಎಂ ಇಬ್ರಾಹಿಂ ಬಗೆಗೆ ಸಲೀಂ ಅಹ್ಮದ್ ತಿಳಿಸಿದ್ದಾರೆ.

ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗುತ್ತೆಂಬ ಆರೋಪದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಜನ ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಒಪ್ಪಿದ್ದಾರೆ. ಬಿಜೆಪಿ ವಿರುದ್ಧ ಭ್ರಮನಿರಸನರಾಗಿದ್ದಾರೆ. ನಾವು ಸರ್ಕಾರದ ಭ್ರಷ್ಟಾಚಾರ ತೋರಿಸ್ತಿದ್ದೇವೆ. ಅದಕ್ಕೆ ಜನ ಹಾನಗಲ್ ಗೆಲುವು ಕೊಟ್ರು. ಎಂಎಲ್​ಸಿ ಚುನಾವಣೆಯಲ್ಲಿ‌ ಗೆಲ್ಲಿಸಿದ್ರು. 135 ವರ್ಷಗಳ ಇತಿಹಾಸ ಪಕ್ಷಕ್ಕಿದೆ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ‌ ಬರಲಿದೆ. ಅಲ್ಪಸಂಖ್ಯಾತರ ರಕ್ಷಣೆಗೆ ಕಾಂಗ್ರೆಸ್ ಬದ್ಧವಿದೆ. ನನಗೆ, ನಲಪಾಡ್​ಗೆ, ಖಾದರ್​ಗೆ ಅವಕಾಶ ಕೊಟ್ಟಿದೆ. ರೆಹಮಾನ್ ಖಾನ್​ಗೂ ಅವಕಾಶ ಕೊಟ್ಟಿದೆ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್​ನಿಂದ ಅನ್ಯಾಯವಾಗಿಲ್ಲ ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.

ಇತ್ತ ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿಗೆ ಸಚಿವ‌ ಸ್ಥಾನ ನೀಡಲು ಆಗ್ರಹ ಕೇಳಿಬಂದಿದೆ. ಬಿಜೆಪಿ ರಾಜ್ಯ ಕಚೇರಿಗೆ ನಂಜುಂಡಿ ಬೆಂಬಲಿಗರು ಭೇಟಿ ನೀಡಿ ಕೆ.ಪಿ. ನಂಜುಂಡಿ ಅವರಿಗೆ ಸಚಿವ ಸ್ಥಾನ ನೀಡಲು ಪರಿಗಣಿಸುವಂತೆ ‌ಮನವಿ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರಿನ ‌ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ: CM Ibrahim: ‘ರಾಹುಲ್ ಗಾಂಧಿ ಇಲ್ಲಿನ ನಾಯಕರ ಹೆಸರು ಹೇಳಿ ಕರೆಯುವುದನ್ನು ಕಲಿಯಲಿ‘- ಸಿಎಂ ಇಬ್ರಾಹಿಂ

ಇದನ್ನೂ ಓದಿ: ಅಲಿಂಗ ಚಳುವಳಿ ಘೋಷಿಸಿದ ಸಿಎಂ ಇಬ್ರಾಹಿಂ; ಜೆಡಿಎಸ್ ಸೇರುವ ಬಗ್ಗೆಯೂ ಮಾಹಿತಿ ನೀಡಿದ ನಾಯಕ