ಜೈ ಶ್ರೀರಾಮ್ ಎಂದ ಸಿದ್ದರಾಮಯ್ಯ; ಕೆಟ್ಟ ಮೇಲೆ ಬುದ್ಧಿ ಬಂದಂತಾಗಿದೆ ಎಂದ ಕೆಎಸ್ ಈಶ್ವರಪ್ಪ

| Updated By: Rakesh Nayak Manchi

Updated on: Jan 22, 2024 | 10:31 PM

ಬೆಂಗಳೂರಿನಲ್ಲಿ ರಾಮ ಮಂದಿರ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಎಂದು ಹೇಳಿದ್ದರು. ಈ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಟ್ಟ ಮೇಲೆ ಬುದ್ಧಿ ಬಂದಂತಾಗಿದೆ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಪರಿವರ್ತನೆ ಜಗದ ನಿಯಮ ಎಂದು ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.

ಜೈ ಶ್ರೀರಾಮ್ ಎಂದ ಸಿದ್ದರಾಮಯ್ಯ; ಕೆಟ್ಟ ಮೇಲೆ ಬುದ್ಧಿ ಬಂದಂತಾಗಿದೆ ಎಂದ ಕೆಎಸ್ ಈಶ್ವರಪ್ಪ
ಜೈ ಶ್ರೀರಾಮ್ ಎಂದ ಸಿದ್ದರಾಮಯ್ಯ; ಕೆಟ್ಟ ಮೇಲೆ ಬುದ್ಧಿ ಬಂದಂತಾಗಿದೆ ಸಿದ್ದರಾಮಯ್ಯ ಪರಿಸ್ಥಿತಿ ಎಂದ ಕೆಎಸ್ ಈಶ್ವರಪ್ಪ
Follow us on

ಶಿವಮೊಗ್ಗ, ಜ.22: ಕೆಟ್ಟ ಮೇಲೆ ಬುದ್ಧಿ ಬಂದಂತಾಗಿದೆ ಸಿದ್ದರಾಮಯ್ಯ ಪರಿಸ್ಥಿತಿ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬೆಂಗಳೂರಿನಲ್ಲಿ ರಾಮ ಮಂದಿರ ಉದ್ಘಾಟನೆ ಮಾಡಿದ ಬಳಿಕ ಮಾತನಾಡುತ್ತಾ ಜೈ ಶ್ರೀರಾಮ್ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಹೀರೋ‌ ಆಗಿದ್ದಾರೆ. ಕರ್ನಾಟಕದ ಜನರ ಮುಂದೆ ಸಿದ್ದರಾಮಯ್ಯ ವಿಲನ್ ಆಗಿದ್ದಾರೆ ಎಂದರು.

ಮೋದಿ ನಾಯಕರಾಗಿದ್ದಾರೆ, ಸಿದ್ದರಾಮಯ್ಯ ಖಳನಾಯಕರಾಗಿದ್ದಾರೆ. ಎಲ್ಲಾ ಮುಗಿದ ಮೇಲೆ ಈಗ ಜೈ ಶ್ರೀರಾಮ್ ಅಂತಾ ಕೂಗಿದ್ದಾರೆ. ಕೊನೆಗೂ ಅವರಿಗೆ ರಾಮ ಬುದ್ಧಿ ಕೊಟ್ನಲ್ಲ ಅಂತಾ ಸಂತಸವಾಗಿದೆ. ಜೈ ಶ್ರೀರಾಮ್ ಬಿಜೆಪಿ ಆಸ್ತಿ ಅಲ್ಲ, ಪ್ರಪಂಚದ ಹಿಂದೂಗಳ ಆಸ್ತಿ. ಬರೀ ಮುಸಲ್ಮಾನರನ್ನೇ ಇಟ್ಟುಕೊಂಡರೆ ಬದುಕುವುದಕ್ಕೆ ಆಗಲ್ಲ. ಹಿಂದೂಗಳು ಕೂಡ ಬೇಕು ಅಂತಾ ಕೊನೆಗೂ ಸಿದ್ದರಾಮಯ್ಯಗೆ ಬುದ್ಧಿ ಬಂದಿದೆ. ದೇವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒಳ್ಳೆಯದು ಮಾಡಲಿ ಎಂದರು.

ಶಿವಮೊಗ್ಗ ನಗರ ಬಿಜೆಪಿ ಶಾಸಕ ಚನ್ನಬಸಪ್ಪ ಮಾತನಾಡಿ, ಪರಿವರ್ತನೆ ಜಗದ ನಿಯ. ಶ್ರೀರಾಮ‌ಚಂದ್ರ ಎಲ್ಲರ ಮನಸ್ಸನ್ನ ಗೆಲ್ಲತ್ತಾನೆ. 500 ವರ್ಷಗಳ ಕಾಲ‌ ಸಹನೆಯಿಂದ ಇದ್ದ. ಶ್ರೀರಾಮ ಚಂದ್ರ ಅವನ ಜನ್ಮಸ್ಥಳದಲ್ಲಿ ರಾಮಮಂದಿರ ಮಾಡಿಕೊಂಡಿರುವುದು ಅವನ‌ ತಾಕತ್ತು. ಸಿದ್ದರಾಮಯ್ಯ ಅಂತಹವರ ಬಾಯಲ್ಲಿ ಕೂಡ ಜೈ ಶ್ರೀರಾಮ್ ಬರುತ್ತದೆ ಎಂದರೆ ರಾಮನೇ ಕಾರಣ ಹೊರತು ಸಿದ್ದರಾಮಯ್ಯ ಅಲ್ಲ ಎಂದರು.

ಇದನ್ನೂ ಓದಿ: ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಸಿದ್ದರಾಮಯ್ಯಗೆ ಹೊಸ ಟಾಸ್ಕ್ ಕೊಟ್ಟ ಸಿಟಿ ರವಿ!

ಜೈ ಶ್ರೀರಾಮ್ ನಮ್ಮ ಸೊತ್ತು ಅಂತ ನಾವು ಎಲ್ಲಿಯೂ ಹೇಳಿಲ್ಲ. ಆ ಘೋಷಣೆ ಹಿಂದೂಗಳ ಸ್ವತ್ತು. ಭಾರತೀಯರ ಸ್ವತ್ತು. ಜೈ ಶ್ರೀರಾಮ್ ಘೋಷಣೆ ನಿಮ್ಮ ಬಾಯಲಿ ಬಂದಿದೆ ಅಂದರೆ ಅದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ಹಿಂದೂ ಸಮಾಜಕ್ಕೆ ಎಷ್ಟು ಅಪಮಾನ ಮಾಡಿದ್ದೀರಾ ನೀವು? ಮುಂದಿನ ದಿನಗಳಲ್ಲಿ ಹಿಂದೂಗಳ ಪರವಾಗಿ ಆಲೋಚನೆ ಮಾಡಿ ಎಂದರು.

ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಆಗಿರುವ ವಿಗ್ರಹ ನಮ್ಮ ರಾಜ್ಯದ್ದು. ಆ ಜ್ಞಾನವು ನಿಮಗಿಲ್ಲ ಎನ್ನುವುದು ನೋವಿನ ಸಂಗತಿ. ವಿಗ್ರಹ ಕೆತ್ತನೆ ಮಡಿರುವ ಅರುಣ್ ಯೋಗಿರಾಜ್ ಬಗ್ಗೆ ಒಂದೇ ಒಂದು ಮಾತನ್ನು ನೀವು ಹೇಳಲಿಲ್ಲ. ಅವರಿಗೆ ಗೌರವ ಸಮರ್ಪಣೆ ಮಾಡುವ ಕೆಲಸವನ್ನು ಸಹ ತಾವು ಮಾಡಲಿಲ್ಲ. ನಿಮ್ಮದೆ ಜಿಲ್ಲೆಯ ಹುಡುಗ ಅವರು. ಅವರಿಗೆ ಅಪಮಾನ ಮಾಡುವ ಕೆಲಸ ನೀವು ಮಾಡಿದಿರಿ. ಸದ್ಯ ಜೈ ಶ್ರೀರಾಮ್ ಘೋಷಣೆ ಹಾಕಿ ಆ ಪಾಪವನ್ನು ತೊಳೆದುಕೊಂಡಿದ್ದೀರಾ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ