ಬೆಂಗಳೂರು: ಈ ಸರ್ಕಾರದ ಅವಧಿಯಲ್ಲಿ ಬಡವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲ. ರಾಯಚೂರಿನಲ್ಲಿ 6 ಕಿ.ಮೀ ಮಕ್ಕಳು ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ಬಂದಾಗ ಎಲ್ಲಾ ಸರಿ ಮಾಡಿದ್ದೇವೆ ಎಂದು ಭಾಷಣ ಮಾಡಿದ್ದಾರೆ. ಆದರೆ ಒಂದು ವ್ಯವಸ್ಥೆ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (Kumaraswamy) ಹರಿಹಾಯ್ದರು. ರಾಜ್ಯಪಾಲರ ಭಾಷಣದ ಮೇಲೆ ವೇಳೆ ಡಬಲ್ ಎಂಜಿನ್ ಸರಕಾರದ ಕಾರ್ಯವೈಖರಿ ಕುರಿತು ಮಾತನಾಡಿ, ಶಾಲೆ ಹೋಗುವ ಮಕ್ಕಳ್ಳಿಗೆ ಬಸ್ ಇಲ್ಲದೆ ಸಂಗತಿ ಗೊತ್ತಾಯಿತು. ಕೊರಟಗೆರೆಯಲ್ಲಿ ಅದಕ್ಕೆ ನಾನೇ ಒಂದು ವಾಹನ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.
ತೊಗರಿ ಬೆಳೆಗಾರರಿಗೆ ನೆಟ್ಟೆ ರೋಗದಿಂದ ಸಂಕಷ್ಟವಾಗಿದೆ. ಅವರಿಗೆ ಪರಿಹಾರ ಕೊಡಲು ಯಾವುದೇ ಸಚಿವರು ಇನ್ನೂ ಭರವಸೆ ಕೊಟ್ಟಿಲ್ಲ. ತೊಗರಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳೆ ವಿಮೆ ಇನ್ನೂ ರೈತರಿಗೆ ಬಂದಿಲ್ಲ. ಹತ್ತಿ, ತೊಗರಿ, ಕಬ್ಬು, ಸೇರಿದಂತೆ ಎಲ್ಲಾ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ನನ್ನ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಮಾಡಿದ್ದರಿಂದ ಡಿಸಿಸಿ ಬ್ಯಾಂಕ್ಗಳು ಉಳಿದವು. ಇಲ್ಲದಿದ್ದರೆ ದಿವಾಳಿ ಆಗುತ್ತಿದ್ದವು ಎಂದು ತಿಳಿಸಿದರು.
ತಾಜ್ ವೆಸ್ಟ್ ಎಂಡ್ನಲ್ಲಿ ಇದ್ದ ಬಗ್ಗೆ ಬಂದಿರುವ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ವೆಸ್ಟ್ ಎಂಡ್ಗೆ ನಾನು ಆಟ ಆಡಲು ಹೋಗಿದ್ನಾ? 19 ಗಂಟೆ ಕೆಲಸ ಮಾಡಿದ್ದೇನೆ, ಬಡವರಿಗೆ ನೆರವಾಗಿದ್ದೇನೆ. ಬಂಗ್ಲೆ ಕೊಟ್ಟಿದ್ದಾರಾ ನನಗೆ ಎಂದು ಪ್ರಶ್ನಿಸಿದರು. ನಮ್ಮ ರಾಜ್ಯದಲ್ಲಿ ಪ್ರಗತಿಯ ಜೊತೆಗೆ ಬಡತನವು ಜಾಸ್ತಿಯಾಗಿದೆ. ನಗರದ ಸ್ಲಂ ಮತ್ತು ಹಳ್ಳಿಗಳಿಗೆ ಹೋಗಿ ನೋಡಿ, ಸಾಲ ಮನ್ನಾದ ಲಾಭ ರೈತರಿಗೆ ಆಗುತ್ತಿಲ್ಲ ಎಂದರು.
ಹುಬ್ಬಳ್ಳಿಯಲ್ಲಿ ಎರಡು ಬ್ಯಾಂಕ್ಗಳು ರೈತರಿಗೆ ಸಾಲಮನ್ನಾ ಲಾಭ ಕೊಡ್ತಿಲ್ಲ. ಅಂತಹ ಬ್ಯಾಂಕ್ಗಳ ಮೇಲೆ ಕ್ರಮ ಆಗಬೇಕಿತ್ತು. ಇನ್ನೂ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಹಿಂದಿನ ಸರ್ಕಾರದ ಸಾಲಮನ್ನಾ ಯೋಜನೆಯನ್ನು ಈ ಸರಕಾರ ಮುಂದುವರಿಸುತ್ತಿಲ್ಲ. ಸಾಲ ಮನ್ನಾ ಯೋಜನೆಯನ್ನು ಈ ಸರ್ಕಾರ ಲಘುವಾಗಿ ಪರಿಗಣಿಸಿದೆ. ರೈತರಿಗೆ ಸಾಲಮನ್ನಾ ಲಾಭ ಸಿಗಬೇಕಲ್ಲವೇ? 1890 ಕೋಟಿ ರೂ. ಸಾಲಮನ್ನಾದ ಲಾಭ ರೈತನಿಗೆ ಇನ್ನೂ ಕೊಟ್ಟಿಲ್ಲ ಎಂದ ಕಿಡಿಕಾರಿದರು.
ಇದನ್ನೂ ಓದಿ: ಬ್ರಾಹ್ಮಣ ಸಿಎಂ ವಿಚಾರ: ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ವಿಧಾನ ಪರಿಷತ್ ಮಾಜಿ ಸದಸ್ಯೆ ಎಸ್ ಆರ್ ಲೀಲಾ
ಕಾಂಗ್ರೆಸ್ ಬಿಜೆಪಿ ಸದನದಲ್ಲಿ ತೌಡು ಕುಟ್ಟುವ ಕೆಲಸ ಮಾಡ್ತಿದೆ ಎಂದು ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಇದಕ್ಕೆ ಸದನದಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ನಮ್ಮ ಬಗ್ಗೆ ಮಾತನಾಡಿ ಅದು ರಾಜಕೀಯ.
ಆದರೆ ತೌಡು ಕುಟ್ಟುವ ಕೆಲಸ ಎಂದು ಸಾರ್ವಜನಿಕವಾಗಿ ಹೇಳಿದರೆ ಹೇಗೆ? ನಾನು ಸದನಕ್ಕೆ ಹೋಗಲ್ಲ ಎಂದು ಹೇಳಿದರೆ ಹೇಗೆ?
ತಾವು ಹಿರಿಯರು, ಮಾರ್ಗದರ್ಶಕರಾಗಬೇಕು. ರಾಜಕೀಯವಾಗಿ ಮಾತನಾಡಿ, ಆದರೆ ಸದನದ ಕಾರ್ಯಕಲಾಪಗಳ ಬಗ್ಗೆ ಈ ರೀತಿ ಮಾತನಾಡುದು ಸರಿಯಲ್ಲ ಎಂದರು.
ಇದಕ್ಕೆ ಸದನದಲ್ಲಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು, ನಾನು ತೌಡು ಕುಟ್ಟುವ ಕೆಲಸ ಆಗಿದೆ ಎಂದು ಎಲ್ಲೂ ಹೇಳಿಲ್ಲ. ಸದನದಲ್ಲಿ ನಿನ್ನೆ ಸಿದ್ದರಾಮಯ್ಯ ಮಾತನಾಡುವಾಗ ತೌಡು ಕುಟ್ಟುವ ಕೆಲಸ ಎಂದು ಚರ್ಚೆ ಆಗಿದೆ. ಬೆಳಗಾವಿ ಅಧಿವೇಶನಕ್ಕೆ ಪಕ್ಷದ ಕಾರ್ಯಕ್ರಮ ಇದ್ದ ಕಾರಣ ಬರಲಿಲ್ಲ. ಆದರೆ ನಾನು ಈ ರೀತಿಯಲ್ಲಿ ಹೇಳಿಕೆ ಕೊಟ್ಟಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:29 pm, Thu, 16 February 23