ಅಮಿತ್ ಶಾ ಮೊನ್ನೆ ಆಂಧ್ರಕ್ಕೆ ಬಿರುಗಾಳಿಯಂತೆ ಬಂದುಹೋದ ಮೇಲೆ ತೆಲುಗು ರಾಜ್ಯದಲ್ಲಿ ರಾಜಕೀಯ ಹವಾ ಜೋರಾಗಿದೆ. ಅದರಲ್ಲೂ ಅಮಿತ್ ಶಾ ಭೇಟಿ ಮಾಡಿರುವ ಜೂನಿಯರ್ ಎನ್ಟಿಆರ್ ಗೆ ಲಕ್ಷ್ಮಿ ಪಾರ್ವತಿ ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಏನದು… ಇಲ್ಲಿದೆ ರಾಜಕೀಯ ಲೆಕ್ಕಾಚಾರದ ಮಾತು. ಹಾಗಂತ ಅಮಿತ್ ಶಾ-ಜೂ. ಎನ್‌ಟಿಆರ್ ಭೇಟಿಯಲ್ಲಿ ಕೇವಲ ಸಿನಿಮಾಗಳ ಬಗ್ಗೆ ಚರ್ಚೆಯಾಯ್ತು ಎಂದು ಸೀಮಿತಗೊಳಿಸುವಂತಿಲ್ಲ ಎಂಬುದು ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ. ಈ ಮಧ್ಯೆ, ಲಕ್ಷ್ಮಿ ಪಾರ್ವತಿ ಹೇಳಿಕೆ ಎಪಿ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದುವರೆಗೆ ಎನ್ ಟಿಆರ್ ಹಾಗೂ ಅಮಿತ್ ಶಾ ಭೇಟಿ ಕುರಿತು ಯಾವುದೇ ಮಹತ್ವದ ಮಾಹಿತಿ ಹೊರಬಿದ್ದಿಲ್ಲ ಎಂಬುದೂ ಗಮನಾರ್ಹ.
Lakshmi Parvathi on Jr NTR: ಅಮಿತ್ ಶಾ ಮೊನ್ನೆ ಆಂಧ್ರಕ್ಕೆ ಬಿರುಗಾಳಿಯಂತೆ ಬಂದುಹೋದ ಮೇಲೆ ತೆಲುಗು ರಾಜ್ಯದಲ್ಲಿ ರಾಜಕೀಯ ಹವಾ ಜೋರಾಗಿದೆ. ಅದರಲ್ಲೂ ಅಮಿತ್ ಶಾ ಭೇಟಿ ಮಾಡಿರುವ ಜೂನಿಯರ್ ಎನ್ಟಿಆರ್ ಗೆ ಲಕ್ಷ್ಮಿ ಪಾರ್ವತಿ ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಏನದು… ಇಲ್ಲಿದೆ ರಾಜಕೀಯ ಲೆಕ್ಕಾಚಾರದ ಮಾತು. ಹಾಗಂತ ಅಮಿತ್ ಶಾ-ಜೂ. ಎನ್‌ಟಿಆರ್ ಭೇಟಿಯಲ್ಲಿ ಕೇವಲ ಸಿನಿಮಾಗಳ ಬಗ್ಗೆ ಚರ್ಚೆಯಾಯ್ತು ಎಂದು ಸೀಮಿತಗೊಳಿಸುವಂತಿಲ್ಲ ಎಂಬುದು ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ. ಈ ಮಧ್ಯೆ, ಲಕ್ಷ್ಮಿ ಪಾರ್ವತಿ ಹೇಳಿಕೆ ಎಪಿ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದುವರೆಗೆ ಎನ್ ಟಿಆರ್ ಹಾಗೂ ಅಮಿತ್ ಶಾ ಭೇಟಿ ಕುರಿತು ಯಾವುದೇ ಮಹತ್ವದ ಮಾಹಿತಿ ಹೊರಬಿದ್ದಿಲ್ಲ ಎಂಬುದೂ ಗಮನಾರ್ಹ.
ಜೂನಿಯರ್ ಎನ್ಟಿಆರ್ ಗೆ ಲಕ್ಷ್ಮಿ ಪಾರ್ವತಿ ಕಿವಿಮಾತು:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನಿಯರ್ ಎನ್ಟಿಆರ್ ಅವರನ್ನು ಭೇಟಿಯಾದ ನಂತರ, ತೆಲುಗು ರಾಜ್ಯಗಳಲ್ಲಿನ ರಾಜಕೀಯ ಇದ್ದಕ್ಕಿದ್ದಂತೆ ಬಿಸಿಯೇರಿದೆ. ಅದರಲ್ಲೂ ಆಂಧ್ರಪ್ರದೇಶದ ಎನ್ ಟಿಆರ್ ಹಾಗೂ ಅಮಿತ್ ಶಾ ಔತಣಕೂಟದ ಚರ್ಚೆ ಬಿಸಿ ಬಿಸಿಯಾಗಿ ಹಬೆಯಾಡುತ್ತಿದೆ. ಈ ಕುರಿತು ಒಂದೆಡೆ ವೈಎಸ್‌ಆರ್‌ಸಿಪಿ, ಇನ್ನೊಂದೆಡೆ ಬಿಜೆಪಿ, ಟಿಡಿಪಿ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿವೆ. ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದರೂ, ಶಾ ಮತ್ತು ಎನ್‌ಟಿಆರ್ ಭೇಟಿ ರಾಜಕೀಯ ಲಾಭಕ್ಕಾಗಿ ನಡೆದಿದೆ ಎಂದು ವೈಸಿಪಿ ಹೇಳುತ್ತಿದೆ. ಈ ಭೇಟಿ ಕುರಿತು ಎಪಿ ತೆಲುಗು ಮತ್ತು ಸಂಕ್ಷತ್ರಿ ಅಕಾಡೆಮಿ ಅಧ್ಯಕ್ಷೆ ನಂದಮೂರಿ ಲಕ್ಷ್ಮೀಪಾರ್ವತಿ ಕೂಡ ಪ್ರತಿಕ್ರಿಯೆ ನೀಡಿರುವುದು ಗಮಮಾರ್ಹವಾಗಿದೆ.
ತಿರುಪತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮಿ ಪಾರ್ವತಿ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಜೂನಿಯರ್ ಎನ್ ಟಿಆರ್ ರಾಜಕೀಯಕ್ಕೆ ಬರಲಿ ಎಂದು ಲಕ್ಷ್ಮೀ ಪಾರ್ವತಿ ಹಾರೈಸಿದ್ದಾರೆ. ಎನ್ ಟಿಆರ್ ರಾಜಕೀಯಕ್ಕೆ ಬಂದು ತೆಲುಗು ದೇಶಂ ಪಕ್ಷವನ್ನು ಕೈವಶ ಮಾಡಿಕೊಳ್ಳಬೇಕು ಎಂದು ಲಕ್ಷ್ಮೀ ಪಾರ್ವತಿ ಸಲಹೆ ನೀಡಿದ್ದಾರೆ. ಅದು ನನ್ನ ಆಸೆ ಎಂದೂ ಲಕ್ಷ್ಮೀ ಪಾರ್ವತಿ ಸೇರಿಸಿದ್ದಾರೆ. ಚಂದ್ರಬಾಬು ನಾಯ್ಡು ನೀಚವಾಗಿ ವರ್ತಿಸಿ ಎನ್‌ಟಿಆರ್‌ಗೆ ಬೆನ್ನಿಗೆ ಚೂರಿ ಇರಿದರು. ಟಿಡಿಪಿಯನ್ನು ಸ್ವಾಧೀನ ಪಡಿಸಿಕೊಂಡರು ಎಂದು ಆಕ್ರೋಶ ಹೊರಹಾಕಿದರು. ಈ ಹಿನ್ನೆಲೆಯಲ್ಲಿ ತೆಲುಗು ದೇಶಂ ಪಕ್ಷದ ಸಾರಥ್ಯ ವಹಿಸಿಕೊಂಡರೆ ಜೂನಿಯರ್ ಅದನ್ನು ಸಮರ್ಥವಾಗಿ ಮುನ್ನಡೆಸಬಲ್ಲರು ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳ ತಂದಿದ್ದಾರೆ:
ಹೆವೆನ್ಲಿ ಗಿಡುಗು ವೆಂಕಟ ರಾಮಮೂರ್ತಿಯವರ ಜನ್ಮ ದಿನಾಚರಣೆಯನ್ನು ತಿರುಪತಿಯಲ್ಲಿ ಅದ್ಧೂರಿಯಾಗಿ ನಡೆಸಲಾಗುವುದು ಎಂದು ಲಕ್ಷ್ಮೀ ಪಾರ್ವತಿ ಇದೆ ವೇಳೆ ಘೋಷಿಸಿದರು. ಇದೇ 25ರಂದು ತಿರುಪತಿಯ ಎಸ್‌ವಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಗಿಡುಗು ಭಾಷಾ ಉತ್ಸವ ಆಯೋಜಿಸಲಾಗಿದೆ ಎಂದರು. ನಾಳೆ ಗಿಡುಗು ಭಾಷಾ ಆಚರಣೆಯಲ್ಲಿ ಆರು ಮಂದಿ ಪ್ರಶಸ್ತಿ ಪುರಸ್ಕೃತರನ್ನ ಆಯ್ಕೆ ಮಾಡಲಾಗುವುದು. ಶೀಘ್ರದಲ್ಲೇ ಹೆಸರು ಪ್ರಕಟಿಸಲಾಗುವುದು ಎಂದು ಲಕ್ಷ್ಮೀ ಪಾರ್ವತಿ ತಿಳಿಸಿದ್ದಾರೆ.
ಚಂದ್ರಬಾಬು ಅವರ ಆಡಳಿತದಲ್ಲಿ ಸರ್ಕಾರ ಶಿಕ್ಷಣ ಇಲಾಖೆಯನ್ನು ನಿರ್ಲಕ್ಷಿಸಿತ್ತು ಮತ್ತು ರಾಜ್ಯಾದ್ಯಂತ 30,000 ಶಾಲೆಗಳನ್ನು ಮುಚ್ಚಲಾಯಿತು. ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಕೀರ್ತಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಸಲ್ಲುತ್ತದೆ ಎಂದು ಅವರು ಇದೆ ವೇಳೆ ಹೇಳಿದರು.
To read more in Telugu click here