Madhya Pradesh Congress crisis: ನಕುಲ್ ನಾಥ್ ನಂತರ ಎಕ್ಸ್​​ ಪ್ರೊಫೈಲ್‌ನಿಂದ ಕಾಂಗ್ರೆಸ್ ಲೋಗೋ ತೆಗೆದು ಹಾಕಿದ ಸಜ್ಜನ್ ಸಿಂಗ್ ವರ್ಮಾ

|

Updated on: Feb 17, 2024 | 3:50 PM

ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ನಂತರ, ಸಜ್ಜನ್ ಸಿಂಗ್ ವರ್ಮಾ ಅವರು ತಮ್ಮ ಎಕ್ಸ್ ಪ್ರೊಫೈಲ್‌ನಿಂದ ಕಾಂಗ್ರೆಸ್ ಲೋಗೋವನ್ನು ತೆಗೆದುಹಾಕಿದ್ದಾರೆ. ನಕುಲ್ ನಾಥ್ ಶೀಘ್ರದಲ್ಲೇ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳಿವೆ. ಶನಿವಾರ ಮಧ್ಯಾಹ್ನ ಕಮಲ್ ನಾಥ್ ದೆಹಲಿಗೆ ಬಂದಿಳಿದಿದ್ದು, ಮುಂದೇನಾಗುತ್ತದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.

Madhya Pradesh Congress crisis: ನಕುಲ್ ನಾಥ್ ನಂತರ ಎಕ್ಸ್​​ ಪ್ರೊಫೈಲ್‌ನಿಂದ ಕಾಂಗ್ರೆಸ್ ಲೋಗೋ ತೆಗೆದು ಹಾಕಿದ ಸಜ್ಜನ್ ಸಿಂಗ್ ವರ್ಮಾ
ಸಜ್ಜನ್ ಸಿಂಗ್ ವರ್ಮಾ
Follow us on

ಭೋಪಾಲ್ ಫೆಬ್ರುವರಿ 17: ಮಧ್ಯಪ್ರದೇಶದ (Madhya Pradesh)ಮಾಜಿ ಸಿಎಂ ಮತ್ತು ಮಧ್ಯಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಕಮಲ್ ನಾಥ್ (Kamal Nath) ಜೊತೆಗೆ ಅವರ ಮಗ ನಕುಲ್ ನಾಥ್ ಬಿಜೆಪಿ (BJP) ಸೇರುತ್ತಾರೆ ಎಂಬ ವದಂತಿಗಳ ನಡುವೆಯೇ, ಮಾಜಿ ಸಚಿವ ಮತ್ತು ಸೋನ್‌ಕುಚ್‌ನ ಮಾಜಿ ಶಾಸಕ ಮತ್ತು ದೇವಾಸ್‌ನ ಮಾಜಿ ಸಂಸದ ಸಜ್ಜನ್ ಸಿಂಗ್ ವರ್ಮಾ (Sajjan Singh Verma)  ಕೂಡ ಎಕ್ಸ್ ಪ್ರೊಫೈಲ್‌ನಿಂದ ಕಾಂಗ್ರೆಸ್ ಲೋಗೋ ತೆಗೆದುಹಾಕಿದ್ದಾರೆ. ಈ ಹಿಂದೆ ಕಾಂಗ್ರೆಸ್  ಚಿಹ್ನೆಯ ಫೋಟೋ ಇತ್ತು. ಆದರೆ ಈಗ ಯಾವುದೇ ಪಕ್ಷದ ಲೋಗೋ ಇಲ್ಲ. ಜೊತೆಗೆ ಇಂದೋರ್‌ನ ಇಬ್ಬರು ಮಾಜಿ ಶಾಸಕರ ಹೆಸರು ಕೂಡ ಚರ್ಚೆಗೆ ಬಂದಿದೆ. ಇದರಲ್ಲಿ ಮಾಜಿ ಇಂದೋರ್ ಅಸೆಂಬ್ಲಿ 1 ಸಂಜಯ್ ಶುಕ್ಲಾ ಮತ್ತು ದೇಪಾಲ್‌ಪುರದ ಮಾಜಿ ಶಾಸಕ ವಿಶಾಲ್ ಪಟೇಲ್ ಅವರ ಹೆಸರುಗಳು ಸೇರಿವೆ. ಇವರಿಬ್ಬರೂ ಕಮಲ್ ನಾಥ್ ಅವರಿಗೆ ಅತ್ಯಂತ ಹತ್ತಿರವಿರುವ ನಾಯಕರು.

ಕಮಲ್ ನಾಥ್ ಅವರ ಪುತ್ರ ನಕುಲ್ ಅವರು ತಮ್ಮ ‘ಎಕ್ಸ್’ ಬಯೋದಿಂದ ‘ಕಾಂಗ್ರೆಸ್’ ಎಂಬ ಪದವನ್ನು ತೆಗೆದು ಹಾಕಿದ್ದರು. ಮಧ್ಯಪ್ರದೇಶದ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ  ಪಕ್ಷವನ್ನು ಬದಲಾಯಿಸಲು ಬಯಸುವ ಕಾಂಗ್ರೆಸ್ ಸದಸ್ಯರನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ಘೋಷಿಸಿದ್ದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳು ಕಾಂಗ್ರೆಸ್ ನಾಯಕರ ಪಕ್ಷಾಂತರವಾಗುತ್ತಾರೆಯೇ ಎಂಬ ಕುತೂಹಲವನ್ನು ಹುಟ್ಟಿಸಿದೆ

ಕಾಂಗ್ರೆಸ್ ನಾಯಕರಿಗೆ ಶರ್ಮಾ ಅವರ ಆಹ್ವಾನದ ನಂತರ ನಕುಲ್ ಅವರ ಸಾಮಾಜಿಕ ಮಾಧ್ಯಮ ಅಪ್‌ಡೇಟ್‌ ನೋಡಿದರೆ ಅವರೂ ಬಿಜೆಪಿಗೆ ಸೇರುವ ಸಾಧ್ಯತೆಯನ್ನು ಸೂಚಿಸುತ್ತದೆ. ಇದಲ್ಲದೆ, ಕಮಲ್ ನಾಥ್ ಮತ್ತು ಅವರ ಮಗ ತಮ್ಮ ನಿಗದಿತ ಐದು ದಿನಗಳ ಚಿಂದ್ವಾರಾ ಭೇಟಿಯಿಂದ ಹಠಾತ್ತನೆ ನಿರ್ಗಮಿಸಿ ದೆಹಲಿಗೆ ತೆರಳಿದರು. ಯೋಜನೆಗಳಲ್ಲಿನ ಈ ಹಠಾತ್ ಬದಲಾವಣೆಯು ಮಧ್ಯ ಪ್ರದೇಶದಲ್ಲಿ  ಮಹತ್ವದ ರಾಜಕೀಯ ಬೆಳವಣಿಗೆಗಳ ಸುಳಿವು ನೀಡುತ್ತದೆ.

ಕಮಲ್ ನಾಥ್ ಅಥವಾ ನಕುಲ್ ಬಿಜೆಪಿಗೆ ಸೇರುವ ಯಾವುದೇ ಉದ್ದೇಶಗಳನ್ನು ಸ್ಪಷ್ಟವಾಗಿ ಘೋಷಿಸದಿದ್ದರೂ, ಅವರ ಕ್ರಮಗಳು ರಾಜಕೀಯ ವಲಯಗಳಲ್ಲಿ ಊಹಾಪೋಹಗಳಿಗೆ ಕಾರಣವಾಗಿವೆ.

ದೆಹಲಿ ತಲುಪಿದ ಕಮಲ್ ನಾಥ್

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಬಿಜೆಪಿ ಸೇರುವ ಸಾಧ್ಯತೆಯ ವದಂತಿಗಳ ನಡುವೆ ದೆಹಲಿ ತಲುಪಿದ್ದಾರೆ.

ಬಿಜೆಪಿ ಸೇರಲು ಶುಕ್ಲಾಗೆ ಆಫರ್

ಇದಕ್ಕೂ ಮುನ್ನ ಬಿಜೆಪಿ ಸೇರಲು ಶುಕ್ಲಾಗೆ ನಿರಂತರವಾಗಿ ಆಫರ್‌ಗಳು ಬರುತ್ತಿದ್ದವು. ಮೇಯರ್ ಚುನಾವಣೆ ಸಂದರ್ಭದಲ್ಲೂ ಅವರಿಗೆ ಬಿಜೆಪಿ ಸೇರುವ ಆಫರ್ ಬಂದಿದ್ದು, ವಿಧಾನಸಭೆ ಚುನಾವಣೆಗೂ ಮುನ್ನವೇ ಅವರ ಹಾಗೂ ಕೆಲ ಬಿಜೆಪಿ ನಾಯಕರ ನಡುವೆ ಚರ್ಚೆ ಮುಂದುವರಿದಿತ್ತು. ಆದರೆ ಆ ವೇಳೆ ಕಮಲ್ ನಾಥ್ ಅವರು ನೇರವಾಗಿ ಶುಕ್ಲಾ ಅವರಿಗೆ ಕರೆ ಮಾಡಿ ಬಿಜೆಪಿ ಸೇರದಂತೆ ತಡೆದಿದ್ದರು.

ಇದನ್ನೂ ಓದಿ: ಇನ್ನು ಆರು ದಿನ ಉಳಿದಿದೆ, ಯಾರನ್ನೂ ಬಿಡುವುದಿಲ್ಲ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಕಮಲ್ ನಾಥ್

ಶುಕ್ಲಾ ಮತ್ತು ಪಟೇಲ್ ಇಬ್ಬರೂ ಪರಸ್ಪರ ಆಪ್ತರಾಗಿದ್ದಾರೆ. ಇಬ್ಬರೂ ಶ್ರೀಮಂತರೇ. ಶುಕ್ಲಾ 200 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯ ಒಡೆಯರಾಗಿದ್ದರೆ, ಪಟೇಲ್ 140 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯ ಒಡೆಯರಾಗಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಭೇಟಿಯಾಗಿರಬಹುದು ಅಥವಾ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸ್ಟಾರ್ ಪ್ರಚಾರಕರ ವೆಚ್ಚವಾಗಲೀ ಅವರಿಬ್ಬರೂ ಅನೇಕ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಶುಕ್ಲಾ ಮತ್ತು ಪಟೇಲ್ ನಡುವಿನ ಪರಸ್ಪರ ಸಂಬಂಧವೂ ತುಂಬಾ ನಿಕಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಲ್ಲಿ ಭಾರೀ ಒಡಕು ಉಂಟಾಗಿ ಕಮಲ್ ನಾಥ್ ಬಿಜೆಪಿ ಸೇರಿದರೆ ಇಂದೋರ್ ನ ಈ ಇಬ್ಬರು ಮಾಜಿ ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇರುತ್ತದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Sat, 17 February 24