ಕೂಡಿಟ್ಟ ಹಣವನ್ನು ಭಾರತ್ ಜೋಡೋ ಯಾತ್ರೆಗೆ ನೀಡಿದ ಬಾಲಕ

| Updated By: Rakesh Nayak Manchi

Updated on: Nov 28, 2022 | 10:57 AM

ಭಾರತ್ ಜೋಡೋ ಯಾತ್ರೆ ಹಿಂದೂ ಮತ್ತು ಮುಸ್ಲಿಮರನ್ನು ಒಗ್ಗೂಡಿಸಲು ಮತ್ತು ನಮ್ಮ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ನಾನು ಅರ್ಥಮಾಡಿಕೊಂಡಿರುವುದಾಗಿ ಭಾರತ್ ಜೋಡೋ ಯಾತ್ರೆಗೆ ಹಣ ನೀಡಿದ ಬಾಲಕ ಹೇಳಿದ್ದಾನೆ.

ಕೂಡಿಟ್ಟ ಹಣವನ್ನು ಭಾರತ್ ಜೋಡೋ ಯಾತ್ರೆಗೆ ನೀಡಿದ ಬಾಲಕ
ಕೂಡಿಟ್ಟ ಹಣವನ್ನು ಭಾರತ್ ಜೋಡೋ ಯಾತ್ರೆಗೆ ನೀಡಿದ ಬಾಲಕ
Follow us on

ದೆಹಲಿ: ಭಾನುವಾರ ಮಧ್ಯಪ್ರದೇಶ (Madhya Pradesh)ದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ (Bharat Jodo Yatra)ಯ ವೇಳೆ ಬಾಲಕನೊಬ್ಬ ತಾನು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಯಾತ್ರೆಗೆ ದೇಣಿಗೆಯಾಗಿ ನೀಡಿದ್ದಾನೆ. ಈ ಬಗ್ಗೆ ಟ್ವೀಟ್ ಮಾಡಿದ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತ್ಯಾಗ ಮತ್ತು ನಿಸ್ವಾರ್ಥತೆಯು ಬಾಲ್ಯದಲ್ಲಿ ರೂಢಿಸಿಕೊಂಡ ಮೌಲ್ಯಗಳಾಗಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಟ್ವೀಟ್ ಮಾಡಿದ ವೀಡಿಯೊದಲ್ಲಿ, ಬಾಲಕ ಯಶರಾಜ್ ಪರ್ಮಾರ್ ರಾಹುಲ್ ಗಾಂಧಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದೇಣಿಗೆ ಹಣವನ್ನು ನೀಡಿದ್ದಾನೆ. ಬಳಿಕ ಮಾತನಾಡಿದ ಬಾಲಕ, ರಾಹುಲ್ ಗಾಂಧಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ, ಹೀಗಾಗಿ ಅವರನ್ನು ತಾನು ಇಷ್ಟಪಡುತ್ತೇನೆ ಎಂದಿದ್ದಾರೆ.

ಬಾಲಕ ದೇಣಿಗೆ ನೀಡಿದ ವಿಡಿಯೋ ಹಂಚಿಕೊಂಡ ರಾಹುಲ್ ಗಾಂಧಿ, “ತ್ಯಾಗ ಮತ್ತು ಸ್ವಾರ್ಥವು ಬಾಲ್ಯದಲ್ಲಿ ಕಂಡುಬರುವ ಆಚರಣೆಗಳಿಂದ ಬರುತ್ತದೆ. ಈ ಪಿಗ್ಗಿ ಬ್ಯಾಂಕ್ ನನಗೆ ಅಮೂಲ್ಯವಾಗಿದೆ, ಇದು ಲೆಕ್ಕವಿಲ್ಲದಷ್ಟು ಪ್ರೀತಿಯ ಖಜಾನೆಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Bharat Jodo Yatra ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಕೈ ನಾಯಕರ ವಿರುದ್ಧ ದೂರು ದಾಖಲು

ಹುಂಡಿಯಲ್ಲಿರುವ ಹಣವನ್ನು ಭಾರತ್ ಜೋಡೋ ಯಾತ್ರೆಗೆ ಬಳಸಿಕೊಳ್ಳುವಂತೆ ರಾಹುಲ್ ಗಾಂಧಿಗೆ ಹೇಳಿರುವುದಾಗಿ ಯಶರಾಜ್ ಪರ್ಮಾರ್ ಹೇಳಿದ್ದಾರೆ. “ಭಾರತ್ ಜೋಡೋ ಯಾತ್ರೆ ಹಿಂದೂ ಮತ್ತು ಮುಸ್ಲಿಮರನ್ನು ಒಗ್ಗೂಡಿಸಲು ಮತ್ತು ಅವರ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಎಲ್ಲರೂ ಒಂದೇ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ” ಎಂದು ಯಶರಾಜ್ ಪರ್ಮಾರ್ ಹೇಳಿದ್ದಾನೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:23 am, Mon, 28 November 22