Jagadish Shettar: ಟಿಪ್ಪು ಬೆಂಬಲಿಸಿ, RSS ಬೈಯ್ಯುವುದೇ ಸಿದ್ದರಾಮಯ್ಯನ ಕಾಯಕ: ಜಗದೀಶ್ ಶೆಟ್ಟರ್ ವಾಗ್ದಾಳಿ
ಸಿದ್ದರಾಮಯ್ಯ ಪ್ರತಿದಿನ ಟಿಪ್ಪು ಪೂಜೆ ಮಾಡುತ್ತಾರೆ. ಟಿಪ್ಪು ಬೆಂಬಲಿಸಿ RSS ಬೈಯ್ಯುವುದೇ ಸಿದ್ದರಾಮಯ್ಯನ ಕಾಯಕ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿ: ಸಿದ್ದರಾಮಯ್ಯ (Siddaramaiah) ಪ್ರತಿದಿನ ಟಿಪ್ಪು (Tippu) ಪೂಜೆ ಮಾಡುತ್ತಾರೆ. ಟಿಪ್ಪು ಬೆಂಬಲಿಸಿ RSS ಬೈಯ್ಯುವುದೇ ಸಿದ್ದರಾಮಯ್ಯನ ಕಾಯಕ. ಕಾಂಗ್ರೆಸ್ (Congress) ಅವಧಿಯಲ್ಲಿ ಹಿಂದೂ ಕಾರ್ಯಕರ್ತರ (Hindu Activist) ಹತ್ಯೆಯಾಗಿತ್ತು ಎಂದು ಹುಬ್ಬಳ್ಳಿಯಲ್ಲಿ (Hubli) ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ವಿಪಕ್ಷನಾಯಕ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಅವರು ಶಾಸಕ ಸಿ.ಟಿ.ರವಿ ನೀಡಿರುವ ಹೇಳಿಕೆಯಲ್ಲಿ ತಪ್ಪೇನಿದೆ? ಎನ್ನುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆಯಾಗುತ್ತದೆ ಎಂಬ ಸಿ.ಟಿ.ರವಿ ಹೇಳಿಕೆಯನ್ನು ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ.
ಮೋದಿ ಸರ್ಕಾರ ಬಂದ ನಂತರ ಕೋಮು ಗಲಭೆಗಳು ನಿಂತಿವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದೂ ಮುಸ್ಲಿಂ ಗಲಭೆ ಇರತ್ತೆ, ಹೀಗಾಗಿ ಸಿಟಿ ರವಿ ಆ ರೀತಿ ಹೇಳಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ನೂರಕ್ಕೆ 99%ರಷ್ಟು ವರುಣಾ ಕ್ಷೇತ್ರದಿಂದಲೇ ನಿಲ್ತಾರೆ: ಬಿಜೆಪಿ ಹಿರಿಯ ನಾಯಕ ಭವಿಷ್ಯ
ಅಧಿಕಾರದ ಲಾಲಸೆಗೆ ಡಿಕೆ ಶಿವಕುಮಾರ್ ವೇದಿಕೆ ದುರುಪಯೋಗ ಮಾಡಿಕೊಂಡಿದ್ದಾರೆ
ಒಕ್ಕಲಿಗರ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುವ ಆಸೆ ತೋರ್ಪಡಿಸಿರುವ ವಿಚಾರವಾಗಿ ಮಾತನಾಡಿದ ಅವರು ಅಧಿಕಾರದ ಲಾಲಸೆಗೆ ಡಿಕೆ ಶಿವಕುಮಾರ್ ವೇದಿಕೆ ದುರುಪಯೋಗ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕಾಗಿ ಯಾವ ವೇದಿಕೆಯನ್ನಾದರೂ ದುರಪಯೋಗ ಮಾಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಿರ್ಣಾಮವಾಗುತ್ತೆ. ಪಂಜಾಬ್ದಲ್ಲಿ ಸಿದ್ದು ಗಲಾಟೆಯಿಂದ ಕಾಂಗ್ರೆಸ್ ನಿರ್ಣಾಮವಾಯ್ತು. ಕರ್ನಾಟಕದಲ್ಲಿ ಕಾಂಗ್ರೆಸ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಜಗಳದಿಂದ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ
ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಧಾರವಾಡಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಸಿದ್ದರಾಮಯ್ಯ ಕುಂಕುಮ, ತಿಲಕವಿಟ್ಟವರನ್ನು ನೋಡಿದರೆ ಹೆದರಿಕೆ ಆಗುತ್ತೆ ಎಂದಿದ್ದರು. ತಮ್ಮ ಅಧಿಕಾರವಧಿಯಲ್ಲಿ PFI ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ: Pralhad Joshi: ನಾಲ್ಕು ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಗೆದ್ದು ಬೀಗಿರುವ ಪ್ರಲ್ಹಾದ್ ಜೋಶಿ ರಾಜಕೀಯ ಹಾದಿ ಇಲ್ಲಿದೆ
ಸಿ.ಟಿ.ರವಿ ನಿವಾಸಕ್ಕೆ ಕಾಂಗ್ರೆಸ್ಸಿಗರು ಮುತ್ತಿಗೆ ಹಾಕುವ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್ ಮನೆಗಳಿಗೂ, ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಬಹುದು. ಆದರೆ ಆ ಸಂಸ್ಕೃತಿ ನಮ್ಮದಲ್ಲ. ಹೀಗಾಗಿ ಸಿದ್ದರಾಮಯ್ಯ ಪಟಾಲಂ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದರು.
ದರ್ಪದಿಂದ ಬಂದರೆ ದರ್ಪದ ಭಾವನೆಯಿಂದಲೇ ಪ್ರತಿಕ್ರಿಯಿಸುತ್ತೇವೆ
‘ಕೈ’ ಕಾರ್ಯಕರ್ತರು ಸಿ.ಟಿ ರವಿ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿರುವ ವಿಚಾರವಾಗಿ ಮಾತನಾಡಿದ ಶಾಸಕ ಸಿ.ಟಿ ರವಿ ಸದ್ಭಾವನೆಯಿಂದ ಬಂದರೆ ಅತಿಥಿಗಳು ಎಂದು ನಾವು ಭಾವಿಸುತ್ತೇವೆ. ಅತಿಥಿಗಳನ್ನು ದೇವರು ಎಂದು ಭಾವಿಸುತ್ತೇವೆ, ಸತ್ಕಾರ ಮಾಡುತ್ತೇವೆ. ದರ್ಪದಿಂದ ಬಂದರೆ ಆ ಭಾವನೆಯಿಂದಲೇ ಪ್ರತಿಕ್ರಿಯಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಅವರು ನಾನು ಅಷ್ಟೇ ಹೇಳಿಲ್ಲ, ಈ ಹಿಂದೆ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಸಹ ಹೇಳಿದ್ದಾರೆ. ಸಿದ್ದರಾಮಯ್ಯಗೆ ಪ್ರಿಯವಾಗಿರುವುದನ್ನೇ ಹೇಳಿದ್ದೇನೆ. ಟಿಪ್ಪು ಸುಲ್ತಾನ್, ಟಿಪ್ಪು ಟೋಪಿ ಪ್ರಿಯವಾಗಿರುವುದಲ್ಲವೇ. ಸಿದ್ದರಾಮಯ್ಯಗೆ ಕೇಸರಿ ಪೇಟ, ಕುಂಕುಮ ಆಗುವುದಿಲ್ಲ. ನಾನು (ಸಿದ್ದರಾಮಯ್ಯ) ಹೆಂಗಿದ್ದೀನಿ ಹಾಗೇ ಹೇಳಿದ್ದಾರೆ ಅಂತ ಆನಂದ ಪಡುತ್ತಾರೆ. ಟಿಪ್ಪು ಜಯಂತಿಗೆ ಜನ ಕೊಟ್ಟಿರುವ ಭಾವನೆ ಅಂತಾ ಭಾವಿಸ್ತಾರೆ ಅಂತ ಅಂದುಕೊಂಡಿದ್ದೇನೆ ಎಂದು ವ್ಯಂಗ್ಯವಾಡಿದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:29 pm, Mon, 28 November 22