ನಾನು ಕಾಂಗ್ರೆಸ್ ಬಿಟ್ಟಾಯ್ತು, ಈಗ ಅಲ್ಲಿ ಇರೋದೆಲ್ಲಾ ಬರಿ ಕತ್ತೆಗಳೆ: ಸಿದ್ದರಾಮಯ್ಯಗೆ ಸಿ.ಎಂ.ಇಬ್ರಾಹಿಂ ಟಾಂಗ್

|

Updated on: Feb 26, 2023 | 3:52 PM

ಕುಮಾರಸ್ವಾಮಿ ಅವರಿಗೆ ಅಧಿಕಾರ ನೀಡಿದ ಬಗ್ಗೆ ಟೀಕಿಸುತ್ತಾ ಸಿದ್ದರಾಮಯ್ಯ ಅವರು, ಕೊಟ್ಟ ಕುದುರೆಯನ್ನ ಏರದವ ವೀರನನೂ ಅಲ್ಲಾ ಶೂರನೂ ಅಲ್ಲಾ ಅಂತ ಪದೇಪದೇ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಟಾಂಗ್ ಕೊಟ್ಟ ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್​ನಲ್ಲಿ ಈಗ ಇರುವುದೆಲ್ಲಾ ಬರೀ ಕತ್ತೆಗಳು ಅಂತಾ ಹೇಳಿದ್ದಾರೆ.

ನಾನು ಕಾಂಗ್ರೆಸ್ ಬಿಟ್ಟಾಯ್ತು, ಈಗ ಅಲ್ಲಿ ಇರೋದೆಲ್ಲಾ ಬರಿ ಕತ್ತೆಗಳೆ: ಸಿದ್ದರಾಮಯ್ಯಗೆ ಸಿ.ಎಂ.ಇಬ್ರಾಹಿಂ ಟಾಂಗ್
ಸಿದ್ದರಾಮಯ್ಯ ಮತ್ತು ಸಿ.ಎಂ.ಇಬ್ರಾಹಿಂ
Follow us on

ಮಂಡ್ಯ: ಕಾಂಗ್ರೆಸ್​ ಪಕ್ಷದಲ್ಲಿ ಕುದುರೆ ಇರಲೇ ಇಲ್ಲ, ಬರೀ ಕತ್ತೆಗಳಿದ್ದವು. ನಾನು ಸಾಬ್ರು ಅಲ್ಲಿದ್ದೆ, ನಾನು ಅದಕ್ಕೆಲ್ಲಾ ಮಾಲೀಶ್ ಮಾಡಿ ಕುದುರೆ ಮಾಡಿದ್ದೆ. ಸದ್ಯ ನಾನು ಕಾಂಗ್ರೆಸ್ ಬಿಟ್ಟಾಗಿದೆ. ಈಗ ಆ ಪಕ್ಷದಲ್ಲಿರುವುದೆಲ್ಲಾ ಬರೀ ಕತ್ತೆಗಳೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (C.M.Ibrahim) ಅವರು ಹೇಳಿದ್ದಾರೆ. ಆ ಮೂಲಕ ಸಿದ್ದರಾಮಯ್ಯ (Siddaramaiah) ಸಹಿತ ಕೈ ಶಾಸಕರು ಹಾಗೂ ನಾಯಕರನ್ನ ಪರೋಕ್ಷವಾಗಿ ಕತ್ತೆಗೆ ಹೋಲಿಸಿದರು. ಬಿಜೆಪಿಗೆ ಅಧಿಕಾರ ಸಿಗಬಾರದೆಂಬ ಕಾರಣಕ್ಕೆ ಕಾಂಗ್ರೆಸ್ ಜೆಡಿಎಸ್​ ಜೊತೆ ಸೇರಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿತ್ತು. ಆದರೆ ಈ ಸರ್ಕಾರ ಒಂದೇ ವರ್ಷಕ್ಕೆ ಪತನಗೊಂಡಿತ್ತು. ಇದನ್ನು ಟೀಕಿಸುತ್ತಾ ಸಿದ್ದರಾಮಯ್ಯ ಅವರು, ಕೊಟ್ಟ ಕುದುರೆಯನ್ನ ಏರದವ ವೀರನನೂ ಅಲ್ಲಾ ಶೂರನೂ ಅಲ್ಲಾ ಎಂದು ಕುಮಾರಸ್ವಾಮಿ ಅವರನ್ನು ಜರಿದಿದ್ದರು.

ಇನ್ನು, ಸಿದ್ದರಾಮಯ್ಯ ಅವರ ಕುದುರೆ ಹೇಳಿಕೆಗೆ ಈ ಹಿಂದೆ ತಿರುಗೇಟು ನೀಡಿದ್ದ ಕುಮಾರಸ್ವಾಮಿ, ನೀವೆ ಸಿಎಂ ಸ್ಥಾನ ತಗೊಂಡು‌ ಕೆಲಸ ಮಾಡಿ ಅಂದಿದ್ದೆ. ಆದರೆ ಏನಾಯ್ತು ಅಂತ ಸಿದ್ದರಾಮಯ್ಯ ಅವರು ಜನತೆ ಮುಂದೆ ಹೇಳಲಿ. ಅವರು ಕೊಟ್ಟ ಕುದುರೆ ಹೇಗಿತ್ತು ಅಂದರೆ, ಕುದುರೆಯ ನಾಲ್ಕು ಕಾಲು ಮುರಿದು ಓಡಿಸಲು ಬಿಟ್ಟಿದ್ದರು ಎಂದು ಹೇಳಿದ್ದರು.

ಇದನ್ನೂ ಓದಿ: ಸಭೆ ರದ್ದಾಗಿರಬಹುದು, ಆದರೆ ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ನನ್ನ ನಿಲುವು ಬದಲಾಗಲ್ಲ: ಕುಮಾರಸ್ವಾಮಿ

2018ರಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಅಂತತ್ರವಾಗಿತ್ತು. ಅದಾಗ್ಯೂ ಬಿಜೆಪಿ ರಾಜ್ಯದ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅದಾಗ್ಯೂ, ಸರ್ಕಾರ ರಚನೆ ಬಗ್ಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ತೀವ್ರ ಪೂಪೋಟಿ ನಡೆಯುತ್ತಿತ್ತು. ಜೆಡಿಎಸ್ ಪಕ್ಷ ಯಾವ ಪಕ್ಷ ಯಾರ ಜೊತೆ ಸೇರಿ ಸರ್ಕಾರ ರಚಿಸುತ್ತದೆ ಎಂಬ ಕುತೂಹಲ ರಾಜ್ಯದಲ್ಲಿ ಮೂಡಿತ್ತು. ಕಾಂಗ್ರೆಸ್ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾತುಕತೆ ನಡೆಸುವಲ್ಲಿ ಯಶಸ್ವಿಯಾಗಿತ್ತು. ಅದರಂತೆ ಜೆಡಿಎಸ್ ಕೈ ಹಿಡಿದು ಸರ್ಕಾರ ರಚನೆ ಮಾಡಿತ್ತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಇದಾದ ಒಂದು ವರ್ಷಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿದರು. ಪರಿಣಾಮ ಸ್ಪಷ್ಟ ಬಹುಮತವಿಲ್ಲದೆ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಿತು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ