AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ, ಸಿದ್ದರಾಮಯ್ಯ ಸೋಲುವುದು ಶತಃಸಿದ್ಧ: ಸಿ.ಎಂ.ಇಬ್ರಾಹಿಂ ಭವಿಷ್ಯ

ಈ ಬಾರಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋಲುವುದು ಶತಃಸಿದ್ಧ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.

ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ, ಸಿದ್ದರಾಮಯ್ಯ ಸೋಲುವುದು ಶತಃಸಿದ್ಧ: ಸಿ.ಎಂ.ಇಬ್ರಾಹಿಂ ಭವಿಷ್ಯ
ಸಿದ್ಧರಾಮಯ್ಯ ಸಿ.ಎಂ.ಇಬ್ರಾಹಿಂ
ಗಂಗಾಧರ​ ಬ. ಸಾಬೋಜಿ
|

Updated on: Feb 26, 2023 | 3:03 PM

Share

ಮಂಡ್ಯ: ಈ ಬಾರಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋಲುವುದು ಶತಃಸಿದ್ಧ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (CM Ibrahim) ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಮಾತನಾಡಿ, ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದು ಸೂಕ್ತವಲ್ಲ. ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ರೂ ಸೋಲು ಕಟ್ಟಿಟ್ಟ ಬುತ್ತಿ. ಸ್ನೇಹಿತನಾಗಿ ಒಂದು ಸಲಹೆ ಕೊಡ್ತೀನಿ, ನೀವು ವರುಣಾದಲ್ಲೇ ಸ್ಪರ್ಧಿಸಿ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲ. ಆದರೆ ಸಿದ್ದರಾಮಯ್ಯ ಸದನಕ್ಕೆ ಬರಬೇಕು ಅನ್ನೋದು ನನ್ನ ಆಸೆ. ಕಳೆದ ಬಾರಿ ನಿಮ್ಮ ಜೊತೆಯಲ್ಲಿದ್ದೆ, ಹಾಗಾಗಿ ಮುಸ್ಲಿಮರು ಮತ ಹಾಕಿದ್ರು. ಈ ಬಾರಿ ನಿಮ್ಮ ಪಕ್ಕ ನಾನಿಲ್ಲ, ಮುಸ್ಲಿಮರ ವೋಟು ನಿಮ್ಗೆ ಬೀಳುವುದಿಲ್ಲ. ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಃಸಿದ್ದ. 123 ಸ್ಥಾನ ಗೆದ್ದು ಕುಮಾರಸ್ವಾಮಿಯನ್ನು ಸಿಎಂ ಮಾಡೇ ಮಾಡುತ್ತೇವೆ ಎಂದು ಗುಡುಗಿದರು.

ಕೈ ಶಾಸಕ ಹಾಗೂ ನಾಯಕರನ್ನ ಪರೋಕ್ಷವಾಗಿ ಕತ್ತೆಗೆ ಹೋಲಿಸಿದ ಸಿಎಂ ಇಬ್ರಾಹಿಂ

ಕೊಟ್ಟ ಕುದುರೆಯನ್ನ ಏರದವ ವೀರನೂ ಅಲ್ಲಾ ಶೂರನೂ ಅಲ್ಲಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಇಬ್ರಾಹಿಂ ನೀಡಿದ್ದು, ಅಲ್ಲಿ ಕುದುರೆ ಇರ್ಲೇ ಇಲ್ಲಾ, ಬರಿ ಕತ್ತೆಗಳಿತ್ತು. ನಾನು ಸಾಬ್ರು ಅಲ್ಲಿದ್ದೆ ಅದಕ್ಕೆಲ್ಲಾ ಮಾಲೀಶ್ ಮಾಡಿ ಕುದುರೆ ಮಾಡಿದ್ದೆ. ನಾನು ಕಾಂಗ್ರೆಸ್ ಬಿಟ್ಟಾಯ್ತು ಇನ್ನು ಅಲ್ಲಿ ಇರೋದೆಲ್ಲಾ ಬರಿ ಕತ್ತೆಗಳೇ ಎಂದು ಕೈ ಶಾಸಕ ಹಾಗೂ ನಾಯಕರನ್ನ ಪರೋಕ್ಷವಾಗಿ ಕತ್ತೆಗೆ ಹೋಲಿಸಿದರು.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಹೆಚ್​ಡಿಕೆ ದಿಢೀರ್ ಸುದ್ದಿಗೋಷ್ಠಿ: ಹಾಸನ ಟಿಕೆಟ್​​ ಫೈಟ್​ಗೆ ಟ್ವಿಸ್ಟ್ ಕೊಟ್ಟ ಕುಮಾರಣ್ಣ

ಹಾಸನದಲ್ಲಿ ಟಿಕೆಟ್ ದಂಗಲ್  

ಇನ್ನು ಹಾಸನದಲ್ಲಿ ನಡೆಯುತ್ತಿರುವ ಟಿಕೆಟ್ ದಂಗಲ್ ಕುರಿತು ಪ್ರತಿಕ್ರಿಯಿಸಿದ್ದು, ನಮ್ಮಲ್ಲಿ ಯಾವುದೇ ರೀತಿಯ ಗೊಂದಲಗಳು ಇಲ್ವೇ ಇಲ್ಲಾ. ಒಂದು ಕ್ಷೇತ್ರ ಅಂದ ಮೇಲೆ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳು ಇರುತ್ತಾರೆ. ಅದೇ ರೀತಿ ಹಾಸನದಲ್ಲಿಯೂ ಇದೇ ಅಷ್ಟೇ. ಹಾಸನ ಅಂತ ಅಲ್ಲಾ ಹತ್ತಾರು ಕ್ಷೇತ್ರಗಳಲ್ಲಿ ಆಕಾಂಕ್ಷಿತರ ಸಂಖ್ಯೆ ಹೆಚ್ಚಿದೆ. ಎಲ್ಲವೂ ಸರಿ ಹೋಗುತ್ತೆ. ಹೋದ ಬಾರಿ ಸಾಬ್ರು ಮಾಡಿದ ತಪ್ಪಿಗೆ ಪ್ರೀತಂ ಗೌಡ ಗೆದ್ದ. ಈ ಬಾರಿ ಅವಕಾಶವನ್ನ ನಾವು ನೀಡುವುದಿಲ್ಲ. ಈ ಬಾರಿ ಜೆಡಿಎಸ್ ಗೆದ್ದೆ ಗೆಲ್ಲುತ್ತೆ ಎಂದು ಹೇಳಿದರು.

ಇದನ್ನೂ ಓದಿ: ಹಾಸನ ಟಿಕೆಟ್​ ಫೈಟ್: ಹಾಸನ ಅಖಾಡದಲ್ಲಿ ಕ್ಷಣಕ್ಕೊಂದು ತಿರುವು, ದಿನಕ್ಕೊಂದು ಬೆಳವಣಿಗೆ, ಹೆಚ್​ಡಿಕೆಗೆ ದೊಡ್ಡಗೌಡ್ರ ಖಡಕ್ ಸೂಚನೆ

ಹೆಚ್​ಡಿಕೆಗೆ ದೊಡ್ಡಗೌಡ್ರ ಖಡಕ್ ಸೂಚನೆ

ಹಾಸನ ಟಿಕೆಟ್​​ ಗೊಂದಲ ನಿವಾರಿಸಲು ಕುಮಾರಸ್ವಾಮಿ ಕರೆದ ಮೀಟಿಂಗ್ ನಡೆಸಲು ಸಕಲ ಸಿದ್ಧತೆ ನಡೆಸಿದ್ದರು. ಈ ಮೂಲಕ ಮನೆಯಲ್ಲೇ ದೊಡ್ಡ ಯುದ್ಧಕ್ಕೆ ಕಾರಣವಾಗಿರುವ ಹಾಸನ ಟಿಕೆಟ್ ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿತ್ತು. ಆದ್ರೆ, ಇದರ ಮಧ್ಯೆ ದೇವೇಗೌಡರು ಅಖಾಡಕ್ಕೆ ಇಳಿದಿದ್ದು, ಟಿಕೆಟ್ ಗೊಂದಲ ನಿವಾರಣೆಗೆ ಹೆಚ್.​ಡಿ.ಕುಮಾರಸ್ವಾಮಿ ಆಯೋಜಿಸಿದ್ದ ಮೀಟಿಂಗ್​ಅನ್ನೇ ರದ್ದುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಇದೀಗ ದೇವೇಗೌಡ ಮತ್ತೊಂದು ಹೆಜ್ಜೆ ಮುಂದಿಟ್ಟು ನನ್ನ ಗಮನಕ್ಕೆ ಬಾರದೇ ಯಾವುದೇ ನಿರ್ಧಾರ ಬೇಡ ಎಂದು ಕುಮಾರಸ್ವಾಮಿಗೆ ಖಡಕ್ ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.