ಚಿಕ್ಕಮಗಳೂರಿನಲ್ಲಿ ಹೆಚ್ಡಿಕೆ ದಿಢೀರ್ ಸುದ್ದಿಗೋಷ್ಠಿ: ಹಾಸನ ಟಿಕೆಟ್ ಫೈಟ್ಗೆ ಟ್ವಿಸ್ಟ್ ಕೊಟ್ಟ ಕುಮಾರಣ್ಣ
ನಿನ್ನೆ ಮೊನ್ನೆ ಬಿಜೆಪಿಗೆ ಸೇರಿಕೊಂಡು ಏನೇನು ಮಾತನಾಡುತ್ತಾನೆ. ಮೆಡಿಕಲ್ ಕಾಲೇಜಿಗೆ ವೈದ್ಯರನ್ನು ನೇಮಕ ಮಾಡಲು 20 ರಿಂದ 30 ಲಕ್ಷ ರೂ. ದುಡ್ಡು ವಸೂಲಿ ಮಾಡುತ್ತಾರೆ. ಆಸ್ಪತ್ರೆಯ ಪರಿಸ್ಥಿತಿ ಹೇಗಿದೆ ಅನ್ನುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯ ವಿಧಾನಪರಿಷತ್ ಸದಸ್ಯನ ಮಗಳಿಗೆ ಎಷ್ಟು ಲಕ್ಷ ಕೇಳಿದ್ರಿ? ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಸಚಿವ ಕೆ ಸುಧಾಕರ್ಗೆ ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರು: ಹಾಸನಕ್ಕೆ (Hassan) ಹೋಗುತ್ತೇನೆ ಅಷ್ಟೆ. ಕಾರ್ಯಕರ್ತರನ್ನು ಭೇಟಿ ಮಾಡಲ್ಲ. ಸಮಾನ ಮನಸ್ಕರನ್ನು ಕಚೇರಿಗೆ ಬರಲು ಹೇಳಿದ್ದೆನೆ. ಜನರಲ್ಲಿ ಬೇರೆ ಭಾವನೆ ಬರದಬಾರದು ಅಂತ ಬರಲು ಹೇಳಿದ್ದೆ. ನಮ್ಮ ಪಕ್ಷದ ಬಗ್ಗೆ ಯಾರೂ ಬೆಟ್ಟು ಮಾಡುವಂತಿಲ್ಲ. ಹಾಸನದ ಗೊಂದಲದ ಬಗ್ಗೆ ಕಾರ್ಯಕರ್ತರ ಬಳಿ ಸಮಾಲೋಚನೆ ಮಾಡಲು ಬರ ಹೇಳಿದ್ದೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟನೆ ನೀಡಿದರು. “ಹಾಸನ ವಿಧಾನಸಭಾ ಟಿಕೆಟ್ ವಿಚಾರವಾಗಿ ಕುಟುಂಬದಲ್ಲೇ ಬಿರುಕು ಮೂಡಿದ್ದು, ಇದು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿ ಮಾಡಿದೆ. ಈ ಹಿನ್ನೆಲೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಇಂದು (ಫೆ.26) ಹಾಸನ ಕ್ಷೇತ್ರದ ಹಾಸನ ಕ್ಷೇತ್ರದ 300 ಪ್ರಮುಖ ಮುಖಂಡರ ಸಭೆ ಕರೆದಿದ್ದರು. ಸದ್ಯ ಸಭೆ ರದ್ದಾಗಿದೆ”.
ಕೊಪ್ಪ ತಾಲೂಕಿನ ಹರಂದೂರು ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರ (HD Devegowda) ಜೊತೆ ಮಾತನಾಡಿಲ್ಲ. ಬೇರೆಯವರಿಗೆ ದೇವೇಗೌಡರ ಆರೋಗ್ಯ ಬಗೆ ಕಾಳಜಿ ಇಲ್ಲ. ಹೆಚ್.ಡಿ.ದೇವೇಗೌಡರ ಆರೋಗ್ಯವನ್ನು ಕೆಡಿಸಲು ಬಯಸಲ್ಲ. ಹಾಸನ ಟಿಕೆಟ್ ಗೊಂದಲ ಬಗೆಹರಿಸುವ ಶಕ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೆಡಿಕಲ್ ಕಾಲೇಜ್ ಅಸಿಸ್ಟೆಂಟ್ ಪ್ರೊಫೆಸರ್ ನೇಮಕಕ್ಕೆ 50 ಲಕ್ಷ ರೂ. ಹಣ ಕೇಳಿಲ್ವಾ
ಹೆಚ್ಡಿ ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವ ಹೇಳಿಕೆ ನೀಡುತ್ತಾರೆ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಿನ್ನೆ ಮೊನ್ನೆ ಬಿಜೆಪಿಗೆ ಸೇರಿಕೊಂಡು ಏನೇನೊ ಮಾತನಾಡುತ್ತಾನೆ. ಮೆಡಿಕಲ್ ಕಾಲೇಜಿಗೆ ವೈದ್ಯರನ್ನು ನೇಮಕ ಮಾಡಲು 20 ರಿಂದ 30 ಲಕ್ಷ ರೂ. ದುಡ್ಡು ವಸೂಲಿ ಮಾಡುತ್ತಾರೆ. ಆಸ್ಪತ್ರೆಯ ಪರಿಸ್ಥಿತಿ ಹೇಗಿದೆ ಅನ್ನುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯ (BJP) ವಿಧಾನಪರಿಷತ್ ಸದಸ್ಯನ ಮಗಳಿಗೆ ಎಷ್ಟು ಲಕ್ಷ ಕೇಳಿದ್ರಿ? ಮೆಡಿಕಲ್ ಕಾಲೇಜ್ ಅಸಿಸ್ಟೆಂಟ್ ಪ್ರೊಫೆಸರ್ ನೇಮಕಕ್ಕೆ 50 ಲಕ್ಷ ರೂಪಾಯಿ ಹಣ ಕೇಳಿಲ್ವಾ ? ಎಂದು ಸಚಿವ ಡಾ. ಕೆ ಸುಧಾಕರ್ (K Sudhakar) ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಮುಖ್ಯಮಂತ್ರಿಗಳ ಬಳಿ 50 ಲಕ್ಷ ಎಲ್ಲಿಂದ ತರೋದು ಅಂತ ಕಂಪ್ಲೇಂಟ್ ಮಾಡಿಲ್ವಾ?. ಭ್ರಷ್ಟಾಚಾರದ ಬಗ್ಗೆ ನಾನು ಚರ್ಚೆ ಮಾಡುತ್ತಿಲ್ಲ. ಕಾಂಗ್ರೆಸ್ಸಿಗೂ ನನಗೂ ವ್ಯತ್ಯಾಸ ಇದೆ. ಬೇಕು ಅಂದರೇ ದಾಖಲೆ ಸಮೇತ ಕೊಡುತ್ತೇನೆ. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಆಗ ಯಾರೆಲ್ಲ ಆರೋಪ ಮಾಡಿದರು. ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಮತ್ತು ಸದಾನಂದಗೌಡ ಮಾಡಿದ ಆರೋಪಗಳ ಪೇಪರ್ ಕಟಿಂಗ್ಸ್ ಇದೆ. 5 ಕೋಟಿ ಚೆಕ್ ವ್ಯವಹಾರದಲ್ಲಿ ಸದಾನಂದಗೌಡರದ್ದೇ ಸಹಿ ಇದೆ. ನಾನು ಸಾಬೀತು ಮಾಡದೆ ಇದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಅಂತ ಯಡಿಯೂರಪ್ಪ ಹೇಳಿಲ್ವಾ? ಎಂದು ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ