ಮಂಡ್ಯ: ಮಂಡ್ಯದ ಮನ್ಮುಲ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಇದೇ ಜುಲೈ 6ರಂದು ಮನ್ಮುಲ್(Mandya Manmul) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಮನ್ಮುಲ್ ಹಾಲು ಒಕ್ಕೂಟ 12 ನಿರ್ದೇಶಕರನ್ನು ಹೊಂದಿದ್ದು, 12ರಲ್ಲಿ 7 ಜೆಡಿಎಸ್ ಬೆಂಬಲಿತ ಹಾಗೂ 3 ಕಾಂಗ್ರೆಸ್ ಬೆಂಬಲಿತ ಇಬ್ಬರು ಬಿಜೆಪಿ ಬೆಂಬಲಿತ ನಿರ್ದೇಶಕರು ಇದ್ದು, ಅಧ್ಯಕ್ಷ ಸ್ಥಾನಕ್ಕೆ ಮೂವರು ಸರ್ಕಾರಿ ಅಧಿಕಾರಿಗಳು ಹಾಗೂ 1 ನಾಮನಿರ್ದೇಶಿತ ಸದಸ್ಯ ಸೇರಿ ಒಟ್ಟು 16 ಜನರಿಗೆ ಮತದಾನದ ಹಕ್ಕು ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯವನ್ನು ಛಿದ್ರಗೊಳಿಸಿರುವ ಕಾಂಗ್ರೆಸ್, ಇದೀಗ ಮಂಡ್ಯದ ಮನ್ಮುಲ್ ವಶಕ್ಕೆ ಪಡೆದುಕೊಳ್ಳಲು ರಣತಂತ್ರ ರೂಪಿಸಿದೆ.
ಮನ್ಮುಲ್ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಪೈಪೋಟಿ ಶುರುವಾಗಿದ್ದು, 2 ಪಕ್ಷಗಳಿಗೂ ಬಿಜೆಪಿ ಬೆಂಬಲಿತರ ನಿರ್ದೇಶಕರ ಬೆಂಬಲ ಅನಿವಾರ್ಯವಾಗಿದೆ. ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಉಮ್ಮಡಹಳ್ಳಿ ಶಿವಪ್ಪಗೆ ಜೆಡಿಎಸ್ನ ನೆಲ್ಲಿಗೆರೆ ಬಾಲು ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮನ್ಮುಲ್ ಅಧ್ಯಕ್ಷ ಸ್ಥಾನದ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.
2018ರಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 7ಕ್ಕೆ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಕ್ಲೀನ್ ಸ್ವಿಪ್ ಮಾಡಿದ್ದ ಜೆಡಿಎಸ್, ಈಗ ಒಂದು ಸ್ಥಾನಕ್ಕೆ ಕುಸಿದು ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿದೆ. ಇದರ ಮಧ್ಯೆ ಇದೀಗ ಮನ್‌ಮುಲ್ ಆಡಳಿತ ಚುಕ್ಕಾಣಿಯನ್ನುಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಜೆಡಿಎಸ್ ಇದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ