ಉತ್ತರ ಕನ್ನಡ: ಮೊದಲ ಬಾರಿಗೆ ಜಿಲ್ಲೆಯ ಭಟ್ಕಳ ಕಾಂಗ್ರೆಸ್ ಶಾಸಕ ಮಂಕಾಳ ವೈದ್ಯ(Mankal Vaidya)ರಿಗೆ ಸಚಿವ ಸ್ಥಾನ ಒಲಿದಿದೆ. ಇಂದು(ಮೇ.27) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಂಕಾಳ ವೈದ್ಯ ಅವರ ಪೂರ್ಣ ಹೆಸರು ಮಂಕಾಳ ಸುಬ್ಬ ವೈದ್ಯ ಎಂದು ಇವರು 1972 ಜೂನ್ 5 ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಜನಿಸಿದರು. ಇವರು 8 ನೇ ತರಗತಿ ಓದಿದ್ದಾರೆ. ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿರುವ ಇವರು ಪುಷ್ಪಲತಾ ವೈದ್ಯ ಎಂಬುವವರನ್ನ ವರಿಸಿದರು. ಬಳಿಕ ಅಲ್ಲಿಂದ ರಾಜಕೀಯದ ಕಡೆ ಒಲವು ತೋರಲು ಶುರು ಮಾಡಿದರು.
ರಾಜಕೀಯ ಜೀವನ
ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿದ್ದ ಕಾರಣ ಮಂಕಾಳು ವೈದ್ಯ ಅವರು 2013 ರಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ಹೌದು ಬಿಜೆಪಿ, ಕಾಂಗ್ರೆಸ್ಗೆ ಟಕ್ಕರ್ ನೀಡುವ ಮೂಲಕ ಜಯಶಾಲಿಯಾದರು. ಇನ್ನು 2014 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬಳಿಕ2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಸೋಲು ಅನುಭವಿಸಿದರು. ಇದೀಗ 2023 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 30,000 ಕ್ಕೂ ಅಧಿಕ ಮತಗಳಿಂದ ಬಿಜೆಪಿಯ ಸುನೀಲ್ ನಾಯ್ಕ್ ವಿರುದ್ದ ಭರ್ಜರಿ ಗೆಲವು ಸಾಧಿಸಿದರು. ನಂತರ ಸಚಿವ ಸಂಪುಟದಲ್ಲಿ ತಮಗೂ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ಲಭಿಸುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ:24 New Ministers Oath Taking Live: 24 ಮಂದಿ ಸಚಿವರಾಗಿ ಪ್ರಮಾಣವಚನ, ಇಲ್ಲಿದೆ ನೋಡಿ ಲೈವ್
ಇನ್ನು ಕಳೆದ 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕಣದಲಿದ್ದ ಮಂಕಾಳ ವೈದ್ಯ 77,242 ಮತಗಳನ್ನ ಪಡೆದು ಕೇವಲ 5930 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ ಹೇಗಾದರೂ ಮಾಡಿ ಗೆಲುವು ಸಾಧಿಬೇಕೆಂದು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಜೊತೆಗ ಮಂಕಾಳು ವೈದ್ಯ ಅವರು 2013 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿ ಎಂದಿನಂತೆ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆ ಏರ್ಪಟಿತ್ತು. ಅದರಲ್ಲಿ ಮಂಕಾಳು ವೈದ್ಯ ಗೆಲುವಿನ ನಗೆ ಬಿರುವ ಮೂಲಕ ಸಚಿವ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Sat, 27 May 23