ಸಮಾಜದ ಮೇಲ್ವರ್ಗ ಜಾತಿಗಳಿಗೆ ಕಾಂಗ್ರೆಸ್ ಕಿರುಕುಳ ಕೊಟ್ಟಿದೆ: ಸಚಿವ ಡಾ. ಕೆ ಸುಧಾಕರ್

ಸಮಾಜದ ಮೇಲ್ವರ್ಗ ಜಾತಿಗಳಿಗೆ ಕಾಂಗ್ರೆಸ್ ಕಿರುಕುಳ ಕೊಟ್ಟಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಆರೋಪಿಸಿದ್ದಾರೆ.

ಸಮಾಜದ ಮೇಲ್ವರ್ಗ ಜಾತಿಗಳಿಗೆ ಕಾಂಗ್ರೆಸ್ ಕಿರುಕುಳ ಕೊಟ್ಟಿದೆ: ಸಚಿವ ಡಾ. ಕೆ ಸುಧಾಕರ್
ಸಚಿವ ಡಾ ಕೆ ಸುಧಾಕರ್
Updated By: ವಿವೇಕ ಬಿರಾದಾರ

Updated on: Sep 25, 2022 | 5:48 PM

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇದೆ. ಈಗಿನಿಂದಲೇ ಜಾತಿ ರಾಜಕಾರಣದ ಕೆಸರೆಚಾಟವನ್ನು ರಾಷ್ಟ್ರೀಯ ಪಕ್ಷಗಳು ಶುರುಹಚ್ಚಿಕೊಂಡಿವೆ. ನಾನು ಕುರುಬ ಅಂತಾ ಪ್ರಧಾನಿ ನರೇಂದ್ರ ಮೋದಿ 10 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದಾರಾ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್​ ಪ್ರತಿಕ್ರಿಯಿ ಸಮಾಜದ ಮೇಲ್ವರ್ಗ ಜಾತಿಗಳಿಗೆ ಕಾಂಗ್ರೆಸ್ ಕಿರುಕುಳ ಕೊಟ್ಟಿದೆ ಎಂದು ಆರೋಪಿಸಿದ್ದಾರೆ.

ದಿವಂಗತ ವೀರೇಂದ್ರ ಪಾಟೀಲ್ ಅವರು ಕಾಂಗ್ರೆಸ್​ಗೆ 170 ಸೀಟು ತಂದುಕೊಟ್ಟಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸದಲ್ಲೇ ಅಷ್ಟು ಸ್ಥಾನಗಳು ಬಂದಿರಲಿಲ್ಲ. ಅನಾರೋಗ್ಯದ ಕಾರಣ ನೀಡಿ ಪಾಟೀಲ್​ರನ್ನು ಕೆಳಗಿಳಿಸಿದರು. ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿಸಿದರು. ಅವರು ಉದ್ಘಾಟಿಸುವ ಮುನ್ನವೇ ಅಧಿಕಾರದಿಂದ ಕೆಳಗಿಳಿಸಿದರು. S.M.ಕೃಷ್ಣರನ್ನು ಕಾಂಗ್ರೆಸ್​ನವರು ಯಾವರೀತಿ ನಡೆಸಿಕೊಂಡರು ? ಕರ್ನಾಟಕದಿಂದ ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಕಳಿಸಿದರು. ಬಳಿಕ ಕೇಂದ್ರ ಮಂತ್ರಿ ಸ್ಥಾನದಿಂದಲೂ ಅವರನ್ನು ಕೆಳಗಿಳಿಸಿದರು. ಹೀಗೆ ಕಾಂಗ್ರೆಸ್ ಬಗ್ಗೆ ಹೇಳ್ತಾ ಹೋದರೆ ದೊಡ್ಡಪಟ್ಟಿಯೇ ಇದೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ