ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Election Result 2023) ಹೊರ ಬಿದ್ದ 15 ದಿನಗಳ ಬಳಿಕ ಸಿದ್ದರಾಮಯ್ಯ ಸಂಪುಟ (Siddaramaiah Cabinet)ಫುಲ್ ಫಿಲ್ ಆಗಿದೆ. ಸಿಎಂ, ಡಿಸಿಎಂ ಸೇರಿ ಒಟ್ಟು 34 ಸಚಿವರಿದ್ದಾರೆ. ಆದ್ರೆ, ಇದೀಗ ಸಚಿವರ ಖಾತೆ ಕ್ಯಾತೆ(Ministers portfolio) ಶುರುವಾಗಿದೆ. ಅದರಲ್ಲೂ ಹಿರಿಯ ನಾಯಕ ರಾಮಲಿಂಗರೆಡ್ಡಿ9ramalinga reddy) ಅವರು ಖಾತೆಗೆ ಸಂಬಂಧ ಮುನಿಸಿಕೊಂಡಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಹಾಗೂ ಸಂಸದ ಡಿಕೆ ಸುರೇಶ್ ಮನವೊಲಿಸುವ ಕಸರತ್ತು ನಡೆಸಿದ್ದಾರೆ.
ಹೌದು….ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆಗೆ ಮುಂದಾಗಿದ್ದಾರೆ. ಆದ್ರೆ, ರಾಮಲಿಂಗರೆಡ್ಡಿ ಅವರು ಸಾರಿಗೆ ಖಾತೆ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದು, ಬೇರೆ ಖಾತೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ ತಮಗೆ ಸಾರಿಗೆ ಇಲಾಖೆ ನೀಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳುತ್ತಿರುವ ರಾಮಲಿಂಗರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಖಾತೆ ಸಂಬಂಧ ಮುನಿಸಿಕೊಂಡಿರುವ ರಾಮಲಿಂಗರೆಡ್ಡಿ ಅವರನ್ನು ಮನವೊಲಿಸಲು ಡಿಕೆ ಬ್ರದರ್ಸ್ ಮುಂದಾಗಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಯಿಂದಲೂ ಬೆಂಗಳೂರಿನ ಲಕ್ಕಸಂದ್ರ ಬಡಾವಣೆಯಲ್ಲಿರುವ ನಿವಾಸದಲ್ಲಿ ರಾಮಲಿಂಗರೆಡ್ಡಿ ಜೊತೆಗೆ ಡಿಕೆ ಸುರೇಶ್ ನಿರಂತರ ಮಾತುಕತೆ ನಡೆಸಿದ್ದು, ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ. ಆದರೂ ರಾಮಲಿಂಗರೆಡ್ಡಿ ಮಾತ್ರ ಬಗ್ಗುತ್ತಿಲ್ಲ. ಇದರಿಂದ ಅಂತಿಮವಾಗಿ ಖುದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಫೀಲ್ಡ್ಗೆ ಇಳಿದಿದ್ದು, ದಿಢೀರ್ ರಾಮಲಿಂಗರೆಡ್ಡಿ ನಿವಾಸಕ್ಕೆ ತೆರಳಿದ್ದು, ಮನವೊಲಿಕೆಗೆ ಯತ್ನಿಸುತ್ತಿದ್ದಾರೆ.
Published On - 3:30 pm, Sun, 28 May 23