‘ಬಿಜೆಪಿ ಶಾಸಕರು ಕೂಡ ನಮಸ್ಕಾರ್​ ಸಾಬ್​ ಹೇಳಿಕೆ ವಿವಾದ; ಯುಟರ್ನ್​ ಹೊಡೆದ ಸಚಿವ ಜಮೀರ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 17, 2023 | 5:07 PM

ಸಚಿವ ಜಮೀರ್ ಅಹಮ್ಮದ್​ ಖಾನ್ (Zameer Ahmad Khan) ​ ನೀಡಿದ್ದ ಹೇಳಿಕೆ, ವಿವಾದ ಆಗುತ್ತಿದ್ದಂತೆ ಯುಟರ್ನ್ ಹೊಡೆದಿದ್ದಾರೆ. ಕಾಂಗ್ರೆಸ್​(Congress) ಪಕ್ಷ ಮುಸ್ಲಿಂ ಸಮಾಜಕ್ಕೆ ಕೊಟ್ಟಿರುವ ಗೌರವ ಬಗ್ಗೆ ಮಾತಾಡಿದ್ದೇನೆ. ಯಾವುದೇ ವ್ಯಕ್ತಿ, ಪಕ್ಷದ ಶಾಸಕರ ಬಗ್ಗೆ ಅಗೌರವದಿಂದ ಮಾತನಾಡಿಲ್ಲ. ಕರ್ನಾಟಕದಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್ ಅತ್ಯುನ್ನತ ಗೌರವ ನೀಡಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪೀಕರ್ ಸ್ಥಾನ ನೀಡಿದ್ದಾರೆ. ಈ ಹಿನ್ನಲೆ ವಿಧಾನಸಭೆಯಲ್ಲಿ ನಾವೆಲ್ಲರೂ ಸಭಾಧ್ಯಕ್ಷರೇ ಎಂದು ಕರೆಯುತ್ತೇವೆ ಎಂದು ಹೇಳಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

‘ಬಿಜೆಪಿ ಶಾಸಕರು ಕೂಡ ನಮಸ್ಕಾರ್​ ಸಾಬ್​ ಹೇಳಿಕೆ ವಿವಾದ; ಯುಟರ್ನ್​ ಹೊಡೆದ ಸಚಿವ ಜಮೀರ್
ಜಮೀರ್​ ಅಹಮ್ಮದ್​ ಖಾನ್​
Follow us on

ಬೆಂಗಳೂರು, ನ.17: ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಕರ್ನಾಟಕದ ವಸತಿ ಸಚಿವ ಜಮೀರ್ ಅಹಮ್ಮದ್​ ಖಾನ್ (Zameer Ahmad Khan) ​ ನೀಡಿದ್ದ ಹೇಳಿಕೆ, ವಿವಾದ ಆಗುತ್ತಿದ್ದಂತೆ ಯುಟರ್ನ್ ಹೊಡೆದಿದ್ದಾರೆ. ಕಾಂಗ್ರೆಸ್​(Congress) ಪಕ್ಷ ಮುಸ್ಲಿಂ ಸಮಾಜಕ್ಕೆ ಕೊಟ್ಟಿರುವ ಗೌರವ ಬಗ್ಗೆ ಮಾತಾಡಿದ್ದೇನೆ. ಯಾವುದೇ ವ್ಯಕ್ತಿ, ಪಕ್ಷದ ಶಾಸಕರ ಬಗ್ಗೆ ಅಗೌರವದಿಂದ ಮಾತನಾಡಿಲ್ಲ. ಕರ್ನಾಟಕದಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್ ಅತ್ಯುನ್ನತ ಗೌರವ ನೀಡಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪೀಕರ್ ಸ್ಥಾನ ನೀಡಿದ್ದಾರೆ. ಈ ಹಿನ್ನಲೆ ವಿಧಾನಸಭೆಯಲ್ಲಿ ನಾವೆಲ್ಲರೂ ಸಭಾಧ್ಯಕ್ಷರೇ ಎಂದು ಕರೆಯುತ್ತೇವೆ. ಈ ಮೂಲಕ ಉನ್ನತ ಹುದ್ದೆಗೆ ಏರುವ ಅವಕಾಶ ನೀಡಲಾಗಿದೆ ಎಂದು ಹೇಳಿದ್ದೇನೆ. ಹಲವು ನಾಯಕರು, ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕಾಂಗ್ರೆಸ್ ನಮ್ಮ ಸಮಾಜಕ್ಕೆ ನೀಡಿರುವ ಗೌರವ ಸ್ಮರಿಸುವುದು ತಪ್ಪೇ? ಎಂದು ಮಾಧ್ಯಮ ಪ್ರಕಟಣೆ ಮೂಲಕ ಸಚಿವ ಜಮೀರ್ ಅಹಮ್ಮದ್ ಸ್ಪಷ್ಟನೆ ನೀಡಿದ್ದಾರೆ.

ಸಚಿವ ಜಮೀರ್​ ಹೇಳಿದ್ದೇನು?

ತೆಲಂಗಾಣ ಚುನಾವಣಾ ಅಖಾಡಕ್ಕೆ ಧುಮುಕಿರುವ ಕರ್ನಾಟಕದ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಂತೆ ಇಂದು ಹೈದರಾಬಾದ್​​ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ‘ರಾಜ್ಯ ಕಾಂಗ್ರೆಸ್​​ನಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಸ್ಥಾನಮಾನಗಳನ್ನು ಒತ್ತಿ ಹೇಳಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್​ನಿಂದ ಬರೊಬ್ಬರಿ 9 ಮುಸ್ಲಿಮರು ಗೆದ್ದಿದ್ದಾರೆ. ಗೆದ್ದಿರುವ ಎಲ್ಲಾ 9 ಮುಸ್ಲಿಂ ಶಾಸಕರ ಪೈಕಿ 5 ಶಾಸಕರಿಗೆ ಅಧಿಕಾರ ನೀಡಿದ್ದು, ನನ್ನನ್ನು ಸಚಿವನಾಗಿ ಕೂಡ ಮಾಡಿದೆ. ಜೊತೆಗೆ ಅಲ್ಲದೇ ರಹೀಂ ಖಾನ್​​ ಸಹ ಮಂತ್ರಿ ಆಗಿದ್ದಾರೆ. ಸಲೀಂ ಅಹಮದ್​​​ ಅವರನ್ನು​​​ ಮುಖ್ಯ ಸಚೇತಕರಾಗಿ ಮಾಡಲಾಗಿದೆ. ನಜೀರ್ ಅಹಮದ್​​​​​​​​​ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ಇನ್ನು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಯಾವ ಮುಸ್ಲಿಂ ಸ್ಪೀಕರ್ ಆಗಿರಲಿಲ್ಲ. ಮೊದಲ ಬಾರಿಗೆ ಯು.ಟಿ ಖಾದರ್​ ಅವರನ್ನು ವಿಧಾನಸಭಾ ಸ್ಪೀಕರ್​​ ಆಗಿ ನೇಮಿಸಲಾಗಿದೆ. ಈಗ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ತೆಲಂಗಾಣ ಚುನಾವಣಾ ಪ್ರಚಾರದ ಭರದಲ್ಲಿ ಜಮೀರ್ ಅಹಮ್ಮದ್​ ಖಾನ್​ ಹೇಳಿದ್ದರು.

ಇದನ್ನೂ ಓದಿ:ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಹೇಳಿಕೆ; ಸದನ, ಸಭಾಧ್ಯಕ್ಷರ ಗೌರವ ಉಳಿಯಬೇಕಿದ್ರೆ ಕ್ಷಮೆ ಕೇಳಲಿ; ಹೆಚ್​​ಡಿಕೆ

ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಚ ಮನಸ್ಥಿತಿಯದ್ದು ಎಂದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ

ಬೆಂಗಳೂರು: ಸಚಿವ ಜಮೀರ್ ಅಹ್ಮದ್​ ಹೇಳಿರುವುದು ಮೂರ್ಖತನದ ಹೇಳಿಕೆ ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಯು.ಟಿ ಖಾದರ್​​ಗೆ ಕೈಮುಗಿಯುವ ಹಾಗೆ ಮಾಡಿದ್ದೇವೆಂದು ಹೇಳಿದ್ದಾರೆ. ಎಲ್ಲರೂ ಕೈಮುಗಿಯುವುದು ಸಭಾಧ್ಯಕ್ಷರ ಪೀಠಕ್ಕೆ,
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಬಗ್ಗೆ ನನಗೆ ಗೌರವ ಇದೆ. ಆದ್ರೆ, ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಚ ಮನಸ್ಥಿತಿಯದ್ದು, ಕಾಂಗ್ರೆಸ್​ನವರು ಕೋಮುವಾದಿಗಳು, ಇದರ ಪರಿಣಾಮ ಅನುಭವಿಸುತ್ತಾರೆ. ವೋಟ್ ಬ್ಯಾಂಕ್​ಗಾಗಿ ಕಾಂಗ್ರೆಸ್​​ನವರು ಏನು ಬೇಕಾದರೂ ಹೇಳುತ್ತಾರೆ. ಸಚಿವ ಜಮೀರ್ ಅಹ್ಮದ್ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಬೇಕು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:49 pm, Fri, 17 November 23