ಪ್ರಜಾಧ್ವನಿ ಸಮಾವೇಶ ರದ್ದು ಬೆನ್ನಲ್ಲೇ ಸಿಎಂ ಭೇಟಿಯಾದ ಕೈ ಶಾಸಕಿ, ಕುತೂಹಲ ಮೂಡಿಸಿದ ಕುಸುಮಾ ಶಿವಳ್ಳಿ ನಡೆ

|

Updated on: Mar 15, 2023 | 10:59 AM

ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಈ ಸಂದರ್ಭದಲ್ಲಿ ಕುಂದಗೋಳ ಕಾಂಗ್ರೆಸ್​ ಶಾಸಕಿ ಕುಸುಮಾ ಶಿವಳ್ಳಿ ಇಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನ ಭೇಟಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಪ್ರಜಾಧ್ವನಿ ಸಮಾವೇಶ ರದ್ದು ಬೆನ್ನಲ್ಲೇ ಸಿಎಂ ಭೇಟಿಯಾದ ಕೈ ಶಾಸಕಿ, ಕುತೂಹಲ ಮೂಡಿಸಿದ ಕುಸುಮಾ ಶಿವಳ್ಳಿ ನಡೆ
ಸಿಎಂ ಭೇಟಿಯಾದ ಕೈ ಶಾಸಕಿ ಕುಸುಮಾ ಶಿವಳ್ಳಿ
Follow us on

ಧಾರವಾಡ: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಹೇಗಾದರೂ ಮಾಡಿ ಗೆದ್ದು ರಾಜಕೀಯ ಚುಕ್ಕಾಣಿ ಹಿಡಿಯಲು ಉಭಯ ಪಕ್ಷಗಳು ತಯಾರಿ ನಡೆಸಿವೆ. ಇದರ ಬೆನ್ನಲ್ಲೇ ಇದೀಗ ಉಭಯ ಪಕ್ಷಗಳ ನಾಯಕರ ನಡೆಗಳು ಕುತೂಹಲ ಕೆರಳಿಸಿದೆ. ಅದರಂತೆ ಕುಂದಗೋಳ ಕಾಂಗ್ರೆಸ್​ ಶಾಸಕಿ ಕುಸುಮಾ ಶಿವಳ್ಳಿ(Kusuma Shivalli)ಇಂದು(ಮಾ.15) ಹುಬ್ಬಳ್ಳಿಯ ಆದರ್ಶನಗರದಲ್ಲಿರುವ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಯವರನ್ನ ಭೇಟಿ ಮಾಡಿದ್ದಾರೆ. ಹೌದು ಇಂದು ಕುಂದಗೋಳದಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದಾದ ಬೆನ್ನಲ್ಲೇ ಇದೀಗ ಕೈ ಶಾಸಕಿ ಸಿಎಂ ಭೇಟಿ ಮಾಡಿದ್ದು, ಈ ವಿಚಾರ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಜಿಲ್ಲೆಯ ಕುಂದಗೋಳದಲ್ಲಿ ಇಂದು ನಡೆಯಬೇಕಿದ್ದ ಪ್ರಜಾಧ್ವನಿ ಸಮಾವೇಶ, ಕುಂದಗೋಳ ಕಾಂಗ್ರೆಸ್‌ ಘಟಕದಲ್ಲಿ ಆದ ಭಿನ್ನಮತ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ಕುಸುಮಾಗೆ ಟಿಕೆಟ್​​ ಕೊಡದಂತೆ ಪಟ್ಟು ಹಿಡಿದಿರುವ ಟಿಕೆಟ್​ ಆಕಾಂಕ್ಷಿಗಳು, ಕುಸುಮಾ ಅವರನ್ನ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ. ಈ ಕಾರಣದಿಂದಲೇ ಇಂದು ನಡೆಯಬೇಕಿದ್ದ ಸಮಾವೇಶ ರದ್ದಾಗಿದೆ. ಇನ್ನು ಇದೇ ವೇಳೆ ಕೈ ಶಾಸಕಿ ಕುಸುಮಾವತಿ ಸಿಎಂ ಭೇಟಿಯಾಗಿದ್ದು ಕುತೂಹಲ ಕೆರಳಿಸಿದೆ. ಇದರಿಂದ ಇಂದು ಕಲಘಟಗಿಯಲ್ಲಿ ಮಾತ್ರ ಕಾಂಗ್ರೆಸ್​​ನ ಪ್ರಜಾಧ್ವನಿ ಸಮಾವೇಶ ನಡೆಯಲಿದೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Wed, 15 March 23