ಮುಂದಿನ 8-10 ದಿನಗಳಲ್ಲಿ ಶಾಸಕ ಮುನಿರತ್ನ ಸಚಿವರಾಗುತ್ತಾರೆ: ವಸತಿ ಸಚಿವ ವಿ.ಸೋಮಣ್ಣ

| Updated By: guruganesh bhat

Updated on: Jun 15, 2021 | 6:47 PM

ಸಿಎಂ ಬಿಎಸ್​ವೈ ಜತೆ ಸೇರಿ ಉತ್ತಮ ಕೆಲಸ ಮಾಡುತ್ತಿದ್ದೇನೆ. ಮುಂದಿನ ಎಂಟರಿಂದ ಹತ್ತು ದಿನಗಳಲ್ಲಿ ಮುನಿರತ್ನ ಸಚಿವರಾದ ನಂತರ ರಾಜರಾಜೇಶ್ವರಿ ದೇವರ ದರ್ಶನವನ್ನು ನಾವಿಬ್ಬರೂ ಒಟ್ಟಿಗೆ ಮಾಡುತ್ತೇವೆ ಎಂದು ಅವರು ಘೋಷಿಸಿದರು.

ಮುಂದಿನ 8-10 ದಿನಗಳಲ್ಲಿ ಶಾಸಕ ಮುನಿರತ್ನ ಸಚಿವರಾಗುತ್ತಾರೆ: ವಸತಿ ಸಚಿವ ವಿ.ಸೋಮಣ್ಣ
ವಸತಿ ಸಚಿವ ವಿ.ಸೋಮಣ್ಣ ಮತ್ತು ಶಾಸಕ ಮುನಿರತ್ನ
Follow us on

ಬೆಂಗಳೂರು: ಮುಂದಿನ 8-10 ದಿನಗಳಲ್ಲಿ ಶಾಸಕ ಮುನಿರತ್ನ ಸಚಿವರಾಗಲಿದ್ದಾರೆ ಎಂದು ಬೆಂಗಳೂರಿನಲ್ಲಿ ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ಒಳ್ಳೆಯ ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ ಸುಭಿಕ್ಷ ಸರ್ಕಾರ ಬರಬೇಕು. ಒಳ್ಳೆ ಕೆಲಸ ಆಗಬೇಕಾದರೆ ಮುನಿರತ್ನರಂತಹ ಶಾಸಕರು ಬರಬೇಕಿದೆ ಎಂದು ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದಿನ ಎಂಟರಿಂದ ಹತ್ತು ದಿನಗಳಲ್ಲಿ ಮುನಿರತ್ನ ಸಚಿವರಾದ ನಂತರ ರಾಜರಾಜೇಶ್ವರಿ ದೇವರ ದರ್ಶನವನ್ನು ನಾವಿಬ್ಬರೂ ಒಟ್ಟಿಗೆ ಮಾಡುತ್ತೇವೆ ಎಂದು ಅವರು ಘೋಷಿಸಿದರು. ಗೋವಿಂದರಾಜನಗರದ ಬಿಜಿಎಸ್​ ಕ್ರೀಡಾಂಗಣದಲ್ಲಿ ಕೊವಿಡ್ ಫ್ರಂಟ್​ಲೈನ್ ವಾರಿಯರ್ಸ್, ಆಶಾ ಕಾರ್ಯಕರ್ತೆಯರು ಸೇರಿದಂತೆ 500ಕ್ಕೂ ಹೆಚ್ಚು ಜನರಿಗೆ ಕಿಟ್ ವಿತರಿಸಿ ಅವರು ಈ ಘೋಷಣೆ ಮಾಡಿದರು.

ಇಂತಹ ಕೊರೊನಾ ಟೈಮ್​​ನಲ್ಲಿ ಜನರು ಮೈಮರೆಯಬಾರದು. ಆದರೆ ನಮ್ಮ ಜನರು ಮೂರೇ ದಿನಕ್ಕೆ ಮೈಮರೆಯುತ್ತಿದ್ದಾರೆ. ದಯವಿಟ್ಟು ಆ ರೀತಿ ಮಾಡಬೇಡಿ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು, ಲಸಿಕೆ ಹಾಕಿಸಿಕೊಳ್ಳಿ. ಕಡ್ಡಾಯ ಮಾಸ್ಕ್ ಹಾಕಿಕೊಳ್ಳಬೇಕು ಎಂದ ಅವರು , ನೋಡಿ ನಾನೇ ಒಂದೊಂದ್ಸಲ ಮಾಸ್ಕ್ ಹಾಕಿಕೊಳ್ಳಲ್ಲ ಅಂತ ಮಾಸ್ಕ್ ಧರಿಸಿಕೊಂಡು ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಸರ್ಕಾರ ಅಂದ್ರೆ ನಿಂತ ನೀರಲ್ಲಿ ಅದು ಹರಿಯುವ ನೀರಿದ್ದಂತೆ
ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಭೇಟಿ ವಿಚಾರವಾಗಿ ನಾನಂತೂ ಒಂದು ಸೆಕೆಂಡ್​ ಅದರ ಬಗ್ಗೆ ಯೋಚಿಸುವುದಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಸಹಜವಾಗಿಯೇ ಬರುತ್ತಾರಷ್ಟೇ. ಸಿಎಂ ಯಡಿಯೂರಪ್ಪ ಕೂಡ ಅವರ ಕೆಲಸ ಮಾಡುತ್ತಿದ್ದಾರೆ. ನಾವೆಂತಹ ಸ್ಥಿತಿಯಲ್ಲಿದ್ದೇವೆ ಅನ್ನೋದನ್ನ ಅರಿತುಕೊಳ್ಳಬೇಕು. ಸರ್ಕಾರ ಅಂದ್ರೆ ನಿಂತ ನೀರಲ್ಲಿ ಅದು ಹರಿಯುವ ನೀರಿದ್ದಂತೆ, ಜನಸಾಮಾನ್ಯರ ನೋವು, ಸಂಕಷ್ಟವನ್ನು ನಾವು ಆಲಿಸಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಕೊರೊನಾ ಸೋಂಕನ್ನು ಓಡಿಸಬೇಕು. ಸಿಎಂ ಬಿಎಸ್​ವೈ ಜತೆ ಸೇರಿ ಉತ್ತಮ ಕೆಲಸ ಮಾಡುತ್ತಿದ್ದೇನೆ ಎಂದು ಬೆಂಗಳೂರಿನಲ್ಲಿ ವಸತಿ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

ಇದನ್ನೂ ಓದಿ:  Organ Donation: ಸಾವಿನಲ್ಲೂ ಸಾರ್ಥಕತೆ ಮೆರೆದ ನಟ ಸಂಚಾರಿ ವಿಜಯ್​ ಅಂಗಾಂಗಗಳು ಯಾರಿಗೆಲ್ಲ ಜೀವ ತುಂಬಿದೆ ಗೊತ್ತಾ? 

Sanchari Vijay Funeral: ಹುಟ್ಟೂರು ಪಂಚನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ನಟ ಸಂಚಾರಿ ವಿಜಯ್ ಅಂತ್ಯಕ್ರಿಯೆ

(MLA Munirathna will be minister in 10 days says Karnataka Minister V Somanna)