ದೆಹಲಿಗೆ ಹೋದಾಗ ವರಿಷ್ಠರ ಭೇಟಿ ಸಹಜ, ಈ ಬಗ್ಗೆ ಏನನ್ನೂ ಹೇಳಲಾರೆ: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್

| Updated By: guruganesh bhat

Updated on: Jun 15, 2021 | 10:51 PM

ಶಾಸಕ ಅರವಿಂದ​ ಬೆಲ್ಲದ್​ ತಮ್ಮ ಕ್ಷೇತ್ರದ ವಿಚಾರವಾಗಿ ಭೇಟಿಯಾಗಿದ್ದರು. ಕ್ಷೇತ್ರದ ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಭೇಟಿಗೆ ರಾಜಕೀಯ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಟಿವಿ9ಗೆ ಗೃಹ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿಗೆ ಹೋದಾಗ ವರಿಷ್ಠರ ಭೇಟಿ ಸಹಜ, ಈ ಬಗ್ಗೆ ಏನನ್ನೂ ಹೇಳಲಾರೆ: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಅರವಿಂದ್ ಬೆಲ್ಲದ್ ಮತ್ತು ಅರುಣ್ ಸಿಂಗ್
Follow us on

ಬೆಂಗಳೂರು: ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾದ ಬಗ್ಗೆ ಏನನ್ನೂ ಹೇಳುವುದಿಲ್ಲ. ದೆಹಲಿಯಲ್ಲಿ ನನಗೆ 2 ದಿನ ವೈಯಕ್ತಿಕ ಕೆಲಸ ಇತ್ತು. ನಂತರ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದೇನೆ. ವಿದ್ಯಾಗಿರಿ ಸ್ಟೇಷನ್​ ವಿಚಾರವಾಗಿ ಗೃಹಮಂತ್ರಿ ಅವರನ್ನು ಭೇಟಿಯಾಗಿದ್ದೆ. ಗೃಹಮಂತ್ರಿ ಜತೆ ಬೇರೆ ಯಾವುದೇ ವಿಚಾರ ಚರ್ಚೆ ಮಾಡಿಲ್ಲ. ದೆಹಲಿಗೆ ಹೋದಾಗ ವರಿಷ್ಠರನ್ನು ಭೇಟಿಯಾಗುವುದು ಸಹಜ. ವರಿಷ್ಠರು ಬೆಂಗಳೂರಿಗೆ ಬಂದಾಗ ಭೇಟಿಯಾಗುವುದು ಪದ್ಧತಿ. ನಾಯಕತ್ವ ಬದಲಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸುವುದಿಲ್ಲ.ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದಾಗ ಭೇಟಿಯಾಗುತ್ತೇನೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದರು.

ಈ ಬೆಳವಣಿಗೆಯ ಹೊತ್ತಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶಾಸಕ ಅರವಿಂದ ಬೆಲ್ಲದ್​ರನ್ನು ಭೇಟಿಯಾಗಿದ್ದಾರೆ. ಈವೇಳೆ ಶಾಸಕ ಅರವಿಂದ್ ಬೆಲ್ಲದ್ ನಾಯಕತ್ವ ಬದಲಾವಣೆ ಚರ್ಚೆ ವಿಚಾರ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಇಂತಹ ಯಾವುದೇ ಕೆಲಸಕ್ಕೆ ಕೈಹಾಕದಂತೆ ಶಾಸಕ ಅರವಿಂದ್ ಬೆಲ್ಲದ್​ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಶಾಸಕ ಅರವಿಂದ​ ಬೆಲ್ಲದ್​ ತಮ್ಮ ಕ್ಷೇತ್ರದ ವಿಚಾರವಾಗಿ ಭೇಟಿಯಾಗಿದ್ದರು. ಕ್ಷೇತ್ರದ ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಭೇಟಿಗೆ ರಾಜಕೀಯ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಟಿವಿ9ಗೆ ಗೃಹ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಅರುಣ್ ಸಿಂಗ್ ಪ್ರವಾಸದ ವಿವರ
ಸಂಸದರು, ಶಾಸಕರು, ಪರಿಷತ್​ ಸದಸ್ಯರ ಜತೆ ಅರುಣ್ ಸಿಂಗ್​ ಚರ್ಚೆ ನಡೆಸಲಿದ್ದು, ಶುಕ್ರವಾರ ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿವಿಧ ಮೋರ್ಚಾಗಳ ಅಧ್ಯಕ್ಷರ ಜೊತೆ ಅರುಣ್ ಸಿಂಗ್​ ಸಭೆ ನಡೆಸಲಿದ್ದಾರೆ. ಶುಕ್ರವಾರ ಸಂಜೆ ರಾಜ್ಯ ಕೋರ್ ಕಮಿಟಿ ಸದಸ್ಯರ ಜತೆ ಚರ್ಚೆ ನಡೆಸಿ ಶುಕ್ರವಾರ ಸಂಜೆ ಬೆಂಗಳೂರಿನಿಂದ ನವದೆಹಲಿಗೆ ವಾಪಸ್ ತೆರಳಲಿದ್ದಾರೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಇದನ್ನೂ ಓದಿ: ಯಡಿಯೂರಪ್ಪರನ್ನು ಕೆಳಗಿಳಿಸಬಾರದು: ಮಠಾಧೀಶರಿಂದ ಬಿಜೆಪಿ ಹೈಕಮಾಂಡ್​ಗೆ ಒಕ್ಕೊರಲ ಒತ್ತಾಯದ ಸಂದೇಶ ರವಾನೆ

ಮಂಡ್ಯದಲ್ಲಿನ ಹಾಲಿಗೆ ನೀರು ಬೆರೆಸಿ ವಂಚನೆ ಪ್ರಕರಣ ಸಿಐಡಿ ತನಿಖೆಗೆ : ಸಿಎಂ ಯಡಿಯೂರಪ್ಪ ಘೋಷಣೆ

(BJP MLA Arvind Bellad says I did not say anything about my delhi visit about Karnataka leadership change)

Published On - 10:48 pm, Tue, 15 June 21