ಯಡಿಯೂರಪ್ಪರನ್ನು ಕೆಳಗಿಳಿಸಬಾರದು: ಮಠಾಧೀಶರಿಂದ ಬಿಜೆಪಿ ಹೈಕಮಾಂಡ್​ಗೆ ಒಕ್ಕೊರಲ ಒತ್ತಾಯದ ಸಂದೇಶ ರವಾನೆ

BS Yediyurappa: ಸಿಎಂ ಸ್ಥಾನದಿಂದ BSY ಕೆಳಗಿಳಿಸಲು ಹುನ್ನಾರ ನಡೆಯುತ್ತಿದೆ. ಸಿಎಂ ಯಡಿಯೂರಪ್ಪಗೆ ವಯಸ್ಸಾಗಿದೆ, ನಡೆಯಲು ಆಗಲ್ಲ. ಕಿವಿ ಕೇಳಿಸುವುದಿಲ್ಲ, ಉಸಿರಾಡಲು ಆಗಲ್ಲವೆಂದು ಅಪಪ್ರಚಾರ ನಡೆದಿದೆ. ಕರುಣಾನಿಧಿ ವ್ಹೀಲ್​ಚೇರ್​ನಲ್ಲಿ ಕುಳಿತು ಆಡಳಿತ ಮಾಡಿಲ್ವೇ? ನಮ್ಮ ಯಡಿಯೂರಪ್ಪಗೆ ಅಷ್ಟೊಂದು ವಯಸ್ಸಾಗಿದೆಯೇ? BSY ಅಧಿಕಾರ ಪೂರ್ಣಗೊಳಿಸುವವರೆಗೆ ಅಡ್ಡಿಪಡಿಸಬಾರದು - ವೀರಶೈವ ಲಿಂಗಾಯತ ಮಠಾಧೀಶರು

ಯಡಿಯೂರಪ್ಪರನ್ನು ಕೆಳಗಿಳಿಸಬಾರದು: ಮಠಾಧೀಶರಿಂದ ಬಿಜೆಪಿ ಹೈಕಮಾಂಡ್​ಗೆ ಒಕ್ಕೊರಲ ಒತ್ತಾಯದ ಸಂದೇಶ ರವಾನೆ
ಕರುಣಾನಿಧಿ ವ್ಹೀಲ್​ಚೇರ್​ನಲ್ಲಿ ಕುಳಿತು ಆಡಳಿತ ಮಾಡಿಲ್ವೇ? ವೀರಶೈವ ಮಠಾಧೀಶರಿಂದ ಬಿಜೆಪಿ ಹೈಕಮಾಂಡ್​ಗೆ ಒಕ್ಕೊರಲಿನ ಒತ್ತಾಯದ ಸಂದೇಶ ರವಾನೆ

ತುಮಕೂರು: ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್​ ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದು ಎಂದು ವೀರಶೈವ ಲಿಂಗಾಯತ ಮಠಾಧೀಶರು ಬಿಜೆಪಿ ಹೈಕಮಾಂಡ್​ಗೆ ಒಕ್ಕೊರಲಿನ ಒತ್ತಾಯದ ಸಂದೇಶ ರವಾನಿಸಿದ್ದಾರೆ.  ತುಮಕೂರು ಜಿಲ್ಲೆ ತಿಪಟೂರಿನ ಷಡಕ್ಷರಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ 10ಕ್ಕೂ ಹೆಚ್ಚು ಮಠಾಧೀಶರು ಸಿಎಂ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ವ್ಯಕ್ತಿಗಳು ಸಿಎಂ ಸ್ಥಾನಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಂದ ಮಾನಸಿಕವಾಗಿ ನೋವುಂಟಾಗುತ್ತಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿಎಸ್​ವೈ ಅವರು ಕಾರಣ ಎಂದು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಷಡಕ್ಷರಿ ಮಠದ ರುದ್ರಮುನಿ ಸ್ವಾಮಿಜಿ, ಜಂಗಮ ಮಠದ ಸಿದ್ದಲಿಂಗ ಸ್ವಾಮಿಜಿ, ಬೆಳ್ಳಾವಿ ಕಾರದ ಮಠದ ವೀರಬಸವ ಸ್ವಾಮಿಜಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸ್ವಾಮಿಜಿಗಳು ಯಡಿಯೂರಪ್ಪ ಪರ  ಬಿಜೆಪಿ ಹೈಕಮಾಂಡ್​ಗೆ ಒಕ್ಕೊರಲಿನ ಸಂದೇಶ ರವಾನಿಸಿದ್ದಾರೆ.

ಕರುಣಾನಿಧಿ ವ್ಹೀಲ್​ಚೇರ್​ನಲ್ಲಿ ಕುಳಿತು ಆಡಳಿತ ಮಾಡಿಲ್ವೇ?
ಸಿಎಂ ಸ್ಥಾನದಿಂದ BSY ಕೆಳಗಿಳಿಸಲು ಹುನ್ನಾರ ನಡೆಯುತ್ತಿದೆ. ಸಿಎಂ ಯಡಿಯೂರಪ್ಪಗೆ ವಯಸ್ಸಾಗಿದೆ, ನಡೆಯಲು ಆಗಲ್ಲ. ಕಿವಿ ಕೇಳಿಸುವುದಿಲ್ಲ, ಉಸಿರಾಡಲು ಆಗಲ್ಲವೆಂದು ಅಪಪ್ರಚಾರ ನಡೆದಿದೆ. ಕರುಣಾನಿಧಿ ವ್ಹೀಲ್​ಚೇರ್​ನಲ್ಲಿ ಕುಳಿತು ಆಡಳಿತ ಮಾಡಿಲ್ವೇ? ನಮ್ಮ ಯಡಿಯೂರಪ್ಪಗೆ ಅಷ್ಟೊಂದು ವಯಸ್ಸಾಗಿದೆಯೇ? BSY ಅಧಿಕಾರ ಪೂರ್ಣಗೊಳಿಸುವವರೆಗೆ ಅಡ್ಡಿಪಡಿಸಬಾರದು. ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು. ಅಂಥವರನ್ನು ತುಳಿಯಲು, ಮೂಲೆಗುಂಪು ಮಾಡಲು ಪಿತೂರಿ ನಡೆದಿದೆ ಎಂದು ಮಠಾಧೀಶರು ಅಸಮಾಧಾನ ಸೂಚಿಸಿದ್ದಾರೆ.

veerashaiva lingayath pontiffs send strong signals in favour of karnataka cmbs yediyurappa 2

ತುಮಕೂರು ಜಿಲ್ಲೆ ತಿಪಟೂರಿನ ಷಡಕ್ಷರಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ 10ಕ್ಕೂ ಹೆಚ್ಚು ಮಠಾಧೀಶರು

ಸಮುದಾಯದ ನಾಯಕನಿಗೆ ಅನ್ಯಾಯವಾದರೆ ಹೋರಾಟದ ಎಚ್ಚರಿಕೆ
ಸಿಎಂ ಯಡಿಯೂರಪ್ಪಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯ ನಾಯಕನಿಗೆ ಅನ್ಯಾಯವಾಗುತ್ತಿದೆ. ಸಮುದಾಯದ ನಾಯಕನಿಗೆ ಅನ್ಯಾಯವಾದರೆ  ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ರವಾನಿಸಿದರು.

ಯಡಿಯೂರಪ್ಪ ಮುಖ ನೋಡಿ ಬಿಜೆಪಿಗೆ ಮತ ಹಾಕಿದ್ದೇವೆ. ವೀರಶೈವ ಲಿಂಗಾಯತ ಸಮುದಾಯದಿಂದ ಬಿಜೆಪಿಗೆ ಮತ ಬಿದ್ದಿದೆ. ಆದ್ದರಿಂದಲೇ ರಾಜ್ಯದಲ್ಲಿ ಬಿಜೆಪಿಗೆ 100ಕ್ಕೂ ಹೆಚ್ಚು ಸ್ಥಾನ ಬಂದಿದೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು ಎಂದು ಯಡಿಯೂರಪ್ಪರನ್ನು ಕೆಳಗಿಳಿಸದಂತೆ ವೀರಶೈವ ಲಿಂಗಾಯತ ಮಠಾಧೀಶರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

(veerashaiva lingayat pontiffs send strong signals in favour of karnataka cmbs yediyurappa)

ಎರಡು ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ, ನನ್ನ ಜವಾಬ್ದಾರಿ ಈಗ ಜಾಸ್ತಿ ಆಗಿದೆ- ಹಾಸನದಲ್ಲಿ ಬಿಎಸ್​ ಯಡಿಯೂರಪ್ಪ ಘೋಷಣೆ

Click on your DTH Provider to Add TV9 Kannada