ಹುಬ್ಬಳ್ಳಿಯ ಕಿಮ್ಸ್ನಲ್ಲಿ ಕೊರೊನಾ ಸೋಂಕಿತ ಆತ್ಮಹತ್ಯೆ
ಕಿಮ್ಸ್ ಕೊವಿಡ್ ವಾಡ್೯ ನಂ.303ರ ಬಾತ್ರೂಮ್ನಲ್ಲಿ ಸೋಂಕಿತ ನೇಣಿಗೆ ಶರಣಾಗಿದ್ದಾರೆ. ಸೋಂಕಿತ ವ್ಯಕ್ತಿ ಕಳೆದ ಕೆಲ ದಿನಗಳಿಂದ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಹುಬ್ಬಳ್ಳಿ: ಕೊರೊನಾದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ರಾಜ್ಯದಲ್ಲಿ ಸಾವು, ನೋವು ಹೆಚ್ಚಾಗುತ್ತಿದೆ. ಕೊರೊನಾ ಸೋಂಕು ತಗುಲುತ್ತಿದ್ದಂತೆ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹುಬ್ಬಳ್ಳಿಯ ಕಿಮ್ಸ್ನಲ್ಲಿ ಕೊರೊನಾ ಸೋಂಕಿತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿಮ್ಸ್ ಕೊವಿಡ್ ವಾಡ್೯ ನಂ.303ರ ಬಾತ್ರೂಮ್ನಲ್ಲಿ ಸೋಂಕಿತ ನೇಣಿಗೆ ಶರಣಾಗಿದ್ದಾರೆ. ಸೋಂಕಿತ ವ್ಯಕ್ತಿ ಕಳೆದ ಕೆಲ ದಿನಗಳಿಂದ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ವಿಷ ಸೇವಿಸಿ ತಾಯಿ, ಮಗಳು ಆತ್ಮಹತ್ಯೆ ವಿಷ ಸೇವಿಸಿ ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರದ ಅನಂತಪುರಂ ಜಿಲ್ಲೆಯ ತಾಡಪತ್ರಿಯಲ್ಲಿ ನಡೆದಿದೆ. ತಾಯಿ ರಮಣಮ್ಮ, ಮಗಳು ಅಪರ್ಣ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳು. ಕಳೆದ ಕೆಲ ದಿನಗಳ ಹಿಂದೆ ಕುಟುಂಬಕ್ಕೆ ಆಧಾರವಾಗಿದ್ದ ರಮಣಮ್ಮನ ಪತಿ ರಾಮಕೃಷ್ಣರೆಡ್ಡಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ರಾಮಕೃಷ್ಣ ರೆಡ್ಡಿ ಸಾವಿನ ನಂತರ ರಮಣಮ್ಮ, ಅಪರ್ಣ ಮಾನಸಿಕವಾಗಿ ನೊಂದಿದ್ದರು. ರಾಮಕೃಷ್ಣರೆಡ್ಡಿ ಸಾವನ್ನು ಸಹಿಸದ ಪತ್ನಿ ಮತ್ತು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಣ ದುರ್ಬಳಕೆ ಆರೋಪ; ನೌಕರ ನೇಣಿಗೆ ಶರಣು ದಾವಣಗೆರೆ ತಾಲೂಕಿನ ಶ್ಯಾಗಳೆ ಗ್ರಾಮದಲ್ಲಿ 56 ವರ್ಷದ ನೌಕರ ಬಿ.ಎಸ್.ಚಂದ್ರಪ್ಪ ನೇಣಿಗೆ ಶರಣಾಗಿದ್ದಾರೆ. ಚಂದ್ರಪ್ಪ ಇದೇ ಗ್ರಾಮದ ಕೃಷಿ ಸಹಕಾರ ಪತ್ತಿನ ಸಂಘದ ಕಾರ್ಯದರ್ಶಿ ಆಗಿದ್ದರು. ಒಂದು ವರ್ಷದ ಹಿಂದೆ ಅಮಾನತು ಮಾಡಿದ್ದರು. ಅಲ್ಲಿಂದ ಈವರೆಗೆ ಸಂಬಳನೀಡಿಲ್ಲ. ಸಂಬಳ ಬಿಡುಗಡೆ ಮಾಡಲು ಒಂದು ಲಕ್ಷ ರೂಪಾಯಿ ಲಂಚ ಕೇಳಿದ್ದರು. ಇದರಲ್ಲಿ 22 ಸಾವಿರ ರೂಪಾಯಿ ಕೊಟ್ಟಿರುವೆ. ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಗುಮಾಸ್ತ ಜಗದೀಶ್ ಹಾಗೂ ಅಲ್ಲಿ ಡಿ ದರ್ಜೆ ನೌಕರರೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು, ಚಂದ್ರಪ್ಪ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಸದ್ಯ ಈ ಪ್ರಕರಣ ಹದಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ
ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದ್ದಕ್ಕೆ ಮನನೊಂದ ಶಿರಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಅನೈತಿಕ ಸಂಬಂಧ ಶಂಕೆ; ಮಹಿಳೆ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ತಂದೆ, ಅಪ್ರಾಪ್ತ ಮಗ ಅರೆಸ್ಟ್
(Corona Infected commits suicide in KIMS hospital at hubli)