AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಣ್ಣೆ ಹಾಕದೆ, ಬತ್ತಿ ಬದಲಾಯಿಸದೆ ಸತತ 75 ದಿನಗಳಿಂದ ಉರಿಯುತ್ತಿರುವ ದೀಪ; ದೇವರ ಪವಾಡವೆಂದು ಮನೆಗೆ ಆಗಮಿಸುತ್ತಿರುವ ಬಾಗಲಕೋಟೆ ಜನರು

ಏಪ್ರಿಲ್ 1 ರಂದು ಮನೆಯ ಜಗುಲಿಯ ಮೇಲೆ ಶ್ರೀಶೈಲ ಮಲ್ಲಯ್ಯನ ಮುಂದೆ ಬತ್ತಿ ಅಳವಡಿಸಿ ಎಣ್ಣೆ ಹಾಕಿ ದೀಪ ಹಚ್ಚಲಾಗಿದೆ. ಅಂದು ದೀಪ ಹಚ್ಚಿ ಪೂಜೆ ಮಾಡಿದ ಬೌರವ್ವ ಮನೆಯ ಬಾಗಿಲು ಹಾಕಿಕೊಂಡು ತಮ್ಮ ಮಗಳ ಮನೆಗೆ ಹೋಗಿದ್ದರು. ಮರಳಿ 27 ದಿನಗಳ ಕಾಲ ಬಿಟ್ಟು ಮನೆಗೆ ಬಂದಾಗ ಅಚ್ಚರಿ ಕಾದಿತ್ತು.

ಎಣ್ಣೆ ಹಾಕದೆ, ಬತ್ತಿ ಬದಲಾಯಿಸದೆ ಸತತ 75 ದಿನಗಳಿಂದ ಉರಿಯುತ್ತಿರುವ ದೀಪ; ದೇವರ ಪವಾಡವೆಂದು ಮನೆಗೆ ಆಗಮಿಸುತ್ತಿರುವ ಬಾಗಲಕೋಟೆ ಜನರು
ಆರದ ದೀಪ
TV9 Web
| Updated By: sandhya thejappa|

Updated on:Jun 14, 2021 | 12:55 PM

Share

ಬಾಗಲಕೋಟೆ: ಒಂದು ಸಾರಿ ದೀಪ ಹಚ್ಚಿದರೆ ಅಬ್ಬಬ್ಬಾ ಅಂದರೆ ಒಂದು ತಾಸು ಉರಿಯಬಹುದು. ನಿರಂತರ ಎಣ್ಣೆ ಹಾಕುತ್ತಿದ್ದರೆ ಇನ್ನು ಒಂದು ತಾಸು ಹೆಚ್ಚಿಗೆ ಉರಿಯಬಹುದು. ಆದರೆ ಬತ್ತಿಯನ್ನು ಮಾತ್ರ ಬದಲಿಸಲೇಬೇಕು. ಆದರೆ ಜಿಲ್ಲೆಯ ಗ್ರಾಮವೊಂದರಲ್ಲಿ ಒಂದು ಸಾರಿ ಬತ್ತಿ ಮಾಡಿ ಎಣ್ಣೆ ಹಾಕಿ ಹಚ್ಚಿದ ದೀಪ 75 ದಿನಗಳಿಂದ ಆರದೆ ಉರಿಯುತ್ತಿದೆ. ಗ್ರಾಮದಲ್ಲಿ ನಡೆದ ಈ ವಿಸ್ಮಯ ಎಲ್ಲರ ಕುತೂಹಲ ಹೆಚ್ಚಿಸಿದೆ. ಸಹಜವಾಗಿ ಚಿಕ್ಕದಾದ ದೀಪ ಒಂದು ಅಥವಾ ಎರಡು ತಾಸು ಉರಿಯಬಹುದು. ಬತ್ತಿ ಬದಲಿಸುತ್ತಾ ಎಣ್ಣೆ ಹಾಕುತ್ತಾ ಹೊರಟರೆ ಮಾತ್ರ ದೀಪ ನಿರಂತರ ಉರಿಯೋದಕ್ಕೆ ಸಾಧ್ಯ. ಆದರೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ಬೌರವ್ವ ಕತ್ತಿ ಎಂಬುವರ ಮನೆಯ ಜಗುಲಿ ಮೇಲೆ ಸತತ 75 ದಿನಗಳಿಂದ ಈ ದೀಪ ಆರದೆ ಉರಿಯುತ್ತಿದೆ.

ಏಪ್ರಿಲ್ 1 ರಂದು ಮನೆಯ ಜಗುಲಿಯ ಮೇಲೆ ಶ್ರೀಶೈಲ ಮಲ್ಲಯ್ಯನ ಮುಂದೆ ಬತ್ತಿ ಅಳವಡಿಸಿ ಎಣ್ಣೆ ಹಾಕಿ ದೀಪ ಹಚ್ಚಲಾಗಿದೆ. ಅಂದು ದೀಪ ಹಚ್ಚಿ ಪೂಜೆ ಮಾಡಿದ ಬೌರವ್ವ ಮನೆಯ ಬಾಗಿಲು ಹಾಕಿಕೊಂಡು ತಮ್ಮ ಮಗಳ ಮನೆಗೆ ಹೋಗಿದ್ದರು. ಮರಳಿ 27 ದಿನಗಳ ಕಾಲ ಬಿಟ್ಟು ಮನೆಗೆ ಬಂದಾಗ ಅಚ್ಚರಿ ಕಾದಿತ್ತು. ಅಂದು ಬೌರವ್ವ ಹಚ್ಚಿದ ದೀಪ ನಿರಂತರವಾಗಿ ಉರಿಯುತ್ತಲೇ ಇತ್ತು. ತಕ್ಷಣ ಸಂಬಂಧಿಕರು ಹಾಗೂ ನೆರೆಹೊರೆಯವರಿಗೆ ಬೌರವ್ವ ಹೇಳಿದಾಗ ಇಡೀ ಗ್ರಾಮಸ್ಥರು ಬಂದು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಎಣ್ಣೆ ಹಾಕಿಲ್ಲ, ಆದರೂ ದೀಪ ಉರಿಯುತ್ತಿರೋದು ಸ್ವತಃ ಬೌರವ್ವ ಅವರಿಗೆ ಅಚ್ಚರಿ ತಂದಿದೆ.

ಬೌರವ್ವ ಅವರ ಮನೆಗೆ ಬಂದು ಮಲ್ಲಯ್ಯನ ಮುಂದೆ ನಿರಂತರವಾಗಿ ಉರಿಯುತ್ತಿರುವ ದೀಪ ಹಾಗೂ ಮಲ್ಲಯ್ಯನ ದರ್ಶನ ಪಡೆಯುತ್ತಿದ್ದಾರೆ. ಭಕ್ತಿಯಿಂದ ದೀಪದ ದರ್ಶನ ಪಡೆದು ಕೈಮುಗಿದು ಮಲ್ಲಯ್ಯನ ದರ್ಶನ ಪಡೆಯುತ್ತಿದ್ದಾರೆ. ಮನೆಯಲ್ಲಿ ನಿರಂತರ ಪೂಜೆ ನಡೆಯುತ್ತಿದೆ. ಕೆಲವರು ಭಕ್ತಿಪೂರ್ವಕವಾಗಿ ಇದು ಮಲ್ಲಯ್ಯನ ಪವಾಡ ಅಂತ ಭಕ್ತಿಯಿಂದ ಕೈ ಮುಗಿದು ನಿಂತರೆ, ಕೆಲವರು ಅಚ್ಚರಿಯಿಂದ ದೀಪ ಹೇಗೆ ಉರಿಯುತ್ತಿರಬಹುದು ಅಂತ ನೋಡೋದಕ್ಕೆ ಮುಗಿಬಿದ್ದಿದ್ದಾರೆ.

ಬೌರವ್ವ ಅವರ ಪತಿ ತೀರಿಕೊಂಡಿದ್ದು ಒಬ್ಬ ಮಗ, ಮಗಳು ಮಾತ್ರ ಇದ್ದಾರೆ. ಮಗ ಬೇರೆ ಕಡೆ ಇದ್ದು ಮಗಳು ಗಂಡನ ಮನೆಯಲ್ಲಿರುತ್ತಾಳೆ. ಮನೆಯಲ್ಲಿ ಒಬ್ಬಳೇ ಇರುವ ಬೌರವ್ವ ಮಗಳ ಮನೆಗೆ ಹೋಗಬೇಕಾದರೆ ಬೀಗ ಹಾಕಿ ಹೋಗಿದ್ದಳು. ಇನ್ನು ಮನೆಗೆ ಯಾರು ಕೂಡ ಬಂದಿಲ್ಲ. ಬತ್ತಿ ಬದಲಿಸಿ, ಎಣ್ಣೆ ಹಾಕಿಲ್ಲ. ಆದರೂ ನಿರಂತರವಾಗಿ ಒಂದೇ ಸಮನೆ ದೀಪ ಉರಿಯುತ್ತಿದೆ. ಎಣ್ಣೆ ಕೂಡ ಮೊದಲು ಹಾಕಿದಷ್ಟೇ ಇದೆ. ದೀಪದ ಒಳಗೆ ಬತ್ತಿ ಸುಟ್ಟ ಕಲೆ ಕಾಣುತ್ತಿದೆ. ಆದರೆ ಇದನ್ನು ಬಿಟ್ಟು ನಿರಂತರವಾಗಿ ದೀಪ ಉರಿಯುತ್ತಿದೆ ಇದು ದೇವರ ಪವಾಡ ಅಂತ ಅಲ್ಲಿನ ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ

ಕೊಪ್ಪಳದಲ್ಲಿ ಎಂಟು ಕಾಲಿರುವ ಅಪರೂಪದ ಕುರಿ ಜನನ

Viral Video: ಕಿಕ್ಕಿರಿದು ನಿಂತ ಮೆಟ್ರೋ ರೈಲಿನಲ್ಲಿ ಸೀಟು ಪಡೆಯಲು ಯುವಕನ ಸಕತ್​ ಪ್ಲಾನ್​! ವಿಡಿಯೋ ವೈರಲ್​

(Bagalkot People are surprise as a lamp lightened for 73 consecutive day without Oil and says miracle of God)

Published On - 12:54 pm, Mon, 14 June 21

ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಅವನ ತಂದೆ-ತಾಯಿ ತಮಿಳುನಾಡಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದರು: ಗ್ರಾಮಸ್ಥರು
ಅವನ ತಂದೆ-ತಾಯಿ ತಮಿಳುನಾಡಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದರು: ಗ್ರಾಮಸ್ಥರು
ಮಾಸ್ಕ್​​​ಮ್ಯಾನ್​​ ಚಿನ್ನಯ್ಯ ಎಸ್​ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ
ಮಾಸ್ಕ್​​​ಮ್ಯಾನ್​​ ಚಿನ್ನಯ್ಯ ಎಸ್​ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ