ಕೊಪ್ಪಳದಲ್ಲಿ ಎಂಟು ಕಾಲಿರುವ ಅಪರೂಪದ ಕುರಿ ಜನನ

ಮಲ್ಲಪ್ಪ ಕಳೆದ ಹತ್ತು ವರ್ಷಗಳಿಂದ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಸುಮಾರು 40 ಕುರಿಗಳನ್ನು ಸಾಕುತ್ತಿದ್ದಾರೆ. ಇಂದು (ಜೂನ್ 14) ಬೆಳಗಿನ ಜಾವ ಅವರ ಒಂದು ಕುರಿ ಎಂಟು ಕಾಲಿನ ಮರಿಗೆ ಜನ್ಮ ನೀಡಿದೆ. ಈ ಹಿಂದೆ ಇದೇ ಕುರಿ ಸಾಮಾನ್ಯ ಕುರಿಗಳಿಗೆ ಅಂದ್ರೆ ಒಂದು ದೇಹ, ಒಂದು ಮುಖ, ನಾಲ್ಕು ಕಾಲಿನ ಎರಡು ಕುರಿಮರಿಗಳಿಗೆ ಜನ್ಮ ನೀಡಿತ್ತು.

ಕೊಪ್ಪಳದಲ್ಲಿ ಎಂಟು ಕಾಲಿರುವ ಅಪರೂಪದ ಕುರಿ ಜನನ
ಎಂಟು ಕಾಲಿರುವ ಅಪರೂಪದ ಕುರಿಮರಿ
Follow us
TV9 Web
| Updated By: sandhya thejappa

Updated on:Jun 14, 2021 | 10:13 AM

ಕೊಪ್ಪಳ: ಸಾಮಾನ್ಯವಾಗಿ ಕುರಿ ಅಂದ್ರೆ ಒಂದು ದೇಹ, ನಾಲ್ಕು ಕಾಲು ಇರೋದನ್ನ ನೋಡಿದ್ದೇವೆ. ಆದರೆ ಜಿಲ್ಲೆಯಲ್ಲಿ ಎಂಟು ಕಾಲು ಇರುವ ಕುರಿಯೊಂದು ಜನನವಾಗಿದೆ. ಕುರಿಗೆ ಒಂದು ಮುಖ, ಎರಡು ದೇಹ, ಎಂಟು ಕಾಲ ಇರುವ ಅಪರೂಪದ ಕುರಿ ಹುಟ್ಟಿದೆ. ಇದೆಲ್ಲ ದೇವರ ಸೃಷ್ಟಿ, ವಿಸ್ಮಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲೆ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದಲ್ಲಿ ಎಂಟು ಕಾಲಿನ ಕುರಿ ಮರಿ ಜನನವಾಗಿದೆ. ಹಾಬಲಕಟ್ಟಿ ಗ್ರಾಮದ ಮಲ್ಲಪ್ಪ ರಾಜೂರು ಮೂಲತಃ ಕುರಿಗಾಹಿ. ಅವರು ಸಾಕಿದ ಕುರಿ ಇಂದು ಎಂಟು ಕಾಲಿನ ವಿಚಿತ್ರ ಕುರಿಮರಿಗೆ ಜನ್ಮ ನೀಡಿದೆ.

ಮಲ್ಲಪ್ಪ ಕಳೆದ ಹತ್ತು ವರ್ಷಗಳಿಂದ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಸುಮಾರು 40 ಕುರಿಗಳನ್ನು ಸಾಕುತ್ತಿದ್ದಾರೆ. ಇಂದು (ಜೂನ್ 14) ಬೆಳಗಿನ ಜಾವ ಅವರ ಒಂದು ಕುರಿ ಎಂಟು ಕಾಲಿನ ಮರಿಗೆ ಜನ್ಮ ನೀಡಿದೆ. ಈ ಹಿಂದೆ ಇದೇ ಕುರಿ ಸಾಮಾನ್ಯ ಕುರಿಗಳಿಗೆ ಅಂದ್ರೆ ಒಂದು ದೇಹ, ಒಂದು ಮುಖ, ನಾಲ್ಕು ಕಾಲಿನ ಎರಡು ಕುರಿಮರಿಗಳಿಗೆ ಜನ್ಮ ನೀಡಿತ್ತು. ಆದರೆ ಈ ಬಾರಿ ಎಂಟು ಕಾಲಿನ ಕುರಿಮರಿಗೆ ಜನ್ಮ ನೀಡಿದೆ. ಕಳೆದ ಹತ್ತು ವರ್ಷಗಳಲ್ಲಿ ಇಂತಹ ಕುರಿಮರಿ ಜನನವಾಗಿರುವುದು, ಅಥವಾ ಸುತ್ತಮುತ್ತ ಈ ತರಹದ ಕುರಿಮರಿಯನ್ನ ಅವರು ನೋಡೆ ಇಲ್ಲ. ಇಂದು ಬೆಳಗಿನ ಜಾವ ಎಂಟು ಕಾಲಿನ ಕುರಿಮರಿ ಜನ್ಮತಾಳಿದ್ದು, ಜನಿಸಿದ ಒಂದು ಗಂಟೆ ಕುರಿಮರಿ ಚೆನ್ನಾಗಿತ್ತು. ಆದರೆ ವಿಚಿತ್ರ ಆಕಾರ ಹೊಂದಿದ ಕುರಿ ಬದುಕಿದ್ದು ಕೇವಲ ಒಂದು ಗಂಟೆ. ಇನ್ಮು ಜನ ಅದನ್ನ ನೋಡಲು ಬರುವ ಕಾರಣ ಕುರಿಯನ್ನ ಹಾಗೆ ಇಟ್ಟಿದ್ದಾರೆ.

ಹಾಬಲಕಟ್ಟಿ ಗ್ರಾಮದಲ್ಲಿ ಈ ಹಿಂದೆ ಅಪರೂಪದ ಕುರಿ ಜನನ ನೋಡೆ ಇಲ್ಲ. ಅಲ್ಲದೆ ಬೇರೆ ಕುರಿಗಾಹಿಗಳನ್ನ ವಿಚಾರಿಸಿದಾಗ ಯಾವತ್ತೂ ಇಂತಹ ಮರಿ ಹುಟ್ಟಿಲ್ಲ ಎನ್ನುತ್ತಿದ್ದಾರಂತೆ. ಎಂಟು ಕಾಲಿನ ಕುರಿ ಮರಿ ಜನ್ಮ ತಾಳಿದ ಒಂದು ಗಂಟೆಯಲ್ಲಿ ಮೃತವಾಗಿದ್ದು, ಜನರು ನೋಡಲು ಬರುತ್ತಿರುವ ಕಾರಣ ಇನ್ನು ಮಲ್ಲಪ್ಪ ರಾಜೂರ ಕುರಿ ದಡ್ಡೆಯಲ್ಲಿ ಇಟ್ಟುಕೊಂಡಿದ್ದಾರೆ.

ನಾವು ಕುರಿ ಸಾಕಾಣಿಕೆ ಮಾಡುತ್ತ 10 ವರ್ಷ ಆಯ್ತು. ಇಂತಹ ಕುರಿ ನೋಡಿಲ್ಲ. ಎಂಟು ಕಾಲಿನ ಕುರಿ ಮರಿ ನೋಡಿರುವುದು ಇದೆ ಮೊದಲು. ಕುರಿ ಜನಿಸಿದ ಒಂದು ಗಂಟೆ ಬಳಿಕ ಸಾವನ್ನಪ್ಪಿದೆ. ಜಮೀನಿನಲ್ಲಿ ಮಣ್ಣು ಮಾಡುತ್ತೇವೆ ಎಂದು ಕುರಿಗಾಹಿ ಮಲ್ಲಪ್ಪ ರಾಜೂರ್ ತಿಳಿಸಿದರು.

ಇದು ದೇವರ ಸೃಷ್ಟಿ ಏನಲ್ಲ. ಆದರೆ ಕುರಿಗಳ ಸಂತಾನೋತ್ಪತ್ತಿ ಸಮಯದಲ್ಲಿ ವ್ಯತ್ಯಾಸವಾಗಿ ಈ ತರಹದ ಕುರಿಗಳು ಜನನವಾಗಿರತ್ತದೆ. ಈ ರೀತಿ ಅಪರೂಪದ ಕುರಿಗಳು ಬದುಕುವುದು ತುಂಬಾ ಅಪರೂಪ ಅಂತ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಡಾ.ಎಚ್.ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ

ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್​ ದಾಳಿ ಬೆದರಿಕೆ; ಹಣ ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಪ್ರಿಯಕರನಿಂದಲೇ ಬ್ಲ್ಯಾಕ್​ಮೇಲ್

ಬಾಣಸವಾಡಿಯಲ್ಲಿ ಕೊರೊನಾ ಸೋಂಕಿತ ವೃದ್ಧ ಮಹಿಳೆಯ ಚಿನ್ನದ ಸರ, ಮೊಬೈಲ್​ ಕಳವು; ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು

(An eight legged sheep was born in koppal)

Published On - 10:11 am, Mon, 14 June 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ