ಮುಂಗಾರು ಜೋರು, ಅನ್​ಲಾಕ್ ಜಾರಿ, ಗರಿಗೆದರಿದ ರೈತ ಚಟುವಟಿಕೆ, ಬಿತ್ತನೆಬೀಜ ಖರೀದಿಗೆ ಕಿಕ್ಕಿರಿದು ಜಮಾಯ್ಸಿದ ರೈತರು!

Bellary vijayanagara Chilli Farmers: ಮೆಣಸಿನಕಾಯಿ ಬೀಜ ಖರೀದಿಗೆ ಆಗಮಿಸಿದ್ದ ಬಳ್ಳಾರಿ ತಾಲೂಕಿನ ನಾನಾ ಗ್ರಾಮಗಳ ರೈತರು ಸಾಲುಸಾಲಾಗಿ ನಿಂತು ಕೊಂಡಿದ್ದಲ್ಲದೇ, ಗುಂಪು ಗುಂಪಾಗಿ ಸೇರಿ ಕೊಂಡಿದ್ದರು‌. ಇದರಿಂದ ಸಾಮಾಜಿಕ ಅಂತರವೇ ಮಾಯವಾಗಿತ್ತು. ರೈತರು ಆಧಾರ್ ಕಾರ್ಡ್ ಸಮೇತರಾಗಿ ರೈತ ಸಂಪರ್ಕ ಕೇಂದ್ರ ಎದುರು ಕ್ಯೂ ನಿಂತಿರೋದು ಕಂಡುಬಂತು.

ಮುಂಗಾರು ಜೋರು, ಅನ್​ಲಾಕ್ ಜಾರಿ, ಗರಿಗೆದರಿದ ರೈತ ಚಟುವಟಿಕೆ, ಬಿತ್ತನೆಬೀಜ ಖರೀದಿಗೆ ಕಿಕ್ಕಿರಿದು ಜಮಾಯ್ಸಿದ ರೈತರು!
ಮುಂಗಾರು ಜೋರು, ಅನ್​ಲಾಕ್ ಜಾರಿ, ಗರಿಗೆದರಿದ ರೈತ ಚಟುವಟಿಕೆ, ಬಿತ್ತನೆಬೀಜ ಖರೀದಿಗಾಗಿ ಕಿಕ್ಕಿರಿದು ಜಮಾಯಿಸಿದ ರೈತರು!

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ ಶುರು ಆಗಿರೋದರಿಂದಲೇ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯ ಚುರುಕಾಗಿದೆ‌. ನಾನಾ ತಳಿಯ ಬಿತ್ತನೆ ಬೀಜ ಖರೀದಿಗಾಗಿ ಉಭಯ ಜಿಲ್ಲೆಗಳ (Bellary Vijayanagara Chilli Farmers) ರೈತ ಸಂಪರ್ಕ ಕೇಂದ್ರಗಳ ಎದುರು ಜನ ಜಮಾಯಿಸಿದ್ದಾರೆ. ಮೆಣಸಿನಕಾಯಿ ಬಿತ್ತನೆಯ ಬೀಜ (Chilli seeds) ಖರೀದಿಸಲು ಹೆಂಗಸರು, ಮಕ್ಕಳು ಅನ್ನದೇ ರೈತಾಪಿ ಜನ ಮುಗಿಬಿದ್ದಿದ್ದಾರೆ.

ಇಂದಿನಿಂದ ಅರ್ಧ ಅನ್​ಲಾಕ್ ಜಾರಿಗೊಂಡಿದ್ದರಿಂದ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರೈತ ಸಂಪರ್ಕ ಕೇಂದ್ರಗಳು ಆರಂಭವಾಗುವ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದ (Raitha Samparka Kendra) ಎದುರು ಬೆಳ್ಳಂಬೆಳಿಗ್ಗೆಯಿಂದಲೇ ನೂರಾರು ರೈತರು ಮೆಣಸಿನಕಾಯಿ ಬೀಜ ಖರೀದಿಗಾಗಿ ಕಿಕ್ಕಿರಿದು ಸೇರಿದ್ದಾರೆ.

Bellary vijayanagara Chilli Farmers que up at raitha samparka kendra in bellary

ಮೆಣಸಿನಕಾಯಿ ಬಿತ್ತನೆಯ ಬೀಜ (Chilli seeds) ಖರೀದಿಸಲು ಹೆಂಗಸರು, ಮಕ್ಕಳು ಅನ್ನದೇ ಆಗಮಿಸಿರುವ ರೈತಾಪಿ ಜನ

ಸಾಮಾಜಿಕ ಅಂತರ ಮಾಯ: ಮೆಣಸಿನಕಾಯಿ ಬೀಜ ಖರೀದಿಗೆ ಆಗಮಿಸಿದ್ದ ಬಳ್ಳಾರಿ ತಾಲೂಕಿನ ನಾನಾ ಗ್ರಾಮಗಳ ರೈತರು ಸಾಲುಸಾಲಾಗಿ ನಿಂತು ಕೊಂಡಿದ್ದಲ್ಲದೇ, ಗುಂಪು ಗುಂಪಾಗಿ ಸೇರಿ ಕೊಂಡಿದ್ದರು‌. ಇದರಿಂದ ಸಾಮಾಜಿಕ ಅಂತರವೇ ಮಾಯವಾಗಿತ್ತು. ರೈತರು ಆಧಾರ್ ಕಾರ್ಡ್ ಸಮೇತರಾಗಿ ರೈತ ಸಂಪರ್ಕ ಕೇಂದ್ರ ಎದುರು ಕ್ಯೂ ನಿಂತಿರೋದು ಕಂಡುಬಂತು.

ಬಳ್ಳಾರಿ ತಾಲೂಕಿನ ನಾನಾ ಗ್ರಾಮಗಳ ರೈತರು ಸಾಲುಸಾಲಾಗಿ ನಿಂತು ಕೊಂಡಿದ್ದು, ಸಾಮಾಜಿಕ ಅಂತರ ಮಾಯವಾಗಿತ್ತು.

ಬಳ್ಳಾರಿ ಜಿಲ್ಲೆಯಲ್ಲಿ ಈಗ ಮುಂಗಾರು ಮಳೆಯಾಗಿರುವುದರಿಂದ ಬಿತ್ತನೆ ಕಾರ್ಯಕ್ಕಾಗಿ ರೈತರು ಸಿದ್ಧತೆ ಮಾಡಿಕೊಳ್ಳಬೇಕು. ಅದರಲ್ಲೂ ತುಂಗಾ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಅತಿಹೆಚ್ಚು ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತದೆ. ಇದಕ್ಕಾಗಿ ಈಗ ರೈತರು ಚಿಲ್ಲಿ ಬೀಜದ ಮೊರೆ ಹೋಗಿದ್ದಾರೆ. ಆದರೆ ಡೀಲರ್ಸ್​ಗಳು ಬೀಜದ ಕೊರತೆ ಸೃಷ್ಟಿಸಿ ಬ್ಲಾಕ್ ಮಾರ್ಕೆಟ್​ನಲ್ಲಿ ದುಪ್ಪಟ್ಟು ಬೆಲೆಗೆ ಮೇಣಸಿನ ಬೀಜವನ್ನು ಮಾರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ರೈತರು ಚಿಲ್ಲಿ ಬೀಜಗಳನ್ನ ಡೀಲರ್ಸ್​ಗಳಿಗೆ ಕೊಡದೇ ವಿತರಕರಿಂದಲೇ ರೈತರಿಗೆ ಬೀಜಗಳನ್ನ ಕೊಡಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಮೆಣಸಿನಕಾಯಿ ಬೀಜದ ಡೀಲರ್ಸ್​ಗಳು ಪ್ರತಿ ಕೆಜಿ ಮೆಣಸಿನಕಾಯಿ ಬೀಜಕ್ಕೆ 80 ಸಾವಿರ ರೂಪಾಯಿ ಇದ್ದರೆ ಅದನ್ನು 1.30 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಬ್ಲಾಕ್​ನಲ್ಲಿ ಮೆಣಸಿನಕಾಯಿ ಬೀಜಗಳನ್ನು ಮಾರಾಟ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜೂನ್ ತಿಂಗಳ ಆರಂಭದಲ್ಲಿಯೇ ಮೆಣಸಿನಕಾಯಿ ಸಸಿಗಳನ್ನು ಬೆಳೆಸಬೇಕು. ಹೀಗಾಗಿ ರೈತರು ಬೀಜಕ್ಕಾಗಿ ಪರದಾಡುತ್ತಿದ್ದಾರೆ. ವಿತರಕರು ಹಾಗೂ ಡೀಲರ್ಸ್​ಗಳ ಒಳ ಒಪ್ಪಂದದಿಂದಾಗಿ ರೈತರು ಈಗ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಕೃಷಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕಿದೆ.

(Bellary vijayanagara Chilli Farmers que up at raitha samparka kendra in bellary)

ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ಪರದಾಟ; ಬೆಳಗ್ಗೆ ಮೂರು ಗಂಟೆಯಿಂದ ಗೋದಾಮಿನ ಮುಂದೆ ಕಾದ ರೈತರಿಗೆ ನಿರಾಸೆ

Click on your DTH Provider to Add TV9 Kannada