ಸುತ್ತೂರು ಶ್ರೀಗಳ ಪೂರ್ವಾಶ್ರಮದ ತಾಯಿ ಶಿವನಾಗಮ್ಮ ನಿಧನ
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಮುಂಜಾನೆ ಮೈಸೂರಿನ JSS ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ.
ಮೈಸೂರು: ಸುತ್ತೂರು ಶ್ರೀಗಳ ಪೂರ್ವಾಶ್ರಮದ ತಾಯಿ ಶಿವನಾಗಮ್ಮ(90) ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಮುಂಜಾನೆ ಮೈಸೂರಿನ JSS ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ.
ಶಿವನಾಗಮ್ಮ ಅವರ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ ಶಿವನಾಗಮ್ಮ ನಿಧನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪೂರ್ವಾಶ್ರಮದ ಮಾತೃಶ್ರೀ ಶ್ರೀಮತಿ ಶಿವನಾಗಮ್ಮ ಅವರ ನಿಧನಕ್ಕೆ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಪೂರ್ವಾಶ್ರಮದ ಮಾತೃಶೀ ಶ್ರೀಮತಿ ಶಿವನಾಗಮ್ಮನವರ ನಿಧನಕ್ಕೆ ಮುಖ್ಯಮಂತ್ರಿ @BSYBJP ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಆತ್ಮಕ್ಕೆ ಸದ್ಗತಿಯನ್ನು ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದ್ದಾರೆ.
— CM of Karnataka (@CMofKarnataka) June 14, 2021
ಸಂತಾಪ ಸೂಚಿಸಿದ ಎಸ್.ಟಿ.ಸೋಮಶೇಖರ್ ಸುತ್ತೂರು ಶ್ರೀಗಳ ಪೂರ್ವಶ್ರಮದ ಮಾತೃಶ್ರೀಯವರಾದ ಶ್ರೀಮತಿ ಶಿವನಾಗಮ್ಮನವರು ಲಿಂಗೈಕ್ಯರಾದದ್ದು ತುಂಬಾ ನೋವಿನ ಸಂಗತಿ. ಸುಮಾರು 90 ವರ್ಷಗಳು ಸಾರ್ಥಕವಾಗಿ ಬದುಕಿ ಬಾಳಿದವರು ಅವರು. ವಕೀಲರಾಗಿದ್ದ ದಿವಂಗತ ಎಸ್.ಎಂ. ಪ್ರಭುಸ್ವಾಮಿಯವರ ಶ್ರೀಮತಿಯಾಗಿ ತಮ್ಮ 6 ಜನ ಮಕ್ಕಳಿಗೆ ಬಾಲ್ಯದಲ್ಲಿ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಟ್ಟು ಸಮಾಜಕ್ಕೆ ಆಸ್ತಿಯಾಗಿ ಬೆಳೆಸಿದರು. ಶ್ರೀಮತಿ ಶಿವನಾಗಮ್ಮ ಅವರ ಮಕ್ಕಳಾದ ಎಸ್.ಪಿ.ಶಶಿಕಲಾ ರವರು. ಸುತ್ತೂರು ಶ್ರೀಗಳಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ರವರು ಐ.ಎ.ಎಸ್.
ಅಧಿಕಾರಿಗಳಾದ ಷಡಕ್ಷರಸ್ವಾಮಿ ರವರು, ಜೆ.ಎಸ್.ಎಸ್. ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಪಿ. ಮಂಜುನಾಥ್ ರವರು, ಪ್ರೊ. ಎಸ್.ಪಿ.ಉಮಾದೇವಿ ರವರು, ಹಾಗೂ ಉದಯ ಶಂಕರ್ ಅವರು ಸಮಾಜಕ್ಕೆ ಬಹುದೊಡ್ಡ ಆಸ್ತಿಯಾಗಿ ಎಲ್ಲರೂ ತಮ್ಮದೇ ಯಾದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಮಹಾತಾಯಿ ಶ್ರೀಮತಿ ಶಿವನಾಗಮ್ಮ ಅವರ ಲಿಂಗೈಕ್ಯದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಎಸ್.ಟಿ.ಸೋಮಶೇಖರ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಪಾಸಿಟಿವಿಟಿ ರೇಟ್ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?
Published On - 9:45 am, Mon, 14 June 21