AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಪಾಸಿಟಿವಿಟಿ ರೇಟ್ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?

ರಾಜ್ಯದ ಸುಮಾರು 11 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಕಠಿಣ ನಿಯಮಗಳು ಮುಂದುವರೆಯುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಿರುವ ಜಿಲ್ಲೆಗಳಲ್ಲಿ ಇಂದಿನಿಂದ ಮೊದಲ ಹಂತದಲ್ಲಿ ಅನ್ಲಾಕ್ ಆಗಿದೆ.

ಕೊರೊನಾ ಪಾಸಿಟಿವಿಟಿ ರೇಟ್ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟಿದೆ?
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jun 14, 2021 | 10:20 AM

Share

ಬೆಂಗಳೂರು: ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ರಾಜ್ಯ ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಆದರೆ ಈಗ ಕೊರೊನಾ ಪಾಸಿಟಿವಿಟಿ ರೇಟ್ ಕೆಲ ಜಿಲ್ಲೆಗಳಲ್ಲಿ ಕಡಿಮೆಯಿದೆ. ಹಾಗಾಗಿ ಇಂದಿನಿಂದ ಪಾಸಿಟಿವಿಟಿ ರೇಟ್ ಕಡಿಮೆ ಇರುವ ಜಿಲ್ಲೆಗಳಿಗೆ ಅನ್​ಲಾಕ್ ಭಾಗ್ಯ ಸಿಕ್ಕಿದೆ. ರಾಜ್ಯದ ಸುಮಾರು 11 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಕಠಿಣ ನಿಯಮಗಳು ಮುಂದುವರೆಯುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಿರುವ ಜಿಲ್ಲೆಗಳಲ್ಲಿ ಇಂದಿನಿಂದ ಮೊದಲ ಹಂತದಲ್ಲಿ ಅನ್ಲಾಕ್ ಆಗಿದೆ.

ಸದ್ಯ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಎಷ್ಟಿದೆ ಎಂದರೆ, ಧಾರವಾಡದಲ್ಲಿ ಪಾಸಿಟಿವಿಟಿ ರೇಟ್ ಶೇ.5.8 ರಷ್ಟಿದೆ. ತುಮಕೂರಿನಲ್ಲಿ ಪಾಸಿಟಿವ್ ರೇಟ್ ಶೇ.8 ರಷ್ಟಿದೆ. ಇನ್ನು ಗದಗದಲ್ಲಿ ಶೇ.1.48 ರಷ್ಟಿದ್ದು, ಶಿವಮೊಗ್ಗದಲ್ಲಿ ಶೇ.8 ಇದೆ. ಪಾಸಿಟಿವಿಟಿ ರೇಟ್ ಚಿತ್ರದುರ್ಗದಲ್ಲಿ ಶೇ.6.64 ಇದ್ದರೇ, ಕೊಪ್ಪಳದಲ್ಲಿ ಶೇ. 4.55 ರಷ್ಟಿರುವುದು ತಿಳಿದುಬಂದಿದೆ. ಮಡಿಕೇರಿಯಲ್ಲಿ ಶೇ.6.06 ರಷ್ಟಿರುವುದು ತಿಳಿದುಬಂದರೆ, ರಾಯಚೂರಿನಲ್ಲಿ ಶೇ.2 ಇದೆ.

ಸದ್ಯ ಯಾದಗಿರಿಯಲ್ಲಿ ಪಾಸಿಟಿವಿಟಿ ರೇಟ್ ಶೇ.1.76, ಕೋಲಾರದಲ್ಲಿ ಶೇ. 4.09, ಚಿಕ್ಕಬಳ್ಳಾಪುರದಲ್ಲಿ ಶೇ.5, ಉಡುಪಿಯಲ್ಲಿ ಶೇ.3.68 ರಷ್ಟಿದ್ದರೆ, ಬೆಳಗಾವಿಯಲ್ಲಿ ಶೇ.7.7 ರಷ್ಟಿದೆ. ಜೊತೆಗೆ ಚಿಕ್ಕಮಗಳೂರಿನಲ್ಲಿ ಕೊರೊನಾ ಆರ್ಭಟ ಕಡಿಮೆಯಾಗಿಲ್ಲ. ಇಲ್ಲಿನ ಪಾಸಿಟಿವಿಟಿ ರೇಟ್ ಶೇ.20 ರಷ್ಟಿದೆ. ಬೆಂಗಳೂರಿನಲ್ಲಿ ಶೇ.3.11, ದಾವಣಗೆರೆಯಲ್ಲಿ ಶೇ.10.38, ಹಾವೇರಿ ಶೇ.2.6, ಬೀದರ್​ನಲ್ಲಿ ಶೇ.0.54, ಕಲಬುರಗಿಯಲ್ಲಿ ಶೇ.2, ಹುಬ್ಬಳ್ಳಿಯಲ್ಲಿ ಶೇ.5, ಬಳ್ಳಾರಿಯಲ್ಲಿ ಶೇ.6 ಹಾಗೂ ಮಂಡ್ಯದಲ್ಲಿ ಶೇ.5.36 ರಷ್ಟು ಕೊರೊನಾ ಪಾಸಿಟಿವಿಟಿ ರೇಟ್ ಇದೆ. ಮಂಗಳೂರಿನಲ್ಲಿ ಶೇ.7.19 ಇದ್ದರೆ, ಹಾಸನದಲ್ಲಿ 6.61 ಇದೆ. ಕಾರವಾರದಲ್ಲಿ ಪಾಸಿಟಿವಿಟಿ ರೇಟ್ ಶೇ. 4.95 ಮತ್ತು ರಾಮನಗರದಲ್ಲಿ ಶೇ.3.7 ಇದೆ.

ಇದನ್ನೂ ಓದಿ

Karnataka Unlock Guidelines: 11 ಜಿಲ್ಲೆಗಳು ಬಿಟ್ಟು ಇಂದಿನಿಂದ ಅನ್ಲಾಕ್ ಆದ ಕರುನಾಡು; ಏನೇನು ಸಿಗುತ್ತೆ? ಏನೇನು ಸಿಗಲ್ಲ? ಕಂಪ್ಲೀಟ್ ಡಿಟೇಲ್ಸ್

Karnataka Unlock: ಕರ್ನಾಟಕ ಅನ್​ಲಾಕ್​ ಆದರೂ ಈ ನಿಯಮಗಳು ಮುಂದುವರೆಯಲಿವೆ; ಈ ಕೆಳಗಿನ 11 ಜಿಲ್ಲೆಗಳಲ್ಲಿ ವಿಶೇಷ ಮಾರ್ಗಸೂಚಿ ಜಾರಿ

(Corona Positivity Rate in Different Districts in Karnataka)

Published On - 9:21 am, Mon, 14 June 21