Karnataka Unlock Guidelines: 11 ಜಿಲ್ಲೆಗಳು ಬಿಟ್ಟು ಇಂದಿನಿಂದ ಅನ್ಲಾಕ್ ಆದ ಕರುನಾಡು; ಏನೇನು ಸಿಗುತ್ತೆ? ಏನೇನು ಸಿಗಲ್ಲ? ಕಂಪ್ಲೀಟ್ ಡಿಟೇಲ್ಸ್

ಸರಿ ಸುಮಾರು ಎರಡು ತಿಂಗಳಿಂದ ರಾಜ್ಯದ ಜನ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಲಾಕ್‌ಡೌನ್‌ ಅನ್ನೋ ಮನೆವಾಸದಿಂದ ಮುಕ್ತಿ ಸಿಕ್ಕಿದೆ. ಇವತ್ತಿನಿಂದ ಕರುನಾಡು ಮೊದಲ ಹಂತದಲ್ಲಿ ಅನ್‌ಲಾಕ್‌ ಆಗಿದೆ. ಹಾಗಿದ್ರೆ ಇವತ್ತಿನಿಂದ ಏನೇನು ಸಿಗುತ್ತೆ? ಏನೇನು ಸಿಗಲ್ಲ? ಯಾವ ಯಾವ ಕ್ಷೇತ್ರಗಳಿಗೆ ರಿಲೀಫ್ ಅಂತ ನೋಡೋನಾ.

Karnataka Unlock Guidelines: 11 ಜಿಲ್ಲೆಗಳು ಬಿಟ್ಟು ಇಂದಿನಿಂದ ಅನ್ಲಾಕ್ ಆದ ಕರುನಾಡು; ಏನೇನು ಸಿಗುತ್ತೆ? ಏನೇನು ಸಿಗಲ್ಲ? ಕಂಪ್ಲೀಟ್ ಡಿಟೇಲ್ಸ್
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕೊರೊನಾ ಸೋಂಕಿನ ಪ್ರಭಾವ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಜನರ ಜೀವನವನ್ನ ಬೀದಿಗೆ ತಂದ ಕೊರೊನಾ ಸದ್ಯ ಆರ್ಭಟ ಕಡಿಮೆಮಾಡಿದೆ. ರಾಜ್ಯದಲ್ಲಿ ಐವತ್ತು ಸಾವಿರದ ಗಡಿ ದಾಟಿ ನಿತ್ಯ ದಾಳಿ ಮಾಡ್ತಿದ್ದ ವೈರಸ್‌, ಈಗ 10 ಸಾವಿರಕ್ಕೆ ಇಳಿದಿದೆ. ಇದೇ ಸಂಖ್ಯೆಗಳು ಸರ್ಕಾರ ಉಸಿರಾಡುವಂತೆ ಮಾಡಿದ್ದು, ಕರುನಾಡು ಅನ್‌ಲಾಕ್‌ ಆಗಿದೆ. 20 ಜಿಲ್ಲೆಗಳಲ್ಲಿ ಹಾಫ್ ಡೇ ಅನ್ಲಾಕ್ ಭಾಗ್ಯ ಫಿಕ್ಸ್ ಆಗಿದೆ.

ಮಧ್ಯಾಹ್ನ 2 ಗಂಟೆವರೆಗೂ ವ್ಯಾಪಾರ ವಹಿವಾಟಿಗೆ ಅವಕಾಶ
ರಾಜ್ಯದಲ್ಲಿ ಇಂದಿನಿಂದ ಮೊದಲ ಹಂತದಲ್ಲಿ ಅನ್‌ಲಾಕ್‌ ಆಗಿದೆ. ಸಿಎಂ ಬಿಎಸ್‌ವೈ ಇಂದಿನಿಂದ ಸಾಕಷ್ಟು ಕ್ಷೇತ್ರಗಳಿಗೆ ರಿಲೀಫ್ ನೀಡಿದ್ದಾರೆ. ಹಾಗಾದ್ರೆ ಇಂದಿನಿಂದ ಕರುನಾಡಿನಲ್ಲಿ ಯಾವುದಕ್ಕೆಲ್ಲ ರಿಲೀಫ್‌ ಸಿಗುತ್ತೆ..? ಯಾವ್ಯಾವ ಕ್ಷೇತ್ರಗಳು ಓಪನ್ ಆಗುತ್ತೆ ಅಂತ ನೋಡೋದಾದ್ರೆ.

ಏನಿರುತ್ತೆ?
ಇಷ್ಟುದಿನ ಲಾಕ್‌ಡೌನ್‌ನಲ್ಲಿ ಅಗತ್ಯವಸ್ತು ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ಅವಕಾಶ ಇತ್ತು. ಆದ್ರೆ, ಇಂದಿನಿಂದ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೂ ಅವಕಾಶ ನೀಡಲಾಗಿದೆ. ಬೀದಿ ಬದಿ ವ್ಯಾಪಾರ ವಹಿವಾಟಿಗೂ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಟೈಂ ವಿಸ್ತರಿಸಲಾಗಿದೆ. ಬೆಳಗ್ಗೆ ಬೇಗ ಎದ್ದು ಬಾರ್‌ ಮುಂದೆ ಕ್ಯೂ ನಿಲ್ತಿದ್ದ ಮದ್ಯ ಪ್ರಿಯರು ಇಂದು ಮಧ್ಯಾಹ್ನ 2 ರವರೆಗೂ ಪಾರ್ಸೆಲ್ ತೆಗೆದುಕೊಂಡು ಹೋಗಬಹುದು. ಇನ್ನು ಕನ್ನಡಕದ ಅಂಗಡಿಗಳು ಕೂಡಾ ಇಂದಿನಿಂದ ಓಪನ್‌ ಆಗಲಿವೆ. ಹೋಟೆಲ್ ಸಂಜೆ ವರೆಗೂ ಓಪನ್ಗೆ ಅವಕಾಶ ಇದ್ದು, ಪಾರ್ಸೆಲ್ ಮಾತ್ರ ಕೊಡಬೇಕು ಅನ್ನೋ ಕಂಡೀಷನ್ ವಿಧಿಸಿದೆ. ಆದ್ರೆ ಫುಡ್, ಎಲೆಕ್ಟ್ರಿಕಲ್ ಐಟಂ ಸೇರಿದಂತೆ ಆನ್ಲೈನ್ ಹೋಮ್ ಡೆಲಿವರಿಗೆ ಸಂಪೂರ್ಣ ಅವಕಾಶ ನೀಡಲಾಗಿದೆ. ಇನ್ನು ಸಂಚಾರದ ವಿಚಾರದಲ್ಲಿ ಆಟೋ, ಟ್ಯಾಕ್ಸಿ, ಓಲಾ, ಉಬರ್ ಇಂದಿನಿಂದ ರಸ್ತೆಗೆ ಇಳಿಯಲಿದ್ದು, ಇಬ್ಬರಷ್ಟೇ ಪ್ರಯಾಣಿಸಬೇಕು. ಇಷ್ಟು ದಿನ ಮುಚ್ಚಿದ್ದ ಪಾರ್ಕ್ಗಳು ಇಂದಿನಿಂದ ಓಪನ್‌ ಆಗಲಿದ್ದು, ಬೆಳಗ್ಗೆ 5 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೂ ಮಾತ್ರ ಬಾಗಿಲು ತೆರೆದಿರುತ್ತವೆ.

ಹಾಗೇನೆ ಕೆಲವೇ ಕೆಲ ಸರ್ಕಾರಿ ಕಚೇರಿಗಳು ಬಾಗಿಲು ತೆರೆಯಲಿದ್ದು, ಶೇಕಡಾ 50 ರಷ್ಟು ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗ್ಬೇಕು. ಎಲ್ಲ ಕೈಗಾರಿಕೆಗಳ ಓಪನ್ಗೆ ಅವಕಾಶ ಇದೆ. ಆದ್ರೆ ಇಲ್ಲೂ ಶೇಕಡಾ 50 ರಷ್ಟು ಮಾತ್ರ ಸಿಬ್ಬಂದಿ ಇರಬೇಕು. ಆದ್ರೆ ಗಾರ್ಮೆಂಟ್ಸ್‌ನಲ್ಲಿ ಕೇವಲ 30 ಪರ್ಸೆಂಟ್ನಷ್ಟು ಸಿಬ್ಬಂದಿಗೆ ಅವಕಾಶ ನೀಡಲಾಗಿದೆ. ಇನ್ನು ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ನಿರ್ಮಾಣ ವಲಯ ಕಂಪ್ಲೀಟ್ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಿದ್ದು, ಇವುಗಳ ಸಂಬಂಧಿದ ಅಂಗಡಿಗಳು ಕೂಡಾ ಬಾಗಿಲು ತೆರೆಯುತ್ವೆ. ಹಾಗೇನೆ ಅಂತಾರಾಜ್ಯ ಪ್ರಯಾಣಕ್ಕೆ ಅಂತರ್ ಜಿಲ್ಲೆ ಪ್ರಯಾಣಕ್ಕೂ ಪರ್ಮಿಷನ್ ಇದೆ. ಅನ್ಲಾಕ್ ಇದ್ದರೂ ಅದ್ಧೂರಿ ಮದುವೆಗಳಿಗೆ ಅನುಮತಿ ಇಲ್ಲ. ಮದುವೆಗಳಲ್ಲಿ ಭಾಗಿಯಾಗಲು 40 ಜನರಿಗಷ್ಟೇ ಅವಕಾಶವಿದೆ. ಆದ್ರೆ, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಐವರಿಗಷ್ಟೇ ಅವಕಾಶ ನೀಡಿದ್ದಾರೆ.

ಏನಿರಲ್ಲ?
ಇನ್ನು KSRTC, BMTC ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದ್ದು, ಖಾಸಗಿ ಬಸ್ಗಳ ಸಂಚಾರಕ್ಕೂ ಗ್ರೀನ್ ಸಿಗ್ನಲ್ ನೀಡಿಲ್ಲ. ಸಿಲಿಕಾನ್ ಸಿಟಿ ಬೆಂಗಳೂರು ಅನ್‌ಲಾಕ್ ಆದ್ರೂ, ಮೆಟ್ರೋ ಸಂಚಾರ ಆರಂಭಿಸಲ್ಲ. ಅನ್ಲಾಕ್ ಆದ್ರೂ ಮೆಟ್ರೋ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಮಾಲ್, ಥಿಯೇಟರ್ಗಳಿಗೆ ಸರ್ಕಾರ ಅನುಮತಿ ನೀಡಿಲ್ಲ. ಅಲ್ದೆ, ಸದ್ಯಕ್ಕೆ ರಾಜ್ಯದಲ್ಲಿ ಜಿಮ್, ಸ್ವಿಮ್ಮಿಂಗ್ ಪೂಲ್ ಓಪನ್ ಮಾಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ನೈಟ್ಕರ್ಫ್ಯೂ ಮತ್ತು ವಿಕೆಂಡ್ ಕರ್ಫ್ಯೂ ಜಾರಿ
ಇನ್ನು ಅನ್ಲಾಕ್ ಮಧ್ಯೆ ಸರ್ಕಾರ ನೈಟ್ಕರ್ಫ್ಯೂ, ಮತ್ತು ವಿಕೆಂಡ್ ಕರ್ಫ್ಯೂ ಜಾರಿ ಮಾಡ್ತಿದೆ. ಹಾಗಿದ್ರೆ ನೈಟ್‌ ಕರ್ಫ್ಯೂ ರೂಲ್ಸ್‌ಗಳೇನು ಅಂತ ನೋಡೋದಾದ್ರೆ.

ನೈಟ್ ಕರ್ಫ್ಯೂ ರೂಲ್ಸ್
ಅಂದಹಾಗೆೇ ಇಂದಿನಿಂದ ಅನ್‌ಲಾಕ್‌ ಆದ್ರೂ ರಾಜ್ಯಾದ್ಯಂತ ನೈಟ್ಕರ್ಫ್ಯೂ ರೂಲ್ಸ್ ಜಾರಿಯಾಗಲಿದೆ. ಅಂದ್ರೆ ಸಂಜೆ 7 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ಕರ್ಫ್ಯೂ ಜಾರಿಯಲ್ಲಿರಲಿದೆ. ಹೀಗಾಗಿ ಸಂಜೆ 7 ಗಂಟೆಗೆ ಎಲ್ಲವೂ ಕಂಪ್ಲೀಟ್ ಬಂದ್ ಆಗ್ಬೇಕು. 7 ಗಂಟೆ ನಂತ್ರ ರೈಲಿಗೆ ಹೋಗೋರು, ವಿಮಾನದಲ್ಲಿ ಪ್ರಯಾಣಿಸೋರೋ ಅದರ ಟಿಕೆಟ್ ತೋರಿಸಿ ನಿಲ್ದಾಣಕ್ಕೆ ತೆರಳಬಹುದು. ಇನ್ನು ಸಂಜೆ ಆಫೀಸ್ ಕೆಲಸ ಮುಗಿಸಿ ಮನೆಗೆ ಹೋಗೋರು, ನಿಮ್ಮ ಸಂಸ್ಥೆ ಐಡಿ ತೋರಿಸಬೇಕು. ಹಾಗೇ, ನೈಟ್ ಶಿಫ್ಟ್ ಡ್ಯೂಟಿಗೆ ಹೋಗೋರೂ ಸಹ ಐಡಿಯನ್ನ ಕಡ್ಡಾಯವಾಗಿ ತೋರಿಸಬೇಕು.

ವೀಕೆಂಡ್ ಕರ್ಫ್ಯೂ ರೂಲ್ಸ್
ನೈಟ್ ಕರ್ಫ್ಯೂನಂತೆ ಜೂನ್ 14 ರ ಬಳಿಕ ಅಂದ್ರೆ ವಾರಾಂತ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ಬರಲಿದೆ. ಮುಂದಿನ ಶುಕ್ರವಾರ ಸಂಜೆ 7 ಗಂಟೆಯಿಂದ, ಸೋಮವಾರ ಬೆಳಗ್ಗೆ 5 ಗಂಟೆವರೆಗೂ ವಿಕೆಂಡ್ ಕರ್ಫ್ಯೂ ಇರಲಿದೆ. ಇಂಟ್ರೆಸ್ಟಿಂಗ್ ಅಂದ್ರೆ ಹೆಸರಿಗಷ್ಟೇ ವೀಕೆಂಡ್ ಕರ್ಫ್ಯೂ ಇರಲಿದ್ದು, ಎಂದಿನಂತೆ ಅಗತ್ಯ ವಸ್ತು ಖರೀದಿ, ಬೀದಿ ಬದಿ ವ್ಯಾಪಾರ, ಮದ್ಯ ಖರೀದಿ ಸೇರಿದಂತೆ ಸೋಮವಾರದಿಂದ ಶುಕ್ರವಾರದವರೆಗೂ ಏನ್ ರೂಲ್ಸ್ ಇರುತ್ತೋ ಅದೇ ರೂಲ್ಸ್ ಇರಲಿದೆ.

ಇಂದಿನಿಂದ ಕರುನಾಡಿನಲ್ಲಿ ಅನ್‌ಲಾಕ್‌ ಜಾರಿಯಾಗಿದೆ. ಆದ್ರೆ, ಜನ ಈಗಾಗಲೇ ಕೊರೊನಾ ಕಂಪ್ಲೀಟ್ ಆಗಿ ಹೋಗೇ ಬಿಡ್ತು ಅನ್ನೋ ಲೆವಲ್ಗೆ ಬೇಜವಾಬ್ದಾರಿಯಿಂದ ವರ್ತಿಸ್ತಿದ್ದಾರೆ. ನೆನಪಿರಲಿ, ಕಳೆದ ಬಾರಿ ಈ ರೀತಿ ಮಾಡಿದ್ದಕ್ಕೆ, 2ನೇ ಅಲೆ ಬಂತು, ಮತ್ತೆ ತಿಂಗಳಗಟ್ಟಲೇ ಲಾಕ್ಡೌನ್ ಜಾರಿಯಾಯ್ತು. ಈಗಲೂ ಮತ್ತೆ ಹಳೇ ಚಾಳಿ ಮುಂದುವರಿಸಿದ್ರೆ, ಮತ್ತೆ ಕೊರೊನಾ ಹೆಚ್ಚಾಗಿ ಮತ್ತೆ ಲಾಕ್ಡೌನ್ ಆದ್ರೆ ಆಗ ಜನರೇ ಹೊಣೆಯಾಗ್ತಾರೆ. ಅನ್‌ಲಾಕ್‌ ಆಗಿದ್ದು ಜನರಿಗೇ ಹೊರತು ಕೊರೊನಾಗಲ್ಲ.

ಇದನ್ನೂ ಓದಿ: Karnataka Unlock: ಕರ್ನಾಟಕ ಅನ್​ಲಾಕ್​ ಆದರೂ ಈ ನಿಯಮಗಳು ಮುಂದುವರೆಯಲಿವೆ; ಈ ಕೆಳಗಿನ 11 ಜಿಲ್ಲೆಗಳಲ್ಲಿ ವಿಶೇಷ ಮಾರ್ಗಸೂಚಿ ಜಾರಿ

Click on your DTH Provider to Add TV9 Kannada