ಬಿಜೆಪಿ ಜತೆ ಜೆಡಿಎಸ್​ ಮೈತ್ರಿಗೆ ಬಹುಪರಾಕ್, ತಮ್ಮದೇ ಮುಸ್ಲಿಂ ನಾಯಕರಿಗೆ ಟಾಂಗ್ ಕೊಟ್ಟ ಫಾರೂಕ್

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಜೆಡಿಎಸ್​ ಮುಸ್ಲಿಂ ನಾಯಕರು ಸಿಡಿದೆದ್ದಾರೆ. ತಮ್ಮ ತತ್ವ ಸಿದ್ಧಾಂತಕ್ಕೆ ಪಕ್ಷದ ವರಿಷ್ಠರು ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಮುಸ್ಲಿಂ ನಾಯಕರು ಒಬ್ಬೊಬ್ಬರಾಗಿಯೇ ಜೆಡಿಎಸ್ ತೊರೆಯುತ್ತಿದ್ದಾರೆ. ಇದರ ನಡುವೆ ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್ ಮೈತ್ರಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೇ ಕೆಲ ಮುಸ್ಲಿಂ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.​

ಬಿಜೆಪಿ ಜತೆ ಜೆಡಿಎಸ್​ ಮೈತ್ರಿಗೆ ಬಹುಪರಾಕ್, ತಮ್ಮದೇ ಮುಸ್ಲಿಂ ನಾಯಕರಿಗೆ ಟಾಂಗ್ ಕೊಟ್ಟ ಫಾರೂಕ್
ಕುಮಾರಸ್ವಾಮಿ-ಫಾರೂಕ್
Updated By: ರಮೇಶ್ ಬಿ. ಜವಳಗೇರಾ

Updated on: Oct 01, 2023 | 2:28 PM

ರಾಮನಗರ, (ಅಕ್ಟೋಬರ್ 01): ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಏನೋ BJP ಜೊತೆ ಮೈತ್ರಿ (BJP And JDS alliance) ಮಾಡಿಕೊಂಡು ಲೋಕಸಭೆಯಲ್ಲಿ(Loksabha Elections 2024) ತಮ್ಮ ಸ್ಥಾನಗಳನ್ನ ಹೆಚ್ಚಿಸಿಕೊಳ್ಳಬೇಕು ಎನ್ನುವ ಇರಾದೆಯಲ್ಲಿ ಇದ್ದಾರೆ. ಆದ್ರೆ, ಅದೇ ಮೈತ್ರಿ ಈಗ ಕುಮಾರಸ್ವಾಮಿಗೆ, ಜೆಡಿಎಸ್​ಗೆ ಫಜೀತಿ ತಂದೊಡ್ಡುವ ಭೀತಿ ಶುರುವಾಗಿದೆ. ಹೌದು…ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಹಲವು ಮುಸ್ಲಿಂ ನಾಯಕರು ಜೆಡಿಎಸ್​​ಗೆ ಗುಡ್​ಬೈ ಹೇಳಿದ್ದಾರೆ. ಇನ್ನು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಹ ಪಕ್ಷ ತೊರೆಯು ಬಗ್ಗೆ ತಿಂತನೆ ನಡೆಸಿದ್ದಾರೆ. ಆದ್ರೆ, ಮತ್ತೋರ್ವ ಮುಸ್ಲಿಂ ಪ್ರಮುಖ ನಾಯಕ, ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಜೆಡಿಎಸ್​ನಲ್ಲೇ ಮುಂದುವರೆಯುವ ಸುಳಿವು ನೀಡಿದ್ದಾರೆ.

ಬಿಡದಿಯಲ್ಲಿ ಮಾತನಾಡಿದ ಬಿ.ಎಂ.ಫಾರೂಕ್, ಬಿಜೆಪಿ ಜೊತೆ ಯಾವ ಪಕ್ಷ ಮೈತ್ರಿ ಮಾಡಿಕೊಂಡಿಲ್ಲ ಹೇಳಿ. ಶಿವಸೇನೆ, ಶರತ್ ಪವಾರ್, ನಿತೀಶ್ ಕುಮಾರ್ ಕೂಡಾ ಮೈತ್ರಿ ಮಾಡಿಕೊಂಡಿದ್ರು. ಈ ಹಿಂದೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರು ಅಲ್ವಾ? ಆಗ ನಮ್ಮ ಜಮೀರ್ ಗೆ ಮಂತ್ರಿ ಸ್ಥಾನ ಕೊಡಲಿಲ್ವಾ? ಈಗಲೂ ಮೈತ್ರಿಯಿಂದ ಯಾವುದೇ ಗೊಂದಲ ಇಲ್ಲ ಎಂದು ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಸಮರ್ಥಿಸಿಕೊಂಡರು.

ಇದನ್ನೂ ಓದಿ: ರಾಮನಗರ: ಹೆಚ್​ಡಿಕೆ ಹೇಳಿಕೆಗೆ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಸ್ಲಿಂ ಮುಖಂಡರಿಂದ ತೀವ್ರ ಅಸಮಾಧಾನ

ಮೈತ್ರಿಯ ಪ್ರತಿ ಹಂತದಲ್ಲೂ ಇಬ್ರಾಹಿಂ ಜೊತೆ ಚರ್ಚೆ ಮಾಡಿದ್ದಾರೆ. ಮೈತ್ರಿ ಮಾತುಕತೆ ಎಲ್ಲಾ ಹಂತದಲ್ಲೂ ಇಬ್ರಾಹಿಂನ ವಿಶ್ವಾಸಕ್ಕೆ ಪಡೆದಿದ್ದಾರೆ. ಜೆಡಿಎಸ್ ನಿಂದ ಅಲ್ಪಸಂಖ್ಯಾತರು ದೂರ ಆಗುತ್ತಿಲ್ಲ. ನಾನು ಇಲ್ಲೇ ಇದೀನಲ್ಲ. ಅಲ್ಪಸಂಖ್ಯಾತರ ಸಮಸ್ಯೆಗಳು ಹಾಗೂ ಹಿತರಕ್ಷಣೆಗೆ ಬದ್ಧ. ಹಿಂದುತ್ವದ ಅಜೆಂಡಾಗೆ ನಾವು ಶಿಫ್ಟ್ ಆಗಲ್ಲ. ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ಆಗಲು ಬಿಡಲ್ಲ ಎಂದರು. ಈ ಮೂಲಕ ಫಾರೂಕ್​ ಜೆಡಿಎಸ್​ನಲ್ಲೇ ಉಳಿಯುವ ಅರ್ಥದಲ್ಲಿ ಹೇಳಿದರು.

ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗ ಮುಸ್ಲಿಮರಿಗೆ ಸಮಸ್ಯೆ ಆಗಿದ್ಯಾ.? ಆಗ ಸಮುದಾಯಕ್ಕೆ ಏನು ಕೆಟ್ಟದಾಗಿ ಆಗಿಲ್ಲ. ಸಾರ್ವಜನಿಕವಾಗಿ ಸೌಹಾರ್ದಯುತ ವಾತಾವರಣ ಇರಬೇಕು. ನಮ್ಮ ಆಚಾರ ವಿಚಾರಗಳಿಗೆ ಧಕ್ಕೆ ಬಂದಾಗ ನಾವು ಖಂಡಿಸುತ್ತೇವೆ ಎಂದು ಬಿಜೆಪಿಯೊಂದಿಗಿನ ಮೈತ್ರಿ ಪರ ಬ್ಯಾಟಿಂಗ್ ಮಾಡಿದರು.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ