136 ಶಾಸಕರನ್ನು ಇಟ್ಟುಕೊಂಡು ನಾವೇನು ಕಡಲೆಕಾಯಿ ತಿನ್ನಬೇಕಾ? ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ತಿಳಿದು ಮಾತಾಡುತ್ತಾರೋ, ತಿಳಿಯದೆ ಮಾತಾಡುತ್ತಾರೋ ಗೊತ್ತಿಲ್ಲ. 5 ವರ್ಷ ನಾನೇ ಸಿಎಂ ಅಂತಾ ಅವರೂ ಹೇಳಲ್ಲ, ಇನ್ನೊಬ್ಬರೂ ಪೂರ್ತಿ ಅವಧಿ ಇರುತ್ತಾರೆ ಅಂತಾನೂ ಹೇಳಲ್ಲ. ಹಾಗಾದರೆ 136 ಶಾಸಕರನ್ನು ಇಟ್ಟುಕೊಂಡು ನಾವೇನು ಕಡಲೆಕಾಯಿ ತಿನ್ನುತ್ತಾ ಇರುತ್ತೇವಾ ಎಂದು ಕೃಷಿ ಇಲಾಖೆಯ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 30: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ತಿಳಿದು ಮಾತಾಡುತ್ತಾರೋ, ತಿಳಿಯದೆ ಮಾತಾಡುತ್ತಾರೋ ಗೊತ್ತಿಲ್ಲ. 5 ವರ್ಷ ನಾನೇ ಸಿಎಂ ಅಂತಾ ಅವರೂ ಹೇಳಲ್ಲ, ಇನ್ನೊಬ್ಬರೂ ಪೂರ್ತಿ ಅವಧಿ ಇರುತ್ತಾರೆ ಅಂತಾನೂ ಹೇಳಲ್ಲ. ಹಾಗಾದರೆ 136 ಶಾಸಕರನ್ನು ಇಟ್ಟುಕೊಂಡು ನಾವೇನು ಕಡಲೆಕಾಯಿ ತಿನ್ನುತ್ತಾ ಇರುತ್ತೇವಾ ಎಂದು ಕೃಷಿ ಇಲಾಖೆಯ ಸಚಿವ ಚಲುವರಾಯಸ್ವಾಮಿ (chaluvaraya swamy) ವಾಗ್ದಾಳಿ ಮಾಡಿದ್ದಾರೆ. 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಟಿವಿ9 ಜೊತೆ ಅವರು ಮಾತನಾಡಿದ್ದಾರೆ.
ಇವರು ಹೇಳಿದಂತೆ ಸರ್ಕಾರ ಬೀಳಲು ನಮ್ಮ ಶಾಸಕರು ಇವರ ಹತ್ತಿರ ಹೋಗಿದ್ದಾರಾ? ಅವರ ಮೈತ್ರಿಯಿಂದ ಮೊದಲು ಎಷ್ಟು ಜನ ಡಿಸ್ಟರ್ಬ್ ಆಗಿದ್ದಾರೆ ಮೊದಲು ಅದನ್ನು ಸರಿಪಡಿಸಲಿ. 99% ಜನ ಬಿಜೆಪಿಯವರು ಇವರ ಮೈತ್ರಿ ಒಪ್ಪುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮುಸ್ಲಿಂ ವಿರೋಧಿಯಲ್ಲ, ಹಾಗೆ ಬಿಂಬಿಸಲಾಗುತ್ತಿದೆ; ಛಲವಾದಿ ನಾರಾಯಣಸ್ವಾಮಿ ಕೊಟ್ಟ ಕಾರಣ ಇಲ್ಲಿದೆ ನೋಡಿ
ನಮ್ಮ ಮುಂದೆ ಚರ್ಚೆಯೇ ಆಗಿಲ್ಲ ಅಂತಾ ಅವರು ಹೇಳುತ್ತಿದ್ದಾರೆ. ಬಿಜೆಪಿಯವರು ಎಲ್ಲಿ ಡಿಸ್ಟರ್ಬ್ ಆಗುತ್ತಾರೋ ಅಂತಾ ಈ ರೀತಿ ಮಾತಾಡುತ್ತಾರೆ. ಈ ರೀತಿಯ ಕುಮಾರಸ್ವಾಮಿ ಮಾತು ಹೊಸದೇನಲ್ಲ, ಪಾಪಾ ಮಾತಾಡಲಿ ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ: ಈ ಸಂಬಂಧ ನಾನು ನೀಡಿರುವ ಹೇಳಿಕೆಗೆ ಬದ್ಧ: ಶಾಸಕ ಶಾಮನೂರು
ಅವರ ನಾಯಕರಿಗೆ ಸಮಾಧಾನ ಮಾಡಲು ಹೇಳುವುದಾದರೆ ನಾವ್ಯಾಕೆ ಬೇಜಾರು ಮಾಡಿಕೊಳ್ಳೋಣ? ನನ್ನ ತಂದೆ ಸಿಎಂ ಆಗಿದ್ದಾಗ ನನ್ನ ಕಾಂಪೌಂಡ್ ಒಳಗೂ ಬಿಟ್ಟುಕೊಳ್ಳುತ್ತಿರಲಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಮಾಜಿ ಪ್ರಧಾನಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಿದ್ದಾಗ ಇವರು ಮಧ್ಯದಲ್ಲಿ ಯಾವ ರೀತಿ ಡಿಸ್ಟರ್ಬ್ ಮಾಡಿದ್ದಾರೆ ಅಂತಾ ಮಾಧ್ಯಮದಲ್ಲಿ ನೋಡಿದ್ದೇವೆ, ಅದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಮೈತ್ರಿ ಪವಿತ್ರವೋ ಅಪವಿತ್ರವೋ ಎಂದು ಜನ ತೀರ್ಮಾನಿಸುತ್ತಾರೆ: ಸಂಸದ ಡಿ.ಕೆ.ಸುರೇಶ್
ಅಲ್ಪಸಂಖ್ಯಾತರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ತೀರ್ಪು ನೀಡಿದ್ದಾರೆ. ಮೈತ್ರಿ ಪವಿತ್ರವೋ ಅಪವಿತ್ರವೋ ಎಂದು ಜನ ತೀರ್ಮಾನಿಸುತ್ತಾರೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರ ಮೇಲಿನ ಕೇಸ್ಗಳ ಬಗ್ಗೆ ಮಾಧ್ಯಮದಲ್ಲಿ ಪ್ರಸಾರವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:32 pm, Sat, 30 September 23