ನ್ಯಾಷನಲ್ ಕಾನ್ಫರೆನ್ಸ್ ಇನ್ನೂ ಇಂಡಿಯಾ ಒಕ್ಕೂಟದಲ್ಲೇ ಇದೆ: ಒಮರ್ ಅಬ್ದುಲ್ಲಾ

ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತರು ಎಲ್ಲಾ ಆರು ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಾರೆ. ಆದರೆ ಸತ್ಯವೆಂದರೆ ಕೆಲವೊಮ್ಮೆ ದೊಡ್ಡ ಉದ್ದೇಶಕ್ಕಾಗಿ, ಸಣ್ಣ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಬಿಜೆಪಿಯಿಂದ ಮತ್ತೆ ಸ್ಥಾನಗಳನ್ನು ಗೆಲ್ಲುವುದು ದೊಡ್ಡ ಉದ್ದೇಶವಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುವುದು ಅಗತ್ಯವಾಗಿದೆ. ನಮ್ಮ ಬಾಗಿಲು ತೆರೆದಿದೆ ಎಂದ ಒಮರ್ ಅಬ್ದುಲ್ಲಾ.

ನ್ಯಾಷನಲ್ ಕಾನ್ಫರೆನ್ಸ್ ಇನ್ನೂ ಇಂಡಿಯಾ ಒಕ್ಕೂಟದಲ್ಲೇ ಇದೆ: ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ

Updated on: Feb 15, 2024 | 9:03 PM

ದೆಹಲಿ ಫೆಬ್ರುವರಿ 15: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok sabha Election) ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂಬ ಎನ್‌ಸಿ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿಕೆಯ ನಂತರ ನ್ಯಾಷನಲ್ ಕಾನ್ಫರೆನ್ಸ್ (National Conference ) ನಾಯಕ ಒಮರ್ ಅಬ್ದುಲ್ಲಾ (Omar Abdullah) ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಇನ್ನೂ ಇಂಡಿಯಾ ಬ್ಲಾಕ್‌ನ ಭಾಗವಾಗಿದೆ. ಬಿಜೆಪಿಯನ್ನು ಸೋಲಿಸುವುದು ಈ ಬಣದ ಮುಖ್ಯ ಉದ್ದೇಶ ಎಂದು ಒಮರ್ ಅಬ್ದುಲ್ಲಾ ಹೇಳಿದರು.

ನಾವು ಇಂಡಿಯಾ ಒಕ್ಕೂಟದ ಭಾಗವಾಗಿದ್ದೇವೆ ಮತ್ತು ನಾವು ಈಗಲೂ ಇದ್ದೇವೆ. ಬೇರೆ ಯಾವುದೇ ಅರ್ಥದಲ್ಲಿ ಇದನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ . ಬಿಜೆಪಿಯನ್ನು ಸೋಲಿಸುವುದು ಗುಂಪಿನ ಮುಖ್ಯ ಉದ್ದೇಶ. ಏಕೆಂದರೆ ಎರಡು ದೋಣಿಗಳಲ್ಲಿ ಪ್ರಯಾಣ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿನ ಆರು ಲೋಕಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಪಕ್ಷವು ಕಾಂಗ್ರೆಸ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಎನ್‌ಸಿ ನಾಯಕ ಹೇಳಿದ್ದಾರೆ.


“ಎನ್‌ಸಿ ಕಾರ್ಯಕರ್ತರು ಎಲ್ಲಾ ಆರು ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಾರೆ ಆದರೆ ಸತ್ಯವೆಂದರೆ ಕೆಲವೊಮ್ಮೆ ದೊಡ್ಡ ಉದ್ದೇಶಕ್ಕಾಗಿ, ಸಣ್ಣ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಬಿಜೆಪಿಯಿಂದ ಮತ್ತೆ ಸ್ಥಾನಗಳನ್ನು ಗೆಲ್ಲುವುದು ದೊಡ್ಡ ಉದ್ದೇಶವಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುವುದು ಅಗತ್ಯವಾಗಿದೆ. ನಮ್ಮ ಬಾಗಿಲು ತೆರೆದಿದೆ ಎಂದು ಅವರು ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಸ್ವತಂತ್ರವಾಗಿ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು. “ಸೀಟು ಹಂಚಿಕೆಗೆ ಸಂಬಂಧಿಸಿದಂತೆ, ಎನ್‌ಸಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಮತ್ತು ಅದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಹೇಳಿಕೆ ನೀಡಿದ್ದಾರೆ.

ಆಪಾದಿತ ಕ್ರಿಕೆಟ್ ಹಗರಣಕ್ಕೆ ಸಂಬಂಧಿಸಿದಂತೆ ಎನ್‌ಸಿ ನಾಯಕನಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದ ಕೆಲವು ದಿನಗಳ ನಂತರ ಈ ಪ್ರಕಟಣೆ ಬಂದಿದೆ. “ನಾನು ಇಡಿ ಸ್ಕ್ಯಾನರ್‌ನಲ್ಲಿದ್ದೇನೆ, ನಾನು ಅವರ ಮುಂದೆ ಹಾಜರಾಗುತ್ತೇನೆ, ನಾನು ಇಡಿ ಅಥವಾ ಬೇರೆ ಯಾರಿಗಾದರೂ ಹೆದರುವುದಿಲ್ಲ, ಅವರು ಏನು ಬೇಕಾದರೂ ಮಾಡಲಿ. ಫಾರೂಕ್ ಅಬ್ದುಲ್ಲಾ ಅವರನ್ನು ಜೈಲಿಗೆ ಹಾಕುವ ಮೂಲಕ ನ್ಯಾಷನಲ್ ಕಾನ್ಫರೆನ್ಸ್ ನ್ನು ಮುಗಿಸಬಹುದು ಎಂದು ಅವರು ಭಾವಿಸಿದರೆ, ಅದು ಆಗುವುದಿಲ್ಲ. ಏಕೆಂದರೆ ನ್ಯಾಷನಲ್ ಕಾನ್ಫರೆನ್ಸ್ ಒಂದು ಆಂದೋಲನವಾಗಿದ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election: ಇಂಡಿಯಾ ಒಕ್ಕೂಟಕ್ಕೆ ಮತ್ತೊಂದು ಶಾಕ್, ಫಾರೂಕ್ ಅಬ್ದುಲ್ಲಾರ ಪಕ್ಷ ಜಮ್ಮು ಕಾಶ್ಮೀರದಿಂದ ಸ್ವತಂತ್ರ ಸ್ಪರ್ಧೆ

ಬಾರಾಮುಲ್ಲಾ, ಶ್ರೀನಗರ, ಅನಂತನಾಗ್, ಜಮ್ಮು, ಉಧಮ್‌ಪುರ್ ಮತ್ತು ಲಡಾಖ್, ಜಮ್ಮು ಮತ್ತು ಕಾಶ್ಮೀರದ ಯುಟಿ ಮತ್ತು ಲಡಾಖ್‌ನಲ್ಲಿರುವ ಲೋಕಸಭಾ ಸ್ಥಾನಗಳು. ಇವುಗಳಲ್ಲಿ ಕಣಿವೆಯ ಮೂರು ಸ್ಥಾನಗಳು ಬಾರಾಮುಲ್ಲಾ, ಶ್ರೀನಗರ ಮತ್ತು ಅನಂತನಾಗ್ – ಎನ್‌ಸಿ ಬಳಿ ಇವೆ. ಉಳಿದವುಗಳಲ್ಲಿ ಬಿಜೆಪಿ ಇದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Thu, 15 February 24